ETV Bharat / jagte-raho

ಹುಂಡಿ ಕದಿಯಲು ಬಂದವರಿಂದ ಮೂವರು ಅರ್ಚಕರ ಬರ್ಬರ ಹತ್ಯೆ... ಬೆಚ್ಚಿಬಿದ್ದ ಮಂಡ್ಯ ಜನತೆ!

author img

By

Published : Sep 11, 2020, 8:47 AM IST

Updated : Sep 11, 2020, 9:45 AM IST

ಹುಂಡಿ ಕಳವಿಗೆ ಬಂದ ದುಷ್ಕರ್ಮಿಗಳು ಅರ್ಕೇಶ್ವರ ದೇವಾಲಯದ ಮೂವರು ಅರ್ಚಕರನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ದೇವಾಲಯದ ಅರ್ಚಕರ ತ್ರಿಬಲ್ ಮರ್ಡರ್
ದೇವಾಲಯದ ಅರ್ಚಕರ ತ್ರಿಬಲ್ ಮರ್ಡರ್

ಮಂಡ್ಯ: ದೇವಾಲಯದ ಹುಂಡಿ ಕಳವಿಗೆ ಬಂದ ದುಷ್ಕರ್ಮಿಗಳು ದೇವಾಲಯದ ಮೂವರು ಅರ್ಚಕರನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ನಗರದ ಹೊರವಲಯದ ಅರ್ಕೇಶ್ವರ ದೇವಾಲಯದಲ್ಲಿ ನಡೆದಿದೆ.

triple-priest-murder-in-mandya
ದೇವಾಲಯ

ದೇವಾಲಯದ ಅರ್ಚಕರಾದ ಗಣೇಶ(55), ಪ್ರಕಾಶ(58) ಮತ್ತು ಆನಂದ(40) ಕೊಲೆಯಾದವರು. ಇವರು ಅರ್ಚಕ ವೃತ್ತಿಯ ಜೊತೆಗೆ ರಾತ್ರಿ ಪಾಳಿಯಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಕಳೆದ 8 ತಿಂಗಳಿನಿಂದ ದೇವಾಲಯದ ಹುಂಡಿಯನ್ನು ಒಡೆದು ಎಣಿಕೆ ಮಾಡಿರಲಿಲ್ಲ. ಹೀಗಾಗಿ ದುಷ್ಕರ್ಮಿಗಳು ಮೂವರನ್ನು ದೇವಾಲಯದ ಆವರಣದಲ್ಲೇ ಕೊಲೆ ಮಾಡಿ, ಕಾಣಿಕೆಯ ಹುಂಡಿಯನ್ನು ಹೊತ್ತೊಯ್ದು ಹಣದ ಜೊತೆ ಚಿನ್ನ-ಬೆಳ್ಳಿಯ ಆಭರಣವನ್ನೂ ದೋಚಿದ್ದಾರೆ.

ಮೂವರು ಅರ್ಚಕರ ಬರ್ಬರ ಹತ್ಯೆ

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಶಾಸಕ ಎಂ.ಶ್ರೀನಿವಾಸ್, ತಹಶಿಲ್ದಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Sep 11, 2020, 9:45 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.