ಸ್ವಿಮ್ಮಿಂಗ್ ಪೂಲ್, ಹೆಲಿಪ್ಯಾಡ್​ ಇರುವ 26 ಚಕ್ರದ ವಿಶ್ವದ ಅತಿ ಉದ್ದದ ಕಾರಿನಲ್ಲಿ ಕೂರಬಹುದು 75 ಜನರು!

author img

By

Published : Mar 11, 2022, 12:46 PM IST

ongest car in the world

ದಿ ಅಮೆರಿಕನ್ ಡ್ರೀಮ್​ ಕಾರು' ಈಗ 30.54 ಮೀಟರ್ (100 ಅಡಿ ಮತ್ತು 1.50 ಇಂಚು) ಉದ್ದವಿದೆ. 26 ಚಕ್ರಗಳನ್ನು ಒಳಗೊಂಡ ಈ ಕಾರು, ದೊಡ್ಡ ವಾಟರ್​ ಬೆಡ್, ಡೈವಿಂಗ್ ಬೋರ್ಡ್‌ನೊಂದಿಗೆ ಈಜುಕೊಳ, ಬಾತ್‌ಟಬ್, ಮಿನಿ-ಗಾಲ್ಫ್ ಕೋರ್ಸ್, ಹೆಲಿಪ್ಯಾಡ್ ಇದ್ದು 75ಕ್ಕೂ ಹೆಚ್ಚು ಜನರು ಕೂರಬಹುದಾಗಿದೆ..

ಜಗತ್ತಿನಲ್ಲಿ ಹಲವು ವಿಚಾರಗಳನ್ನಿಟ್ಟುಕೊಂಡು ಗಿನ್ನೆಸ್‌ ವಿಶ್ವ ದಾಖಲೆ ಮಾಡಿರೋದನ್ನು ಗಮನಿಸಿರುತ್ತೇವೆ. ಇದೀಗ ಹಲವು ವಿಶೇಷತೆಗಳುಳ್ಳ ಕಾರಿನಿಂದ ಗಿನ್ನೆಸ್‌ ವಿಶ್ವ ದಾಖಲೆ ಮಾಡಲಾಗಿದೆ. ಈಗಾಗಲೇ ತನ್ನ ವಿಶೇಷತೆಯಿಂದ ಗಿನ್ನೆಸ್‌ ರೆಕಾರ್ಡ್ ಮಾಡಿದ್ದ ಕಾರೀಗ ತನ್ನದೇ ದಾಖಲೆಯನ್ನು ಮುರಿದು ಹೊಸ ರೆಕಾರ್ಡ್ ಮಾಡಿದೆ.

ನೀವು ಐಷಾರಾಮಿ ಕಾರುಗಳನ್ನು ನೋಡಿರುತ್ತೀರಿ. ಸಾಮಾನ್ಯವಾಗಿ ಕಾರು ಎಷ್ಟು ಉದ್ದ ಇರಬಹುದು? ಎಷ್ಟು ಚಕ್ರಗಳಿರಬಹುದು? ಸ್ವಿಮ್ಮಿಂಗ್ ಪೂಲ್, ಹೆಲಿಪ್ಯಾಡ್​ ಇರೋ ಕಾರನ್ನು ನೋಡಿದ್ದೀರಾ?. ಇಲ್ಲ ಅಂದ್ರೆ ಇಲ್ಲಿ ಓದಿ..

ವಿಶ್ವದ ಅತಿ ಉದ್ದದ ಕಾರು

ಜಗತ್ತಿನ ಅತ್ಯಂತ ಉದ್ದನೆಯ ಕಾರಿನ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್ ಆಗಿವೆ. ಇದರ ಫೋಟೋಗಳನ್ನು ನೋಡಿ ಜನ ಕಣ್ಣು-ಬಾಯಿ ಬಿಡುತ್ತಿದ್ದಾರೆ.

1986ರಲ್ಲಿ ಕ್ಯಾಲಿಫೋರ್ನಿಯಾದ ಬರ್ಬ್ಯಾಂಕ್‌ನಲ್ಲಿ ಪ್ರಸಿದ್ಧ ಕಾರ್ ಕಸ್ಟಮೈಸರ್ ಜೈ ಓರ್ಬರ್ಗ್( Jay Ohrberg) ಅವರು ವಿಶ್ವದ ಅತಿ ಉದ್ದನೆಯ ಕಾರು ನಿರ್ಮಿಸಿ ಸಾಧನೆಗೈದಿದ್ದರು. ಆಗ ಈ ಕಾರು18.28 ಮೀಟರ್ (60 ಅಡಿ) ಉದ್ದವಿತ್ತು. ಇದೀಗ ಮತ್ತೆ ಆ ಐಷಾರಾಮಿ ಕಾರನ್ನು ನವೀಕರಿಸಿ ಪುನಃ ಪರಿಚಯಿಸಲಾಗಿದೆ.

ಇದನ್ನೂ ಓದಿ: ಹಂದಿ ಹೃದಯ ಕಸಿಗೆ ಒಳಗಾಗಿದ್ದ ಡೇವಿಡ್​ ಬೆನೆಟ್​ ನಿಧನ..ಸಂಶೋಧಕರಿಗೆ ನಿರಾಶೆ

'ದಿ ಅಮೆರಿಕನ್ ಡ್ರೀಮ್​ ಕಾರು' ಈಗ 30.54 ಮೀಟರ್ (100 ಅಡಿ ಮತ್ತು 1.50 ಇಂಚು) ಉದ್ದವಿದೆ. 26 ಚಕ್ರಗಳನ್ನು ಒಳಗೊಂಡ ಈ ಕಾರು, ದೊಡ್ಡ ವಾಟರ್​ ಬೆಡ್, ಡೈವಿಂಗ್ ಬೋರ್ಡ್‌ನೊಂದಿಗೆ ಈಜುಕೊಳ, ಬಾತ್‌ಟಬ್, ಮಿನಿ-ಗಾಲ್ಫ್ ಕೋರ್ಸ್, ಹೆಲಿಪ್ಯಾಡ್ ಇದ್ದು 75ಕ್ಕೂ ಹೆಚ್ಚು ಜನರು ಕೂರಬಹುದಾಗಿದೆ.

ಸಾಮಾನ್ಯವಾಗಿ ಕಾರುಗಳು 12 ರಿಂದ 16 ಅಡಿಗಳ (3.6 ರಿಂದ 4.2 ಮೀಟರ್) ಉದ್ದ ಇರುತ್ತವೆ. ಆದ್ರೆ, ದಿ ಅಮೆರಿಕನ್ ಡ್ರೀಮ್ ಕಾರು ಮಾತ್ರ ಸಖತ್​ ಐಷಾರಾಮಿ ವ್ಯವಸ್ಥೆ ಒಳಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.