ETV Bharat / jagte-raho

70 ಲಕ್ಷ ನಗದು, ಕಾರು ಸಮೇತ ಪರಾರಿಯಾಗಿದ್ದ ಚಾಲಕ: ಎರಡು ವರ್ಷದ ನಂತರ ಪತ್ತೆ ಆಗಿದ್ದು ಹೀಗೆ!

author img

By

Published : Nov 28, 2020, 9:54 PM IST

ಪ್ರಕರಣ ದಾಖಲಿಸಿಕೊಂಡ ಮನ್ನಾಖೆಳ್ಳಿ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಬಂಧಿತ ಆರೋಪಿಯಿಂದ 51.50 ಲಕ್ಷ ರೂ. ನಗದು, ಒಂದು ಕಾರು ಜಪ್ತಿ ಮಾಡಿಕೊಂಡಿದ್ದು, ನ್ಯಾಯಾಲಯದ ಅನುಮತಿ ಮೇರೆಗೆ ದೂರುದಾರನಿಗೆ ಹಣ ವಾಪಸ್​​ ಮಾಡಲಾಗಿದೆ.

bidar-police-locate-accused-for-froud-case
ಹಣ ಜಪ್ತಿ ಮಾಡಿಕೊಂಡು ವ್ಯಾಪಾರಿಗೆ ವಾಪಸ್ಸು

ಬೀದರ್: ಬಳ್ಳಾರಿ ಮೂಲದ ಉದ್ಯಮಿಯೊಬ್ಬರ ಕಾರು ಚಾಲಕ ಎರಡು ವರ್ಷಗಳ ಹಿಂದೆ 70 ಲಕ್ಷ ರೂ. ನಗದು ಹಾಗೂ ಒಂದು ಕಾರಿನ ಸಮೇತ ಪರಾರಿಯಾಗಿದ್ದ ಪ್ರಕರಣ ಭೇದಿಸಿದ ಬೀದರ್ ಪೊಲೀಸರು, ತಲೆಮರೆಸಿಕೊಂಡಿದ್ದ ವಂಚಕನನ್ನು ಪತ್ತೆ ಹಚ್ಚಿ ನಗದು ಹಣ ಜಪ್ತಿ ಮಾಡಿಕೊಂಡು ವ್ಯಾಪಾರಿಗೆ ವಾಪಸ್​ ನೀಡಿದ್ದಾರೆ.

ಜಿಲ್ಲೆಯ ಚಿಟಗುಪ್ಪ ತಾಲೂಕಿನ ಮನ್ನಾಖೆಳ್ಳಿ ಗ್ರಾಮದಲ್ಲಿ 2018ರಲ್ಲಿ ಬಿತ್ತನೆ ಬೀಜ ಮಾರಾಟ ಮಾಡಿದ್ದ 70 ಲಕ್ಷ ರೂ. ನಗದು ತೆಗೆದುಕೊಂಡು ಬಳ್ಳಾರಿ ಮೂಲದ ರಾಜೇಶ್ವರ ಬೆಳ್ಳಕ್ಕಿ ಎಂಬುವರು ಕೃಷಿ ಕೇಂದ್ರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಇವರ ಕಾರು ಚಾಲಕ ಮಾರುತಿ ಸುಧಾ ಎಂಬಾತ ಕಾರಿನಲ್ಲಿದ್ದ ಹಣದ ಸಮೇತ ಪರಾರಿಯಾಗಿದ್ದ. ನಂತರ ತೆಲಂಗಾಣದ ಹಳ್ಳಿಯೊಂದರಲ್ಲಿ ತಲೆಮರೆಸಿಕೊಂಡಿದ್ದ.

ಪ್ರಕರಣ ದಾಖಲಿಸಿಕೊಂಡ ಮನ್ನಾಖೆಳ್ಳಿ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಬಂಧಿತ ಆರೋಪಿಯಿಂದ 51.50 ಲಕ್ಷ ರೂ. ನಗದು, ಒಂದು ಕಾರು ಜಪ್ತಿ ಮಾಡಿಕೊಂಡಿದ್ದು, ನ್ಯಾಯಾಲಯದ ಅನುಮತಿ ಮೇರೆಗೆ ದೂರುದಾರನಿಗೆ ಹಣ ವಾಪಸ್​ ಮಾಡಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್. ಮಾರ್ಗದರ್ಶನದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಸಹಯೋಗದಲ್ಲಿ ಹುಮನಾಬಾದ್ ಡಿವೈಎಸ್​​ಪಿ ಸೋಮಲಿಂಗ್ ಕಂಬಾರ, ಸಿಪಿಐ ಶರಣಬಸವೇಶ್ವರರ ಭಜಂತ್ರಿ, ಪಿಎಸ್​​ಐ ಮಹಾಂತೇಶ ಲುಂಬಿ ಹಾಗೂ ಮಡಿವಾಳಪ್ಪ ಅವರ ತಂಡ ಈ ಕಾರ್ಯಾಚರಣೆ ನಡೆಸಿದೆ.

ಇದನ್ನೂ ಓದಿ: ಅಂತಾರಾಜ್ಯ ವಂಚಕನ ಬಂಧನ: 45 ಲಕ್ಷ ನಗದು, ಕಾರು ವಶ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.