ಭಾರತೀಯ ಗ್ರಾಹಕರಿಗೆ ಮೊಮೆಂಟಮ್ 4 ವೈರ್‌ಲೆಸ್​ ಹೆಡ್‌ಸೆಟ್ ಪರಿಚಯಿಸಿದ ಸೆನ್‌ಹೈಸರ್

author img

By

Published : Sep 15, 2022, 6:08 PM IST

premium-sennheiser-momentum-4-wireless-now-in-india

ಮೊಮೆಂಟಮ್ ಸರಣಿಯ ಹೆಡ್‌ಸೆಟ್ ವೇಗದ ಚಾರ್ಜಿಂಗ್ ಸಾಮರ್ಥ್ಯ ಹೊಂದಿದೆ. ಜೊತೆಗೆ 60 ಗಂಟೆಗಳ ಬ್ಯಾಟರಿ ಬಾಳಿಕೆ ಬರುತ್ತದೆ.

ನವದೆಹಲಿ: ಜರ್ಮನ್​​ನ ಆಡಿಯೊ ಬ್ರಾಂಡ್ ಸೆನ್‌ಹೈಸರ್ ಕಂಪನಿಯು ತನ್ನ ಮೊಮೆಂಟಮ್ ಸರಣಿಯ ಹೆಡ್‌ಸೆಟ್​ಗಳನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಗುರುವಾರ ಸುಧಾರಿತ ಅಡಾಪ್ಟಿವ್ ನಾಯ್ಸ್ ಕ್ಯಾನ್ಸಲೇಷನ್ (ANC) ಒಳಗೊಂಡ ಹೊಸ ಹೆಡ್‌ಫೋನ್ ಮೊಮೆಂಟಮ್ 4 ವೈರ್‌ಲೆಸ್​ ಹೆಡ್‌ಸೆಟ್ ಅನ್ನು ಭಾರತೀಯ ಗ್ರಾಹಕರಿಗೆ ಬಿಡುಗಡೆ ಮಾಡಿದೆ.

ಹೊಸದಾಗಿ ಬಿಡುಗಡೆಯಾದ ಈ ಹೆಡ್‌ಫೋನ್ ಸ್ಮಾರ್ಟ್ ಹಾಗೂ ಹೊಸ ಫೀಚರ್​ಗಳಿಂದ ಕೂಡಿದ್ದು, ಇದರ ಬೆಲೆಯು 34,990 ರೂಪಾಯಿ ಆಗಿದೆ. ಆಯ್ದ ಆನ್‌ಲೈನ್​ ಸೈಟ್​ಗಳಲ್ಲಿ ಮಾತ್ರ ಇದು ಮಾರಾಟಕ್ಕೆ ಲಭ್ಯವಿದೆ.

ಹೊಸ ಮೊಮೆಂಟಮ್ 4 ವೈರ್‌ಲೆಸ್ ಹೆಡ್‌ಸೆಟ್ ಉತ್ತಮ ಅನುಭವ ನೀಡುತ್ತದೆ. ಹೊಸ ಸೌಂಡ್ ವೈಶಿಷ್ಟ್ಯ ಹೊಂದಿದೆ. ಬಳಕೆದಾರರಿಗೆ ಸಂಗೀತವನ್ನು ಹಿಂದೆಂದಿಗಿಂತಲೂ ಆನಂದಿಸಲು ಅನುವು ಮಾಡಿಕೊಡುತ್ತದೆ.

ಈ ಹೆಡ್‌ಫೋನ್ ವೇಗದ ಚಾರ್ಜಿಂಗ್ ಸಾಮರ್ಥ್ಯ ಹೊಂದಿದೆ. ಜೊತೆಗೆ 60 ಗಂಟೆಗಳ ಬ್ಯಾಟರಿ ಬಾಳಿಕೆ ಬರುತ್ತದೆ. ಅಲ್ಲದೇ, ಕೇವಲ 10 ನಿಮಿಷಗಳ ಚಾರ್ಜಿಂಗ್​ ಮಾಡಿದರೂ ಆರು ಗಂಟೆಗಳ ಬಳಕೆ ಮಾಡಬಹುದಾಗಿದೆ ಎಂದು ಸೆನ್‌ಹೈಸರ್ ಕಂಪನಿಯ ಗ್ರಾಹಕ ವಿಭಾಗದ ನಿರ್ದೇಶಕ ಕಪಿಲ್ ಗುಲಾಟಿ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತೀಯ ಸೈಬರ್‌ಸ್ಪೇಸ್​ಗೆ ಹೊಸ ಮೊಬೈಲ್ ಬ್ಯಾಂಕಿಂಗ್ ವೈರಸ್ ಎಂಟ್ರಿ.. ಗ್ರಾಹಕರೇ ಎಚ್ಚರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.