ETV Bharat / jagte-raho

ಅಕ್ರಮ ಗೋಮಾಂಸ ಮಾರಾಟ: ಓರ್ವನ ಬಂಧನ, ಇಬ್ಬರು ಪರಾರಿ

author img

By

Published : Jun 20, 2020, 2:02 PM IST

Updated : Jun 20, 2020, 8:51 PM IST

ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ವೇಳೆ ನಗರ ಠಾಣೆ ಪೊಲೀಸರು ದಾಳಿ ನಡೆಸಿ 50 ಕೆ.ಜಿ ಮಾಂಸದ ಜೊತೆಗೆ ನಾಲ್ಕು ಜಾನುವಾರುಗಳನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.

Cow
Cow

ಭಟ್ಕಳ: ನಗರದ ಮುಗ್ಧಂ ಕಾಲೋನಿಯ ಮನೆಯೊಂದರಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ವೇಳೆ ನಗರ ಠಾಣೆ ಪೊಲೀಸರು ದಾಳಿ ನಡೆಸಿ 50 ಕೆ.ಜಿ ಮಾಂಸದ ಜೊತೆಗೆ ನಾಲ್ಕು ಜಾನುವಾರುಗಳನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ ಘಟನೆ ನಡೆದಿದೆ.

ಸಮೀವುಲ್ಲಾ ಅಬ್ದುಲ್ ರಹಿಮಾನ್ ಬಂಧಿತ ಆರೋಪಿ. ದಾಳಿಯ ಸಂದರ್ಭದಲ್ಲಿ ಇಬ್ಬರು ಆರೋಪಿಗಳಾದ ಅಬ್ರಾಹ್ ಮೋಹಿನ್, ಅಬ್ದುಲ್ ಸಮಿ ಎಂಬುವವರು ಪರಾರಿಯಾಗಿದ್ದಾರೆ. ಈ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ನಗರ ಠಾಣಾ ಪಿಎಸ್ಐ ಭರತ್ ಕುಮಾರ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದು, 50 ಕೆ.ಜಿ ಮಾಂಸದ ಜೊತೆಗೆ ನಾಲ್ಕು ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

Last Updated : Jun 20, 2020, 8:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.