ETV Bharat / science-and-technology

Chandrayaan-3: ಶಿವಶಕ್ತಿ ಪಾಯಿಂಟ್​ನಲ್ಲಿ 3x4 ವ್ಯಾಸದ ಕುಳಿ ಚಿತ್ರ ಕಳುಹಿಸಿದ ರೋವರ್​.. ಪಥ ಬದಲಿಸಿ ಅಧ್ಯಯನ ಮುಂದುವರಿಕೆ

author img

By ETV Bharat Karnataka Team

Published : Aug 28, 2023, 7:39 PM IST

ಶಿವಶಕ್ತಿ ಪಾಯಿಂಟ್​ನ ಸುತ್ತಲೂ ಸಂಚರಿಸುತ್ತಿರುವ ರೋವರ್​ಗೆ ದೊಡ್ಡ ಕುಳಿ ಅಡ್ಡ ಬಂದಿತ್ತು. ಬಳಿಕ ಪಥ ಬದಲಿಸಿದ ಪ್ರಜ್ಞಾನ್​ ಅದರ ಚಿತ್ರವನ್ನು ಭೂಮಿಗೆ ಕಳುಹಿಸಿದೆ. ಇದರ ಫೋಟೋಗಳನ್ನು ಇಸ್ರೋ ಹಂಚಿಕೊಂಡಿದೆ.

ರೋವರ್
ರೋವರ್

ಬೆಂಗಳೂರು​: ಚಂದ್ರನ ಶಿವಶಕ್ತಿ ಪಾಯಿಂಟ್​ ಸುತ್ತಲೂ ಅಧ್ಯಯನ ಆರಂಭಿಸಿರುವ ಪ್ರಜ್ಞಾನ್​ ರೋವರ್​ ದೊಡ್ಡ ಕುಳಿಯನ್ನು ಗುರುತಿಸಿದೆ. 8 ಮೀಟರ್ ದೂರದ ಸಂಚಾರದಲ್ಲಿ ಮಾರ್ಗ ಮಧ್ಯೆ ಕುಳಿಯೊಂದು ಬಂದಿದ್ದು, ನೇರವಾಗಿ ಚಲಿಸುವ ಬದಲು ಅಲ್ಲಿಂದ ಪಕ್ಕಕ್ಕೆ ಸರಿದು ಪ್ರಯೋಗ ಮುಂದುವರಿಸಿದೆ. ಶಶಿಯ ಈ ಕುಳಿ 3x4 ವ್ಯಾಸ ಹೊಂದಿದೆ ಎಂದು ಇಸ್ರೋ ತಿಳಿಸಿದೆ. ಆಗಸ್ಟ್ 27 ರಂದು ರೋವರ್​ ಈ ಕುಳಿಯ ಸಮೀಪ ಸಾಗಿದೆ. ಬಳಿಕ ಹೊಸ ಮಾರ್ಗವನ್ನು ಆಯ್ದುಕೊಂಡು ಸುರಕ್ಷಿತವಾಗಿ ಮುಂದೆ ಸಾಗುತ್ತಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ರೋವರ್​ ಸಾಗಿರುವ ಹಾದಿಯಲ್ಲಿ ಮೂಡಿರುವ ಗುರುತು ಮತ್ತು ದೊಡ್ಡ ಕುಳಿಯನ್ನು ಅದರಲ್ಲಿರುವ ನ್ಯಾವಿಗೇಷನ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದರ ಎರಡು ಚಿತ್ರಗಳನ್ನು ಇಸ್ರೋ ಸಾಮಾಜಿಕ ಮಾಧ್ಯಮವಾದ ಎಕ್ಸ್​ನಲ್ಲಿ (ಹಿಂದಿನ ಟ್ವಿಟರ್​) ಹಂಚಿಕೊಂಡಿದೆ.

  • Chandrayaan-3 Mission:

    On August 27, 2023, the Rover came across a 4-meter diameter crater positioned 3 meters ahead of its location.
    The Rover was commanded to retrace the path.

    It's now safely heading on a new path.#Chandrayaan_3#Ch3 pic.twitter.com/QfOmqDYvSF

    — ISRO (@isro) August 28, 2023 " class="align-text-top noRightClick twitterSection" data=" ">

ತಾಪಮಾನ ಅಳೆದ ರೋವರ್​: ನಿನ್ನೆ(ಆಗಸ್ಟ್​ 27) ಯಷ್ಟೇ ಚಂದ್ರನ ಮೇಲ್ಮೈ ಮತ್ತು ಮಣ್ಣಿನ ಆಳದಲ್ಲಿನ ತಾಪಮಾನವನ್ನು ಅಳೆದು ಭೂಮಿಗೆ ರವಾನಿಸಿತ್ತು. ಚಂದ್ರನ ಮಣ್ಣಿನ 10 ಸೆಂ.ಮೀ ಆಳದಲ್ಲಿ -10 ಡಿಗ್ರಿ ಸೆಲ್ಸಿಯಸ್ ತಾಪ ಇದೆ ಎಂದು ಗುಣಿಸಿ ಹೇಳಿತ್ತು. ಈ ಮೂಲಕ ಚಂದ್ರಯಾನ-3 ಯೋಜನೆಯ ಮೂರನೇ ಉದ್ದೇಶವೂ ಸಫಲತೆ ಕಂಡಿತ್ತು.

ಆಗಸ್ಟ್​ 23 ರಂದು ಲ್ಯಾಂಡರ್​ ಚಂದ್ರನ ಮೇಲೆ ಇಳಿದು ಮೊದಲ ಉದ್ದೇಶ ಪೂರ್ಣಗೊಂಡಿತ್ತು. ಬಳಿಕ ಅದರಲ್ಲಿನ ಪ್ರಜ್ಞಾನ್​ ರೋವರ್​ ಸಂಚಾರ ಆರಂಭಿಸಿ ಎರಡನೇ ಉದ್ದೇಶವೂ ಸಾಕಾರವಾಗಿತ್ತು. ಮೂರನೇ ಮತ್ತು ಮುಖ್ಯ ಉದ್ದೇಶವಾದ ಅಲ್ಲಿನ ವಾತಾವರಣ ಅಧ್ಯಯನದ ಬಗ್ಗೆಯೂ ರೋವರ್​ ಕೆಲಸ ಮಾಡಿ, ವಿಜ್ಞಾನಿಗಳು ಅಂದುಕೊಂಡಂತೆ ಎಲ್ಲ ಕಾರ್ಯಗಳನ್ನೂ ಪೂರೈಸುತ್ತಿದೆ.

ಚಂದ್ರನ ಮೇಲ್ಮೈಯ 10 ಸೆಂಟಿ ಮೀಟರ್​ ಆಳದಲ್ಲಿ ತಾಪಮಾನ ಏರಿಳಿತಗಳನ್ನು ತಿಳಿಸುವ ಗ್ರಾಫ್ ಅನ್ನು ಇಸ್ರೋ ಹಂಚಿಕೊಂಡಿದೆ. 'ChaSTE' ಎಂಬ ಪೆಲೋಡ್​ (ಚಂದ್ರನ ಮೇಲ್ಮೈ ಥರ್ಮೋಫಿಸಿಕಲ್ ಅಧ್ಯಯನ) ಪ್ರಯೋಗ ನಡೆಸಿದ್ದು, ಧ್ರುವದಲ್ಲಿ ಚಂದ್ರನ ಮೇಲ್ಮಣ್ಣಿನ ತಾಪಮಾನವನ್ನು ಅಳೆದಿದೆ. ಇದರಿಂದಾಗಿ ಭೂಮಿಗಿಂತಲೂ ಚಂದ್ರಲೋಕ ಹೆಚ್ಚಿನ ಉಷ್ಣ ಹೊಂದಿದೆ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ.

ಪ್ರಧಾನಿ ಮೋದಿ ಘೋಷಣೆ: ಚಂದ್ರಯಾನ ಯೋಜನೆ ಯಶಸ್ವಿಯಾದ ಬಳಿಕ ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ ಅವರು, ಲ್ಯಾಂಡರ್​ ಇಳಿದ ಪ್ರದೇಶಕ್ಕೆ ಶಿವಶಕ್ತಿ ಪಾಯಿಂಟ್​ ಎಂದು ಹೆಸರು ಸೂಚಿಸಿದ್ದರು. ಅಲ್ಲದೇ, ಆಗಸ್ಟ್​ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವೆಂದು, 2019 ರಲ್ಲಿ ಕೈಗೊಂಡಿದ್ದ ಚಂದ್ರಯಾನ -2 ಯೋಜನೆಯ ನೌಕೆ ಪತನವಾದ ಸ್ಥಳಕ್ಕೆ ತಿರಂಗಾ ಎಂದು ಘೋಷಿಸಿದ್ದಾರೆ. ಇದಕ್ಕೆ ವಿಜ್ಞಾನಿಗಳೂ ಬೆಂಬಲ ನೀಡಿದ್ದಾರೆ.

ಇದನ್ನೂ ಓದಿ: ಇಸ್ರೋ ಮಹತ್ವದ ಘೋಷಣೆ: ಸೂರ್ಯನ ಅಧ್ಯಯನಕ್ಕೆ ಬಾಹ್ಯಾಕಾಶದಲ್ಲಿ ಆದಿತ್ಯ-L1 ವೀಕ್ಷಣಾಲಯ; ಸೆ.2ರಂದು ಉಡ್ಡಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.