ETV Bharat / science-and-technology

ಟ್ವಿಟರ್​ನ ಸ್ಥಿತಿ ತೀರಾ ನಿರಾಶಾದಾಯಕ: ಸಬ್‌ಸ್ಟ್ಯಾಕ್ ಸಿಇಒ ಹೇಳಿಕೆ

author img

By

Published : Apr 10, 2023, 12:46 PM IST

ಸಬ್​ಸ್ಟ್ಯಾಕ್ ನ್ಯೂಸ್​ ಲೆಟರ್​ ಕಂಪನಿಯ ಹೆಸರು ಅಥವಾ ಲಿಂಕ್ ಇರುವ ಯಾವುದೇ ಟ್ವೀಟ್ ಅನ್ನು ಲೈಕ್ ಮಾಡಲು ಅಥವಾ ರಿಟ್ವೀಟ್​ ಮಾಡಲು ಸಾಧ್ಯವಾಗದಂತೆ ಟ್ವಿಟರ್​ ನಿರ್ಬಂಧಿಸಿದೆ. ಟ್ವಿಟರ್​ನ ಈ ಕ್ರಮಕ್ಕೆ ಸಬ್​ಸ್ಟ್ಯಾಕ್​ ಸಿಇಪ ಕ್ರಿಸ್ ಬೆಸ್ಟ್​ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Substack CEO Chris Best criticize twitter ceo Elon Musk
Substack CEO Chris Best criticize twitter ceo Elon Musk

ಸ್ಯಾನ್ ಫ್ರಾನ್ಸಿಸ್ಕೋ : ಸಬ್​ಸ್ಟ್ಯಾಕ್ (Substack) ಎಂಬ ಶಬ್ದ ಇರುವ ಯಾವುದೇ ಟ್ವೀಟ್​ ಅನ್ನು ಲೈಕ್ ಮಾಡುವ ಅಥವಾ ರಿಟ್ವೀಟ್​ ಮಾಡುವ ಸೌಲಭ್ಯವನ್ನು ಬ್ಲಾಕ್ ಮಾಡಿರುವ ಟ್ವಿಟರ್​ ಕ್ರಮಕ್ಕೆ ಪ್ರತಿಕ್ರಿಯೆ ನೀಡಿರುವ ಸಬ್‌ಸ್ಟ್ಯಾಕ್, ಟ್ವಿಟರ್​ನ ಪರಿಸ್ಥಿತಿ ತುಂಬಾ ನಿರಾಶಾದಾಯಕವಾಗಿದೆ ಎಂದು ಹೇಳಿದೆ. ಸಬ್‌ಸ್ಟ್ಯಾಕ್ ಇದು ಪಾವತಿ ಮಾಡಿ ಪಡೆದುಕೊಳ್ಳುವ ಜನಪ್ರಿಯ ನ್ಯೂಸ್​ಲೆಟರ್ ಪ್ಲಾಟ್​ಫ್ಲಾರ್ಮ್ ಆಗಿದೆ.

ಟ್ವಿಟರ್ ಸಿಇಒ ಎಲೋನ್ ಮಸ್ಕ್ ಅವರಿಗೆ ಪ್ರತಿಕ್ರಿಯೆ ನೀಡಿರುವ ಸಬ್‌ಸ್ಟ್ಯಾಕ್ ಸಿಇಒ ಕ್ರಿಸ್ ಬೆಸ್ಟ್​, ಮಸ್ಕ್ ಅವರ ಯಾವುದೇ ಆರೋಪಗಳು ನಿಜವಲ್ಲ ಮತ್ತು ಸಬ್‌ಸ್ಟ್ಯಾಕ್ ಲಿಂಕ್‌ಗಳನ್ನು ಟ್ವಿಟರ್‌ನಲ್ಲಿ ನಿರ್ಬಂಧಿಸಲಾಗಿದೆ ಎಂದಿದ್ದಾರೆ. ನಾವು ಬರಹಗಾರರಿಗೆ ಸಹಾಯ ಮಾಡಲು ವರ್ಷಗಳಿಂದ Twitter API ಅನ್ನು ಬಳಸಿದ್ದೇವೆ. ನಾವು ನಿಯಮಗಳನ್ನು ಪಾಲಿಸಿದ್ದೇವೆ ಎಂಬು ನಂಬಿದ್ದೇವೆ. ಆದಾಗ್ಯೂ ಯಾವುದೇ ನಿರ್ದಿಷ್ಟ ನಿಯಮ ಉಲ್ಲಂಘನೆಯ ವಿಷಯ ಇದ್ದರೆ ನಾವು ಅದನ್ನು ತಿಳಿಯಲು ಇಷ್ಟಪಡುತ್ತೇವೆ. ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ನಾವು ಸಂತೋಷಪಡುತ್ತೇವೆ ಬೆಸ್ಟ್, ಮಸ್ಕ್​​ಗೆ ಪ್ರತಿಕ್ರಿಯಿಸಿದ್ದಾರೆ.

ಆನ್‌ಲೈನ್ ಪಬ್ಲಿಷಿಂಗ್ ಪ್ಲಾಟ್‌ಫಾರ್ಮ್ ಸಬ್‌ಸ್ಟ್ಯಾಕ್‌ನಲ್ಲಿನ ಪೋಸ್ಟ್‌ಗಳಲ್ಲಿ ಟ್ವೀಟ್‌ಗಳನ್ನು ಎಂಬೆಡಿಂಗ್ ಮಾಡಲಾಗದಂತೆ ನಿರ್ಬಂಧಿಸಲಾಗಿದೆ ಎಂಬ ಆರೋಪಗಳನ್ನು ಮಸ್ಕ್ ಕಳೆದ ವಾರ ನಿರಾಕರಿಸಿದ್ದರು. ಟ್ವಿಟರ್ ಫೈಲ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಪ್ರಖ್ಯಾತರಾಗಿರುವ ಸ್ವತಂತ್ರ ಪತ್ರಕರ್ತ ಮತ್ತು ಲೇಖಕ ಮ್ಯಾಟ್ ತೈಬ್ಬಿ ಅವರು ಈ ಹಿಂದೆ ಸಬ್‌ಸ್ಟಾಕ್‌ನ ಉದ್ಯೋಗಿಯಾಗಿದ್ದರು ಎಂದು ಟ್ವಿಟರ್ ಸಿಇಒ ಪೋಸ್ಟ್ ಮಾಡಿದ್ದಾರೆ. ಮ್ಯಾಟ್ ತೈಬ್ಬಿ ಸಬ್‌ಸ್ಟಾಕ್​ನಲ್ಲಿ ಬರೆಯುತ್ತಾರೆ ಮತ್ತು ಓದುಗರಿಂದ ನೇರವಾಗಿ ಹಣ ಪಡೆಯುತ್ತಾರೆ. ಇದು ಬರಹಗಾರರು ಹಣ ಸಂಪಾದಿಸುವ ವಿಚಿತ್ರ ಪರಿಕಲ್ಪನೆಯಾಗಿದೆ ಎಂದು ಮಸ್ಕ್ ಹೇಳಿದ್ದರು.

ಇದು ತುಂಬಾ ನಿರಾಶಾದಾಯಕವಾಗಿದೆ. ಸಬ್‌ಸ್ಟ್ಯಾಕ್‌ನೊಂದಿಗೆ ವಿವಾದ ಇರುವುದು ಒಂದು ವಿಷಯ. ಆದರೆ ಬರಹಗಾರರನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ ಎಂದು ಬೆಸ್ಟ್ ಹೇಳಿದರು. ಸಬ್​ಸ್ಟ್ಯಾಕ್ ಪೋಸ್ಟ್​ಗಳ ಲಿಂಕ್ ಇರುವ ಟ್ವೀಟ್​ಗಳು ಕಾಣದಂತೆ ಟ್ವಿಟರ್​ ನಿರ್ಬಂಧ ವಿಧಿಸಿದೆ. ಟ್ವಿಟರ್​ನ ಈ ಕ್ರಮದಿಂದ ಹಲವಾರು ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ನ್ಯೂಸ್​ಲೆಟರ್​ಗಳನ್ನು ಪ್ರಮೋಟ್ ಮಾಡಲು ಸಬ್​ಸ್ಟ್ಯಾಕ್ ಬರಹಗಾರರು ಟ್ವಿಟರ್​ ಅನ್ನು ಬಳಸುತ್ತಿದ್ದರು. ಆದರೆ, ಟ್ವಿಟರ್​ನಲ್ಲಿನ ಬದಲಾವಣೆಗಳ ಕಾರಣದಿಂದ ಸಬ್​ಸ್ಟ್ಯಾಕ್ ಬರಹಗಾರರಿಗೆ ವಿಪರೀತ ತೊಂದರೆಯಾಗುತ್ತಿದೆ.

ಸಬ್‌ಸ್ಟಾಕ್ ಎಂಬುದು ಇಮೇಲ್ ಸುದ್ದಿಪತ್ರ ವೇದಿಕೆಯಾಗಿದೆ. ಇದರ ಸರಳ ಇಂಟರ್ಫೇಸ್ ಮತ್ತು ವೆಬ್‌ನಲ್ಲಿ ಪೋಸ್ಟ್‌ಗಳನ್ನು ಪ್ರಕಟಿಸುವ (ಮತ್ತು ಹಣಗಳಿಸುವ) ಸಾಮರ್ಥ್ಯವು ಯಾವುದೇ ಕೌಶಲ್ಯ ಮಟ್ಟದ ಬರಹಗಾರರಿಗೆ ಬಹಳ ಉಪಯುಕ್ತವಾಗಿದೆ. ಸಬ್‌ಸ್ಟಾಕ್ ಅಮೇರಿಕನ್ ಆನ್‌ಲೈನ್ ಪ್ಲಾಟ್‌ಫಾರ್ಮ್ ಆಗಿದ್ದು ಅದು ಚಂದಾದಾರಿಕೆ ಆಧರಿತ ನ್ಯೂಸ್​ಲೆಟರ್​ಗಳನ್ನು ಬೆಂಬಲಿಸಲು ಪ್ರಕಟಣೆ, ಪಾವತಿ, ವಿಶ್ಲೇಷಣೆ ಮತ್ತು ವಿನ್ಯಾಸ ಮೂಲಸೌಕರ್ಯವನ್ನು ಒದಗಿಸುತ್ತದೆ. ಬರಹಗಾರರು ತಮ್ಮ ನ್ಯೂಸ್​ ಲೆಟರ್​ಗಳನ್ನು ನೇರವಾಗಿ ಚಂದಾದಾರರಿಗೆ ಕಳುಹಿಸಲು ಇದು ಅನುವು ಮಾಡಿಕೊಡುತ್ತದೆ. 2017 ರಲ್ಲಿ ಸ್ಥಾಪನೆಯಾದ ಸಬ್‌ಸ್ಟಾಕ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.

ಇದನ್ನೂ ಓದಿ : ಇಂಟರ್ನೆಟ್​ ಸೌಲಭ್ಯ ಮೂಲಭೂತ ಮಾನವ ಹಕ್ಕಾಗಲಿ: ಅಧ್ಯಯನದಲ್ಲಿ ಪ್ರತಿಪಾದನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.