ETV Bharat / jagte-raho

ದಾವೂದ್ ಇಬ್ರಾಹಿಂ ಸಹಚರನ ಬಂಧನ: 22 ಲಕ್ಷ ರೂ. ಮೌಲ್ಯದ ಬ್ರೆಜಿಲ್ ಪಿಸ್ತೂಲ್ ವಶಕ್ಕೆ

author img

By

Published : Jul 12, 2020, 5:06 PM IST

ಪೆರೋಲ್ ಮೇಲೆ ಜೈಲಿನಿಂದ ಹೊರಬಂದ ಕೊಲೆ ಅಪರಾಧಿ ಹಾಗು ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಚರನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

Dawood Ibrahim's aide arrested
ದಾವೂದ್ ಇಬ್ರಾಹಿಂ ಸಹಚರನ ಬಂಧನ

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಚರನನ್ನು ಬಂಧಿಸಲಾಗಿದ್ದು, 22 ಲಕ್ಷ ರೂ.ಗಳ ಮೌಲ್ಯದ ಬ್ರೆಜಿಲ್ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಅಪರಾಧಿ ಹಾಗೂ ದಾವೂದ್ ಇಬ್ರಾಹಿಂನ ಬಂಟನಾಗಿರುವ ಅನ್ವರ್ ಠಾಕೂರ್ ಪೆರೋಲ್‌ ಮೇಲೆ ಹೊರಬಂದಿದ್ದನು. ಮೀರತ್​ ಮೂಲದ ಅನ್ವರ್, ದೆಹಲಿಯ ಮಯೂರ್ ವಿಹಾರ್‌ನ ಪಾಂಡವ್ ನಗರದಲ್ಲಿ ವಾಸಿಸುತ್ತಿದ್ದ. ಆದರೆ ಆತನ ಬಳಿ ಸೆಮಿ ಆಟೋಮ್ಯಾಟಿಕ್ ಬ್ರೆಜಿಲ್ ಪಿಸ್ತೂಲ್ ಸಿಕ್ಕಿದ್ದು, ಮತ್ತೆ ಅರೆಸ್ಟ್​ ಮಾಡಲಾಗಿದೆ.

ದೆಹಲಿಯ ಸದರ್ ಬಜಾರ್ ಪೊಲೀಸ್ ಠಾಣೆಯೊಳಗೇ ಪೊಲೀಸ್ ಮಾಹಿತಿದಾರನನ್ನು ಅನ್ವರ್ ಠಾಕೂರ್ ಗುಂಡಿಕ್ಕಿ ಕೊಂದಿದ್ದನು. ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಆತ, ಮಾರ್ಚ್ 17 ರಂದು ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದನು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.