ETV Bharat / lifestyle

ಕೋವಿಡ್ ಋತುಮಾನದ ಸಾಂಕ್ರಾಮಿಕ ರೋಗವಾಗಿ ರೂಪಾಂತರಗೊಳ್ಳಬಹುದು : ತಜ್ಞರು

author img

By

Published : Jan 5, 2022, 12:33 PM IST

ಕೋವಿಡ್ -19 ಸಾಂಕ್ರಾಮಿಕ ರೋಗವು ಇನ್ನೂ ಋತುಮಾನದ ಸಾಂಕ್ರಾಮಿಕ ರೋಗವಾಗಿ ರೂಪಾಂತರಗೊಳ್ಳುತ್ತದೆ ಎಂದು ರಷ್ಯಾದ ಅಕಾಡೆಮಿ ಆಫ್ ಸೈನ್ಸ್​ ಅಧ್ಯಕ್ಷ ಅಲೆಕ್ಸಾಂಡರ್ ಸೆರ್ಗೆಯೆವ್ (Russian Academy of Sciences President Alexander Sergeyev) ಕೂಡ ಹೇಳಿದ್ದಾರೆ ಎಂದು ವರದಿ ತಿಳಿಸಿದೆ..

Covid to end up as seasonal epidemic  - experts
ಕೋವಿಡ್ ಋತುಮಾನದ ಸಾಂಕ್ರಾಮಿಕ ರೋಗವಾಗಿ ರೂಪಾಂತರಗೊಳ್ಳಬಹುದು

ರಷ್ಯಾ/ನವದೆಹಲಿ : ಎಲ್ಲೆಡೆ ಕೋವಿಡ್​​ ಪ್ರಕರಣಗಳು, ರೂಪಾಂತರಿ ಒಮಿಕ್ರಾನ್​ ಕೇಸ್​ಗಳು ಏರಿಕೆಯಾಗುತ್ತಿವೆ. ಜನರು ಮತ್ತೆ ಆತಂಕಕ್ಕೊಳಗಾಗುತ್ತಿದ್ದಾರೆ. ಪ್ರಕರಣಕ್ಕನುಗುಣವಾಗಿ ನಿಯಮಾವಳಿಗಳನ್ನು ಪುನಃ ಚುರುಕುಗೊಳಿಸಲಾಗಿದೆ. ಯಾವಾಗ ಈ ಸೋಂಕು ಸಮಸ್ಯೆ ತೊಲಗುವುದೋ ಎಂಬ ಚಿಂತೆಯಲ್ಲಿ ಜನರಿದ್ದು, ತಜ್ಞರು ವಿಭಿನ್ನವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ರಷ್ಯಾದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಗೆನ್ನಡಿ ಒನಿಶ್ಚೆಂಕೊ (Russia's former chief sanitary doctor Gennady Onishchenko) ಪ್ರಕಾರ, ಕೋವಿಡ್​ ಮಾರ್ಗಸೂಚಿ, ಲಸಿಕಾಭಿಯಾನವನ್ನು ಗಮನಿಸಿದರೆ ಸದ್ಯದ ಕೋವಿಡ್​ ಪರಿಸ್ಥಿತಿ ಮೇ ವೇಳೆಗೆ ಕೊನೆಗೊಳ್ಳಬಹುದು. ಸೀಸನಲ್​​ ಎಪಿಡೆಮಿಕ್​​/ಋತುಮಾನದ ಸಾಂಕ್ರಾಮಿಕ ರೋಗ ಆಗಬಹುದು ಅಂತಾ ಹೇಳಿದ್ದಾರೆಂದು ಟಿಎಎಸ್​ಎಸ್​ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಲಸಿಕೆಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಎಲ್ಲೆಡೆ ಲಸಿಕಾಭಿಯಾನ ಚುರುಕುಗೊಂಡಿದೆ. ಅತಿ ಹೆಚ್ಚು ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆಯತ್ತ ಗಮನಹರಿಸುವುದು ಅಗತ್ಯ. ಆದರೆ, ಭಯಭೀತರಾಗುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕ ರೋಗವು ಇನ್ನೂ ಋತುಮಾನದ ಸಾಂಕ್ರಾಮಿಕ ರೋಗವಾಗಿ ರೂಪಾಂತರಗೊಳ್ಳುತ್ತದೆ ಎಂದು ರಷ್ಯಾದ ಅಕಾಡೆಮಿ ಆಫ್ ಸೈನ್ಸ್​ ಅಧ್ಯಕ್ಷ ಅಲೆಕ್ಸಾಂಡರ್ ಸೆರ್ಗೆಯೆವ್ (Russian Academy of Sciences President Alexander Sergeyev) ಕೂಡ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

''ಕೋವಿಡ್-19 ಸಾಂಕ್ರಾಮಿಕವು ಜ್ವರದಂತಹ ಋತುಮಾನದ ಸಾಂಕ್ರಾಮಿಕ ರೋಗಗಳಾಗಿ ಬದಲಾಗುತ್ತದೆ ಎಂದು ನಾನು ಅಭಿಪ್ರಾಯ ಪಡುತ್ತೇನೆ. ಪ್ರಸ್ತುತ ಪರಿಸ್ಥಿತಿಯು 1960ರ ದಶಕದಂತೆ ಕಾಣುತ್ತದೆ. ಹಾಂಗ್ ಕಾಂಗ್ ಜ್ವರ ಸಾಂಕ್ರಾಮಿಕವು ಅನೇಕ ಬಹಳ ಗಂಭೀರ ಪರಿಣಾಮಗಳನ್ನು ಬೀರಿತು. ಔಷಧಿಗಳನ್ನು ಸರಿಯಾದ ಸಮಯದಲ್ಲಿ ಕಂಡು ಹಿಡಿಯಲಾಯಿತು.

ಹಾಗಾಗಿ, ನಾವು 60 ವರ್ಷಗಳಿಂದ ಜ್ವರ ಬಂದರೂ ಎದುರಿಸುತ್ತಿದ್ದೇವೆ, ಅದಕ್ಕೆ ಬಹುತೇಕ ಒಗ್ಗಿಕೊಂಡಿದ್ದೇವೆ. ಇಂದು ಕೋವಿಡ್‌ ಕೂಡ ಅದೇ ರೀತಿ ಇದೆ. ಹಾಗಾಗಿ, ಸೂಕ್ತ ಮಾರ್ಗಸೂಚಿ, ಔಷಧಿಗಳಿದ್ದರೆ ನಾವು ಈ ಸೋಂಕನ್ನು ಕೂಡ ಸಾಮಾನ್ಯ ಜ್ವರದಂತೆ ನೋಡಲು ಪ್ರಾರಂಭಿಸುತ್ತೇವೆ" ಎಂದು ಹೇಳಿದ್ದಾರೆ. ಇನ್ನೂ ರಷ್ಯಾದಲ್ಲಿ ಲಸಿಕೆ ಪಡೆಯದೇ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚಳಿಗಾಲದಲ್ಲಿ ಕೂದಲಿನ ರಕ್ಷಣೆ ಹೇಗೆ? ಈ 10 ವಿಧಾನಗಳನ್ನು ತಪ್ಪದೆ ಪಾಲಿಸಿ

ಡೆನ್ಮಾರ್ಕ್‌ನ ಸ್ಟೇಟ್ ಸೀರಮ್ ಇನ್‌ಸ್ಟಿಟ್ಯೂಟ್‌ನ ಮುಖ್ಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಟೈರಾ ಗ್ರೋವ್ ಕ್ರೌಸ್ ಅವರು ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ನಾವಿನ್ನು 2 ತಿಂಗಳನಲ್ಲಿ ಮತ್ತೆ ಸಾಮಾನ್ಯ ಜೀವನ ನಡೆಸಬಹುದು ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.