ETV Bharat / science-and-technology

ಮಿಂಚಿನ ಸರಳುಗಳಂತೆ ಕಾಣಿಸಿಕೊಂಡ ಉಲ್ಕಾಪಾತ: ವಿಡಿಯೋ ವೈರಲ್

author img

By

Published : Apr 3, 2022, 7:22 AM IST

ಮಹಾರಾಷ್ಟ್ರದ ನಾಗಪುರ, ಅಮರಾವತಿ ಸೇರಿದಂತೆ ಕೆಲವೇ ಕೆಲವು ಪ್ರದೇಶಗಳಲ್ಲಿ ಉಲ್ಕಾಪಾತವಾಗಿದ್ದು, ಸಾಮಾನ್ಯ ಉಲ್ಕಾಪಾತಕ್ಕಿಂತ ಭಿನ್ನವಾಗಿ ಕಂಡುಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ವಿಡಿಯೋ ವೈರಲ್ ಆಗಿದೆ.

meteor-showers-were-seen-in-some-places-of-maharashtra
ಮಿಂಚಿನ ಸರಳುಗಳಂತೆ ಕಾಣಿಸಿಕೊಂಡ ಉಲ್ಕಾಪಾತ: ವಿಡಿಯೋ ವೈರಲ್

ಅಮರಾವತಿ(ಮಹಾರಾಷ್ಟ್ರ): ಶನಿವಾರ ರಾತ್ರಿ ಆಗಸದಲ್ಲಿ ವಿಸ್ಮಯ ಜರುಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಮಹಾರಾಷ್ಟ್ರದ ನಾಗಪುರ, ಅಮರಾವತಿ ಸೇರಿದಂತೆ ಕೆಲವೇ ಕೆಲವು ಪ್ರದೇಶಗಳಲ್ಲಿ ಉಲ್ಕಾಪಾತವಾಗಿದ್ದು, ಅರ್ಹಾದ್ ಗ್ರಾಮದ ರೈತ ಪ್ರಕಾಶ್ ಎಂಬಾತ ಮೊಬೈಲ್ ಕೆಮರಾದಲ್ಲಿ ಈ ದೃಶ್ಯ ಸೆರೆಹಿಡಿದಿದ್ದಾರೆ. ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಉಲ್ಕಾಪಾತಕ್ಕಿಂತ ಭಿನ್ನವಾಗಿ ಮತ್ತು ವಿಚಿತ್ರವಾಗಿ ಈ ಉಲ್ಕಾಪಾತ ಕಾಣಿಸಿಕೊಂಡಿರುವುದು ಜನರಲ್ಲಿ ಮತ್ತು ತಜ್ಞರಲ್ಲಿ ಅಚ್ಚರಿ ಉಂಟುಮಾಡಿದೆ.

ರಾತ್ರಿ ಸುಮಾರು 8 ಗಂಟೆಗೆ ಮೂರ್ನಾಲ್ಕು ಮಿಂಚಿನ ಸರಳುಗಳ ರೀತಿಯಲ್ಲಿ ಭಾಸವಾಗುವಂತೆ ಉಲ್ಕೆಗಳು ಕಾಣಿಸಿಕೊಂಡಿವೆ. ಇದು ಉಲ್ಕಾಪಾತವೆಂದು ಶ್ರೀ ಶಿವಾಜಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಡಾ.ಪಂಕಜ್ ನಾಗ್ಪುರೆ ಮತ್ತು ನಿವೃತ್ತ ಪ್ರಾಧ್ಯಾಪಕ ಡಾ.ಅನಿಲ್ ಅಸೋಲೆ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ. ಅಮರಾವತಿ ನಗರದ ಹಲವೆಡೆ ಈ ಉಲ್ಕೆಗಳು ಕಾಣಿಸಿಕೊಂಡಿವೆ. ನೆಲದ ಕಡೆಗೆ ಬಂದು ಉಲ್ಕೆಗಳು ಮಾಯವಾಗಿವೆ ಎಂದು ಅನಿಲ್ ಅಸೋಲೆ ವಿವರಿಸಿದ್ದಾರೆ. ನಾಗ್ಪುರದಲ್ಲಿಯೂ ಕೆಲವರು ಇಂತಹ ಸನ್ನಿವೇಶವನ್ನು ನೋಡಿರುವುದಾಗಿ ಹೇಳಿಕೊಂಡಿದ್ದಾರೆ. ವಿದರ್ಭ ಪ್ರದೇಶದಲ್ಲಿಯೂ ಇಂಥಹ ವಿಡಿಯೋಗಳು ವೈರಲ್ ಆಗುತ್ತಿವೆ ಎಂದು ತಿಳಿದುಬಂದಿದ್ದು ಸರ್ಕಾರ ಈ ಬಗ್ಗೆ ಏನನ್ನೂ ಹೇಳಿಲ್ಲ.

ಸಾಮಾನ್ಯವಾಗಿ ಪ್ರತಿವರ್ಷ ಏಪ್ರಿಲ್ 15ರಿಂದ ಏಪ್ರಿಲ್ 25ರವರಗೆ ಉಲ್ಕಾಪಾತವಾಗುತ್ತದೆ ಎಂದು ತಜ್ಞರು ಹೇಳುವ ಮಾತು. ಒಂದೊಂದೇ ನಕ್ಷತ್ರಗಳು ಭೂಮಿಯ ಕಡೆಗೆ ಬರುವಂತೆ ಸಾಮಾನ್ಯವಾಗಿ ಉಲ್ಕಾಪಾತ ಕಾಣಿಸಿಕೊಳ್ಳುತ್ತದೆ. ಆದರೆ ಈಗ ದೊಡ್ಡ ಆಕಾರದಲ್ಲಿ ನಿಗದಿತ ಸಮಯಕ್ಕೂ ಮುಂದೆಯೇ ಉಲ್ಕಾಪಾತ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಕೋವಿಡ್ ವಿರುದ್ಧ ಪ್ರತಿಕಾಯಗಳನ್ನು ಪರೀಕ್ಷಿಸಲು ಲಾಲಾರಸ ಆಧಾರಿತ ಪರೀಕ್ಷಾ ಕಿಟ್​ ತಯಾರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.