ETV Bharat / science-and-technology

ಗೂಗಲ್ ಫೋಟೋಸ್​ನಿಂದ GIF ಆ್ಯನಿಮೇಶನ್ ರಚಿಸುವುದು ಹೇಗೆ? ಇಲ್ಲಿದೆ ಗೈಡ್

author img

By ETV Bharat Karnataka Team

Published : Nov 30, 2023, 5:05 PM IST

ಗೂಗಲ್ ಫೋಟೋಸ್ ಆ್ಯಪ್ ಬಳಸಿ ಜಿಫ್ ಆ್ಯನಿಮೇಶನ್ ತಯಾರಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

How to create GIF animation from Google Photos
How to create GIF animation from Google Photos

ಹೈದರಾಬಾದ್​: ಜಿಐಎಫ್ ಅಥವಾ ಸಾಮಾನ್ಯವಾಗಿ ಜಿಫ್ (GIFs) ಎಂದು ಕರೆಯಲಾಗುವ ಸಣ್ಣ ಆ್ಯನಿಮೇಶನ್​ಗಳು ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯವಾಗಿವೆ. ಅನೇಕ ಫೋಟೊಗಳನ್ನು ಒಂದೆಡೆ ಸೇರಿಸಿ ಅವು ಚಿಕ್ಕ ವಿಡಿಯೋ ರೂಪದಲ್ಲಿ ಕಾಣಿಸುವಂತೆ ಮಾಡುವುದು ಜಿಫ್​ನ ವೈಶಿಷ್ಟ್ಯವಾಗಿದೆ. ವಾಟ್ಸ್​ಆ್ಯಪ್ ಸ್ಟೇಟಸ್​ ಅಥವಾ ಇನ್ನಿತರ ಸಾಮಾಜಿಕ ಮಾಧ್ಯಮಗಳಲ್ಲಿ ಈ ಜಿಫ್​ಗಳನ್ನು ಶೇರ್ ಮಾಡಬಹುದು.

ಗೂಗಲ್ ಫೋಟೋಸ್ ಆ್ಯಪ್ ಬಳಸಿ ಸುಲಭವಾಗಿ ಜಿಫ್ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ನಿಮ್ಮ ಆ್ಯಂಡ್ರಾಯ್ಡ್​ ಅಥವಾ ಐಒಎಸ್​ ಸ್ಮಾರ್ಟ್​ಫೋನ್​ಗಳಲ್ಲಿ ಜಿಫ್ ಆ್ಯನಿಮೇಶನ್ ಹೇಗೆ ರಚಿಸುವುದು ಎಂಬ ಮಾಹಿತಿ ಇಲ್ಲಿದೆ. ಗೂಗಲ್ ಫೋಟೋಸ್ ಅಪ್ಲಿಕೇಶನ್ ಅಥವಾ ಅದರ ವೆಬ್​ಸೈಟ್​ ಮೂಲಕ ಜಿಫ್​ಗಳನ್ನು ತಯಾರಿಸಬಹುದು.

ಗೂಗಲ್ ಪೋಟೋಸ್ ಆ್ಯಪ್​ನಿಂದ ಜಿಫ್ ರಚಿಸುವ ವಿಧಾನ:

  • ನಿಮ್ಮ ಮೊಬೈಲ್ ಸಾಧನದಲ್ಲಿ Google Photos ಅಪ್ಲಿಕೇಶನ್ ಓಪನ್ ಮಾಡಿ ಅಥವಾ ನಿಮ್ಮ ಕಂಪ್ಯೂಟರ್​​​​ನಲ್ಲಿ ಗೂಗಲ್ ಫೋಟೋಸ್ ವೆಬ್ ಸೈಟ್ ಗೆ ಹೋಗಿ.
  • ಈಗ Photos ಎಂಬುದನ್ನು ಆಯ್ಕೆ ಮಾಡಿ
  • ಇಲ್ಲಿ GIF ನಲ್ಲಿ ನೀವು ಸೇರಿಸಲು ಬಯಸುವ ಫೋಟೋಗಳು ಮತ್ತು ವಿಡಿಯೋಗಳನ್ನು ಆಯ್ಕೆಮಾಡಿ.
  • ಬಹು ಐಟಂಗಳನ್ನು ಆಯ್ಕೆ ಮಾಡಲು ಮೊಬೈಲ್ ನಲ್ಲಿ ಅವುಗಳನ್ನು ಟ್ಯಾಪ್ ಮಾಡಬಹುದು ಮತ್ತು ಹಿಡಿದಿಟ್ಟುಕೊಳ್ಳಬಹುದು ಅಥವಾ ಕಂಪ್ಯೂಟರ್​ನಲ್ಲಾದರೆ ಕ್ಲಿಕ್ ಮಾಡಿ ಎಳೆಯಬಹುದು.
  • ಈಗ ಆಲ್ಬಂ ರಚಿಸಿ (ಐಚ್ಛಿಕ)
  • ಜಿಫ್​ಗೆ ಆಯ್ಕೆ ಮಾಡುವ ಫೋಟೊ ಮತ್ತು ವಿಡಿಯೋಗಳನ್ನು ಒಂದೇ ಕಡೆ ಇಡಲು ನೀವು "+ Create" ಬಟನ್ ಟ್ಯಾಪ್ ಮಾಡುವ ಮೂಲಕ ಮತ್ತು "Album" ಆಯ್ಕೆ ಮಾಡುವ ಮೂಲಕ ಹೊಸ ಆಲ್ಬಮ್ ಒಂದನ್ನು ರಚಿಸಬಹುದು. ಈಗ ನಿಮಗೆ ಬೇಕಾದ ಫೋಟೊ ವಿಡಿಯೋಗಳನ್ನು ಇದರಲ್ಲಿ ಇಡಿ.
  • ಈಗ "+" ಮೇಲೆ ಟ್ಯಾಪ್ ಮಾಡಿ ಅಥವಾ create ಬಟನ್ ಕ್ಲಿಕ್ ಮಾಡಿ
  • ಮೊಬೈಲ್​ನಲ್ಲಾದರೆ, ಪರದೆಯ ಕೆಳಭಾಗದಲ್ಲಿರುವ "+" ಬಟನ್ ಅನ್ನು ಟ್ಯಾಪ್ ಮಾಡಿ. ವೆಬ್​ಸೈಟ್​ನಲ್ಲಾದರೆ "create" ಬಟನ್ ಕ್ಲಿಕ್ ಮಾಡಿ.
  • ಅನಿಮೇಷನ್ GIF ಆಯ್ಕೆಮಾಡಿ. ಈಗ ನಿಮ್ಮ ಜಿಫ್ ಫೈಲ್ ರಚನೆಯಾಗಲಾರಂಭಿಸುತ್ತದೆ.

ನಿಮ್ಮ GIF Edit ಮಾಡಿ: ಇಲ್ಲಿ, ನೀವು ನಿಮ್ಮ ಜಿಫ್ ಅನ್ನು ಕಸ್ಟಮೈಸ್ ಮಾಡಬಹುದು. ಪ್ರತಿ ಚಿತ್ರದ ಅವಧಿಯನ್ನು ಸರಿ ಹೊಂದಿಸಿ, ಪಠ್ಯವನ್ನು ಸೇರಿಸಿ, ಅಥವಾ ನಿಮ್ಮ GIF ಅನ್ನು ಆಕರ್ಷಕವಾಗಿ ಮಾಡಲು ಫಿಲ್ಟರ್​​ಗಳನ್ನು ಸೇರಿಸಬಹುದು. ಮೊಬೈಲ್ ಅಥವಾ ಕಂಪ್ಯೂಟರ್​ಗಳ ಭಿನ್ನತೆ ಅವಲಂಬಿಸಿ ಇದರಲ್ಲಿನ ಕೆಲ ಆಯ್ಕೆಗಳು ಬದಲಾಗಬಹುದು.

ಈಗ ನೀವು ಬಯಸಿದರೆ ಇಂಟ್ರೊ ಸೇರಿಸಬಹುದು. ನಿಮ್ಮ ಜಿಫ್​ಗೆ ಇಂಟ್ರೊ ಸೇರಿಸಬೇಕಾದರೆ ಮೊದಲು ಸಣ್ಣ ವಿಡಿಯೋ ಕ್ಲಿಪ್ ರಚಿಸಬೇಕಾಗುತ್ತದೆ. ಇದಕ್ಕಾಗಿ ನೀವು ಪ್ರತ್ಯೇಕ ಅಪ್ಲಿಕೇಶನ್ ಅಥವಾ ಸಾಫ್ಟ್​​​​​ವೇರ್ ಬಳಸಬೇಕಾಗಬಹುದು. ಒಮ್ಮೆ ಇಂಟ್ರೋ ವಿಡಿಯೋವನ್ನು ಸಿದ್ಧಗೊಳಿಸಿದ ನಂತರ, ಅದನ್ನು ವಿಡಿಯೋ ಎಡಿಟಿಂಗ್ ಉಪಕರಣವನ್ನು ಬಳಸಿಕೊಂಡು ನಿಮ್ಮ ಜಿಫ್​ನೊಂದಿಗೆ ವಿಲೀನಗೊಳಿಸಬಹುದು ಅಥವಾ ಗೂಗಲ್ ಫೋಟೋದಲ್ಲಿ ಜಿಫ್​ನ ಮೊದಲ ಫ್ರೇಮ್ ಆಗಿ ಇಂಟ್ರೋ ಸೇರಿಸಬಹುದು.

ಈಗ ನೀವು ತಯಾರಿಸುತ್ತಿರುವ ಜಿಫ್​ ನಿಮಗೆ ತೃಪ್ತಿಯಾದರೆ Save ಅಥವಾ Done ಬಟನ್ ಕ್ಲಿಕ್ ಮಾಡುವ ಮೂಲಕ ಅದನ್ನು ಸೇವ್ ಮಾಡಬಹುದು. ಈಗ ನಿಮ್ಮ ಜಿಫ್ ಗೂಗಲ್ ಫೋಟೋಸ್​ ಲೈಬ್ರರಿಯಲ್ಲಿ ಸೇವ್ ಆಗಿರುತ್ತದೆ. ಇದನ್ನು ಗೂಗಲ್ ಫೋಟೋಸ್​ನಿಂದ ನೇರವಾಗಿ ಶೇರ್ ಮಾಡಬಹುದು ಅಥವಾ ಡೌನ್​ಲೋಡ್​ ಮಾಡಿ ಪ್ರತ್ಯೇಕವಾಗಿ ಶೇರ್ ಮಾಡಬಹುದು.

ಇದನ್ನೂ ಓದಿ : ಭಾರತದ 5G ಮೊಬೈಲ್ ಸಂಪರ್ಕಗಳ ಸಂಖ್ಯೆ 130 ಮಿಲಿಯನ್​ಗೆ ತಲುಪುವ ಅಂದಾಜು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.