ETV Bharat / jagte-raho

ಪೊಲೀಸರಿಗೆ ತಲೆನೋವಾಗಿದ್ದ ಮೋಸ್ಟ್​ ವಾಂಟೆಂಡ್​ ಗ್ಯಾಂಗ್​ಸ್ಟರ್, ಛೋಟಾ ರಾಜನ್​​ ಶಿಷ್ಯ​​ ಅಂದರ್..!

author img

By

Published : Jan 9, 2020, 1:52 PM IST

ಮುಂಬೈ ಪೊಲೀಸರಿಗೆ ತಲೆನೋವಾಗಿದ್ದ ಗ್ಯಾಂಗ್​​​​ಸ್ಟರ್​ ಹಾಗೂ ಛೋಟಾ ರಾಜನ್ ಸಹಚರ ಏಜಾಝ್​ ಲಕ್ಡಾವಾಲಾ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತುಂಬಾ ವರ್ಷಗಳಿಂದ ಈತನಿಗೆ ಹೊಂಚುಹಾಕಿ ಕುಳಿತ್ತಿದ್ದ ಮುಂಬೈ ಪೊಲೀಸರು ಪಾಟ್ನಾದಲ್ಲಿ ವಶಕ್ಕೆ ಪಡೆದು ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂಧಿಸಿದ್ದಾರೆ.

Chhota Rajan Companion G Ejaz Lakdawala Arrested
ಮುಂಬೈ ಪೊಲೀಸರಿಂದ ಗ್ಯಾಂಗ್​ಸ್ಟರ್​ ಬಂಧನ

ಮುಂಬೈ: ದೇಶದ ಮೋಸ್ಟ್​ ವಾಂಟೆಂಡ್​ ಗ್ಯಾಂಗ್​ಸ್ಟರ್​, ಛೋಟಾ ರಾಜನ್​ ಸಹಚರ ಏಜಾಝ್​ ಲಕ್ಡಾವಾಲಾ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಮುಂಬೈ ಪೊಲೀಸರು ಪಾಟ್ನಾದ ಜತ್ತನ್​ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದು ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಬಂಧಿಸಿದ ನಂತರ ಕೋರ್ಟ್​ಗೆ ಹಾಜರುಪಡಿಸಿ ಜನವರಿ 21ರವರೆಗೆ ಪೊಲೀಸ್​ ಕಸ್ಟಡಿಗೆ ತೆಗೆದುಕೊಂಡಿದ್ದಾರೆ

ಈ ಕುರಿತು ಮಾತನಾಡಿರುವ ಮುಂಬೈನ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂತೋಷ್​ ರಸ್ತೋಗಿ ''ಏಜಾಝ್​ನ ಮಗಳನ್ನು ಈಗಾಗಲೇ ಪೊಲೀಸ್​ ಕಸ್ಟಡಿಗೆ ಪಡೆಯಲಾಗಿದೆ. ಆಕೆಯಿಂದ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಲಾಗಿದೆ. ಏಜಾಝ್​ ಪಾಟ್ನಾಗೆ ತೆರಳುತ್ತಿರುವ ಮಾಹಿತಿ ಬಂದ ಬೆನ್ನಲ್ಲೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ'' ಎಂದು ಸ್ಪಷ್ಟಪಡಿಸಿದರು..

ಯಾರು ಈ ಗ್ಯಾಂಗ್​​​ಸ್ಟರ್​​​ ಏಜಾಝ್​ ಲಕ್ಡಾವಾಲಾ..?

ಬಂಧಿತ ಗ್ಯಾಂಗ್​ಸ್ಟರ್​ ಏಜಾಝ್ ಮೊದಲಿಗೆ ದಾವೂದ್ ಇಬ್ರಾಹಿಂ ಅಥವಾ ಡಿ ಕಂಪನಿಯಲ್ಲಿದ್ದ ಛೋಟಾರಾಜನ್​ ಬಳಿ ಕುಕೃತ್ಯಗಳಿಗೆ ಕೈ ಹಾಕಿದ್ದ. ಕೆಲ ವಿವಾದಗಳ ನಂತರ ಛೋಟಾ ರಾಜನ್​ ಪ್ರತ್ಯೇಕ ಬಣ ಸ್ಥಾಪಿಸಿದಾಗ ಛೋಟಾ ರಾಜನ್​ ಜೊತೆ ಏಜಾಝ್​ ಕೂಡಾ ಹೊರನಡೆದ. 2003ರಲ್ಲಿ ಬ್ಯಾಂಕಾಕ್​​ ಮಾರುಕಟ್ಟೆಯೊಂದರಲ್ಲಿ ನಡೆದಿದ್ದ ಶೂಟೌಟ್ ಒಂದರಲ್ಲಿ ಏಜಾಝ್​​ ಸತ್ತಿದ್ದಾನೆ ಎಂದೇ ಭಾವಿಸಲಾಗಿತ್ತು. ಆದರೆ ಈ ಫೈರಿಂಗ್​​ನಲ್ಲಿ ಬದುಕುಳಿದ ಏಜಾಝ್​ ಕೆನಡಾಗೆ ಸ್ಥಳಾಂತರವಾಗಿದ್ದ. 2004 ಮೇ ತಿಂಗಳಲ್ಲಿ ಕೆನಾಡದ ರಾಯಲ್​ ಕೆನಡಿಯನ್ ಮೌಂಟೆಡ್ ಪೊಲೀಸರು ಒಟ್ಟಾವೋದಲ್ಲಿ ಈತನನ್ನು ಬಂಧಿಸಿ ವಿಚಾರಣೆ ಮಾಡಿತ್ತು.

ಕೆಲ ವರ್ಷಗಳಿಂದ ನಾಪತ್ತೆಯಾಗಿದ್ದ ಏಜಾಝ್ ಉತ್ತರ ಅಮೇರಿಕಾದ ಯಾವುದೋ ರಾಷ್ಟ್ರದಲ್ಲಿ ಇರಬಹುದೆಂದು ಊಹಿಸಲಾಗಿತ್ತು. ಆಗಾಗ ಬೇರೆ ಬೇರೆ ರಾಷ್ಟ್ರಗಳಿಗೆ ಪ್ರಯಾಣಿಸುತ್ತಿದ್ದ ಈತನನ್ನು ಹಿಡಿಯುವ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಈತನನ್ನು ಹಿಡಿಯೋದಕ್ಕೆ​ ಇಂಟರ್​ಪೋಲ್​ ರೆಡ್​ ಕಾರ್ನರ್​ ನೋಟೀಸ್​ ಕೂಡಾ ಜಾರಿಯಾಗಿತ್ತು.

ಏಜಾಝ್ ಮೇಲೆ 20ಕ್ಕೂ ಹೆಚ್ಚು ಸುಲಿಗೆ ಪ್ರಕರಣಗಳು, ಕೊಲೆ ಯತ್ನ ಹಾಗೂ ದೊಂಬಿ ಪ್ರಕರಣಗಳಿವೆ. ಕೇವಲ 15 ದಿನಗಳ ಹಿಂದೆ ಮುಂಬೈ ವಿಮಾನ ನಿಲ್ದಾಣದಲ್ಲಿ ನಕಲಿ ಪಾಸ್​​ಪೋರ್ಟ್​ ಬಳಸಿ ನೇಪಾಳಕ್ಕೆ ಹೋಗಲು ಯತ್ನಿಸಿದ್ದ ಏಜಾಝ್​ನ ಮಗಳು ಸೋನಿಯಾ ಲಕ್ಡಾವಾಲಾ ಅಲಿಯಾಸ್​ ಸೋನಿಯಾ ಶೇಖ್​ ಅನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ನಂತರ ಆಕೆಯನ್ನು ತೀವ್ರವಾಗಿ ವಿಚಾರಣೆ ಮಾಡಲಾಗಿತ್ತು. ನಂತರ ಈಕೆಯ ಮೇಲೆ ವಂಚನೆ, ಪಾಸ್​ಪೋರ್ಟ್​ ಪೋರ್ಜರಿ ಮಾಡಿದ ಆರೋಪದ ಜೊತೆಗೆ ಸುಲಿಗೆಕೋರರೊಂದಿಗೆ ಸಂಪರ್ಕ ಇರಿಸಿಕೊಂಡಿದ್ದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಯಿತು. ಈಗ ಏಜಾಝ್​ ಅನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರಲಿವೆ

Intro:Body:

Ejaz Lakdawala


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.