ETV Bharat / science-and-technology

ಕ್ಷೀರಪಥವು ಭೂಮಿಯಂತೆ ಸಾಗರ, ಖಂಡಗಳನ್ನು ಹೊಂದಿರುವಂತಹ ಗ್ರಹಗಳ ಸಮೂಹವಾಗಿರಬಹುದು!

author img

By

Published : Feb 24, 2021, 3:32 PM IST

Updated : Feb 24, 2021, 4:56 PM IST

ಕಂಪ್ಯೂಟರ್ ಮಾದರಿಯನ್ನು ಬಳಸಿಕೊಂಡು, ಆಂಡರ್ಸ್ ಜೋಹಾನ್ಸೆನ್ ಮತ್ತು ಅವರ ತಂಡವು ಎಷ್ಟು ಬೇಗನೆ ಗ್ರಹಗಳು ರೂಪುಗೊಳ್ಳುತ್ತವೆ ಮತ್ತು ಯಾವ ಬಿಲ್ಡಿಂಗ್ ಬ್ಲಾಕ್‌ಗಳು ಬೇಕು ಎಂದು ಲೆಕ್ಕಹಾಕಿದೆ. ಇದು ಮಂಜುಗಡ್ಡೆ ಮತ್ತು ಇಂಗಾಲ, ಮಿಲಿಮೀಟರ್ ಗಾತ್ರದ ಧೂಳಿನ ಕಣಗಳು ಕಲ್ಲು ಮಣ್ಣು ಹೊಂದಿರುವ ಘಟಕಗಳಾಗಿರಬಹುದು ಎಂದು ಅಧ್ಯಯನ ಕಂಡುಕೊಂಡಿದೆ. ಇದು ಮಿಲ್ಕಿ ವೇನ ಎಲ್ಲ ನಕ್ಷತ್ರಗಳ ಸುತ್ತಲೂ ಪರಿಭ್ರಮಿಸುತ್ತದೆ ಎಂದು ತಿಳಿದು ಬಂದಿದೆ.

The Milky Way may be swarming with planets with  oceans and continents like here on Earth
ಮಿಲ್ಕಿ ವೇ ಭೂಮಿಯಂತೆ ಸಾಗರ, ಖಂಡಗಳನ್ನು ಹೊಂದಿರುವ ಗ್ರಹಗಳ ಸಮೂಹ

ಕೋಪನ್ ಹೇಗನ್​ (ಡೆನ್ಮಾರ್ಕ್): ಕೋಪನ್​ ಹೇಗನ್ ವಿಶ್ವವಿದ್ಯಾಲಯದ ಹೊಸ ಅಧ್ಯಯನದ ಪ್ರಕಾರ, ಮಂಜು ಮತ್ತು ಇಂಗಾಲಗಳ ಸಣ್ಣ ಧೂಳಿನ ಕಣಗಳಿಂದ ಭೂಮಿ, ಶುಕ್ರ ಮತ್ತು ಮಂಗಳ ಗ್ರಹ ರಚನೆಗೊಂಡಿವೆ ಎಂದು ತಿಳಿದು ಬಂದಿದೆ. ಹೀಗಾಗಿ ಮಿಲ್ಕಿ ವೇ ನಲ್ಲಿಯೂ ನೀರು ಇರುವ ಗ್ರಹಗಳು ಇರಬಹುದು ಎನ್ನುವ ಭರವಸೆ ವ್ಯಕ್ತವಾಗಿದೆ.

ವಿಶಾಲವಾದ ಬ್ರಹ್ಮಾಂಡದಲ್ಲಿ ಇನ್ನೂ ಕೆಲ ಗ್ರಹಗಳಲ್ಲಿ ನಾಗರಿಕತೆಗಳು ಇರಬಹುದು ಎಂಬುದನ್ನು ಕಂಡು ಹಿಡಿಯಲು ಸಂಶೋಧನೆಗಳನ್ನು ನಡೆಯುತ್ತಲೇ ಇವೆ. ಆದರೆ, ಇಂತಹ ನಾಗರಿಕತೆಗಳನ್ನು ಕಂಡು ಹಿಡಿಯುವುದು ಅಸಾಧ್ಯವಾಗಿ ಪರಿಣಮಿಸಿದೆ. ಭೂಮಿ ಸೃಷ್ಟಿಯಾದಾಗ ಯಾವುದೋ ಒಂದು ದೊಡ್ಡ ನೀರು ತುಂಬಿದ ಧೂಮಕೇತು ಭೂಮಿಗೆ ಅಪ್ಪಳಿಸಿ ಇಲ್ಲಿ ನೀರು ಸಂಗ್ರಹವಾಗಿರಬಹುದು ಎಂಬ ವಾದಗಳು ಇಷ್ಟಕ್ಕೆಲ್ಲ ಕಾರಣವಾಗಿದೆ.

ನಮ್ಮ ಎಲ್ಲ ಮಾಹಿತಿಯು ಮೊದಲಿನಿಂದಲೂ ಭೂಮಿ ಕಲ್ಲು ಮಣ್ಣು ಹಾಗೂ ನೀರಿನಿಂದ ಆವೃತವಾದ ಒಂದು ಮೂಲ ಪ್ರದೇಶ ಎಂಬುದನ್ನ ಸೂಚಿಸುತ್ತಿದೆ. ಹಾಗಾಗಿ ಕ್ಷೀರಪಥ ಎಂದು ಕರೆಸಿಕೊಳ್ಳುವ ಹಲವು ನಕ್ಷತ್ರಗಳ ಆವಾಸ ಸ್ಥಾನವಾಗಿರುವ ನಮ್ಮ ಕ್ಷೀರ ಪಥದಲ್ಲಿರುವ ಎಲ್ಲ ಗ್ರಹಗಳಲ್ಲಿ ನೀರು, ಇಂಗಾಲ, ಬೆಣಚು ಕಲ್ಲು ಸೇರಿದಂತೆ ಜೀವ ಸಂಕುಲಕ್ಕೆ ಬೇಕಾದ ಎಲ್ಲ ಆಕರಗಳು ಇರಬಹುದೆಂದು ಅಧ್ಯಯನಗಳು ಊಹಿಸಿವೆ. ಹೀಗಾಗಿ ಆಯಾಯ ನಕ್ಷತ್ರಗಳಲ್ಲಿ ಇರುವ ಗ್ರಹಗಳು ಅವುಗಳ ದೂರಕ್ಕೆ ಅನುಗುಣವಾಗಿ ಜೀವ ಸಂಕುಲಕ್ಕೆ ಬೇಕಾದ ನೀರು, ಕಲ್ಲು ಮಣ್ಣು, ಇಂಗಾಲ, ಆಮ್ಲಜನಕಗಳನ್ನು ಒಳಗೊಂಡ ಆಕರಗಳನ್ನು ಹೊಂದಿರಬಹುದು ಎಂದು ಸೆಂಟರ್​ ಫಾರ್​ ಸ್ಟಾರ್​ ಅಂಡ್​ ಪ್ಲಾನೆಟ್​ ಪಾರ್ಮೆಷನ್​ ಸೆಂಟರ್​​​ನ ಪ್ರೊಪೆಸರ್​ ಆ್ಯಂಡರ್ಸ್​ ಜಾನ್ಸನ್​​ ಹೇಳಿದ್ದಾರೆ. ಇವರು ಜರ್ನಲ್​ ಸೈನ್ಸ್​ ಅಡ್ವಾನ್ಸ್​​​​ನಲ್ಲಿ ಈ ಬಗ್ಗೆ ತಮ್ಮ ವಾದವನ್ನ ಮಂಡಿಸಿದ್ದಾರೆ.

ಇದನ್ನೂ ಓದಿ: ಎಐಎಡಿಎಂಕೆ ಹಾಗೂ ಎಎಂಎಂಕೆ ಪಕ್ಷಗಳು ವಿಲೀನಗೊಳ್ಳಬೇಕು : ಜಯಲಲಿತಾ ಆಪ್ತೆ ಶಶಿಕಲಾ ಮನದಿಂಗಿತ


ಕಂಪ್ಯೂಟರ್ ಮಾದರಿಯನ್ನು ಬಳಸಿಕೊಂಡು, ಆಂಡರ್ಸ್ ಜೋಹಾನ್ಸೆನ್ ಮತ್ತು ಅವರ ತಂಡವು, ಗ್ರಹಗಳ ಹುಟ್ಟು ಹಾಗೂ ಅವುಗಳ ಬೆಳವಣಿಗೆ, ಕಲ್ಲು ಮಣ್ಣುಗಳು ರಚನೆ ಆಗಿರುವ ಬಗ್ಗೆ ಅಂಕಿ - ಅಂಶಗಳ ಸಮೇತ ಅಧ್ಯಯನ ನಡೆಸಿದೆ. ಗ್ರಹಗಳಲ್ಲಿ ಮಿಲಿಮಿಟರ್​​​ ಘಾತ್ರದಲ್ಲಿ ತುಂಬಿಕೊಂಡಿರುವ ಧೂಳಿನ ಕಣಗಳು ಹಾಗೂ ಮಂಜುಗಡ್ಡೆ ಮತ್ತು ಕಾರ್ಬನ್​ ಅಂಶಗಳ ಬಗ್ಗೆ ನಿಖರವಾಗಿ ಅಧ್ಯಯನ ಮಾಡಿ ಗುರುತಿಸಲಾಗಿದೆ. ಕ್ಷೀರಪಥದಲ್ಲಿನ ಎಲ್ಲಾ ಯುವ ನಕ್ಷತ್ರಗಳ ಸುತ್ತ ಇಂತಹ ವಾತಾವರಣ ಹೊಂದಿರುವ ಗ್ರಹಗಳು ಪರಿಭ್ರಮಿಸುತ್ತಿವೆ. ನೀರಿನ ಅಂಶ ಹಾಗೂ ಜೀವಿಗಳು ವಾಸಿಸುವ ಭೂಮಿ 4.5 ಬಿಲಿಯನ್​ ವರ್ಷಗಳ ಹಿಂದೆ ಸೃಷ್ಟಿಯಾಗಿರಬಹುದು ಎಂದು ಈ ಸಂಶೋಧಕರು ಅಂದಾಜಿಸಿದ್ದಾರೆ.

'ಪೆಬ್ಬಲ್ ಅಕ್ರಿಶನ್' ಎಂದು ಕರೆಯಲ್ಪಡುವ ಸಿದ್ಧಾಂತದ ಪ್ರಕಾರ, ಗ್ರಹಗಳು ಒಟ್ಟಿಗೆ ಅಂಟಿಕೊಂಡಿರುವ ಬೆಣಚುಕಲ್ಲುಗಳಿಂದ ರೂಪುಗೊಳ್ಳುತ್ತವೆ. ನಂತರ ಗ್ರಹಗಳು ದೊಡ್ಡದಾಗಿ ಬೆಳೆಯುತ್ತವೆ. ನಮ್ಮ ನಕ್ಷತ್ರಪುಂಜದಲ್ಲಿ ಎಲ್ಲೆಡೆ ಕಂಡುಬರುವ ನೀರಿನ ಅಣು H2O ಎಂದು ಆಂಡರ್ಸ್ ಜೋಹಾನ್ಸೆನ್ ವಿವರಿಸಿದ್ದಾರೆ. ಆದ್ದರಿಂದ, ಇತರ ಗ್ರಹಗಳು ಭೂಮಿ, ಮಂಗಳ ಮತ್ತು ಶುಕ್ರಗಳಂತೆಯೇ ರೂಪುಗೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಿದ್ದಾರೆ.

Last Updated : Feb 24, 2021, 4:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.