ETV Bharat / international

ಮೇ ತಿಂಗಳಲ್ಲಿ ಜಿ-7 ಶೃಂಗಸಭೆ: ಅಮೆರಿಕ ಅಧ್ಯಕ್ಷ ಜೋ ಬೈಡನ್​ ಭಾಗಿ

author img

By

Published : Apr 26, 2023, 10:10 AM IST

Updated : Apr 26, 2023, 10:37 AM IST

ಹಿರೋಷಿಮಾದಲ್ಲಿ ನಡೆಯಲಿರುವ ಜಿ-7 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾಗವಹಿಸಲಿದ್ದಾರೆ ಎಂದು ಶ್ವೇತಭವನ ಮಾಹಿತಿ ನೀಡಿದೆ.

US President Joe Biden
ಅಮೆರಿಕ ಅಧ್ಯಕ್ಷ ಜೋ ಬೈಡನ್​

ವಾಷಿಂಗ್ಟನ್: ಜಪಾನ್‌ನ ಹಿರೋಷಿಮಾದಲ್ಲಿ ಮೇ 19 ರಿಂದ 21 ರವರೆಗೆ ನಡೆಯಲಿರುವ ಜಿ–7 ನಾಯಕರ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾಗವಹಿಸಲಿದ್ದಾರೆ. ಈ ಸಂಬಂಧ ಶ್ವೇತಭವನ ಪ್ರಕಟಣೆ ಹೊರಡಿಸಿದೆ. ರಷ್ಯಾ–ಉಕ್ರೇನ್ ಯುದ್ದ, ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಹೆಚ್ಚಳ ಸೇರಿದಂತೆ ಆರ್ಥಿಕತೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಜಿ–7 ಶೃಂಗಸಭೆಯಲ್ಲಿ ನಾಯಕರು ಚರ್ಚೆ ನಡೆಸಲಿದ್ದಾರೆ.

  • I’m pleased to announce that Australia will be hosting the Quad Leaders’ Summit for the first time on May 24 in Sydney. 🇦🇺🇮🇳🇯🇵🇺🇸

    — Anthony Albanese (@AlboMP) April 26, 2023 " class="align-text-top noRightClick twitterSection" data=" ">

ಏನಿದು ಜಿ–7 ಶೃಂಗಸಭೆ?: ಜಗತ್ತಿನ ಪ್ರಮುಖ ಆರ್ಥಿಕ ಬಲಾಢ್ಯ ದೇಶಗಳಾದ ಅಮೆರಿಕ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಇಂಗ್ಲೆಂಡ್‌ ದೇಶಗಳು ಸೇರಿ ಮಾಡಿಕೊಂಡಿರುವ ಅನಧಿಕೃತ ಒಕ್ಕೂಟವೇ ಜಿ–7. ಯುರೋಪಿಯನ್‌ ಒಕ್ಕೂಟದ ಸದಸ್ಯ ರಾಷ್ಟ್ರಗಳು ಇತರ ಆಹ್ವಾನಿತ ದೇಶಗಳೊಂದಿಗೆ ಪ್ರತಿ ವರ್ಷ ವಾರ್ಷಿಕ ಜಿ–7 ಶೃಂಗಸಭೆಯನ್ನು ನಡೆಸುತ್ತವೆ.

ಜಿ–7 ಸದಸ್ಯ ರಾಷ್ಟ್ರಗಳ ಒಟ್ಟಾರೆ ಜಾಗತಿಕ ಜಿಡಿಪಿ ಶೇ. 40ರಷ್ಟಿದೆ. ವಿಶ್ವದ ಜನಸಂಖ್ಯೆಯ ಶೇ.10ರಷ್ಟನ್ನು ಈ ದೇಶಗಳು ಪ್ರತಿನಿಧಿಸುತ್ತವೆ. ನ್ಯಾಟೋ ಗುಂಪಿನಂತೆ ಜಿ–7ಗೆ ಯಾವುದೇ ಕಾನೂನು ಅಸ್ತಿತ್ವ, ಶಾಶ್ವತ ಸಚಿವಾಲಯ ಅಥವಾ ಅಧಿಕೃತ ಸದಸ್ಯರಿಲ್ಲ. ಈ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳು, ಮಾಡಿಕೊಳ್ಳಲಾದ ಒಪ್ಪಂದಗಳನ್ನು ಆಯಾ ದೇಶಗಳ ಆಡಳಿತ ಮಂಡಳಿಗಳು ಅನುಮೋದಿಸಬೇಕಾಗುತ್ತದೆ.

ಯುರೋಪಿಯನ್‌ ದೇಶಗಳ ಜಿ ಗುಂಪು 1975ರಲ್ಲಿ ಅಸ್ತಿತ್ವಕ್ಕೆ ಬಂದಿತು. 1977ರಲ್ಲಿ ಕೆನಡಾ ದೇಶ ಈ ಒಕ್ಕೂಟಕ್ಕೆ ಸೇರ್ಪಡೆಯಾದ ನಂತರವೇ ಜಿ–7 ಗುಂಪು ರಚನೆಯಾಯಿತು. ನಂತರ ನಿಯಮಿತವಾಗಿ ವಾರ್ಷಿಕ ಶೃಂಗಸಭೆಗಳು ನಡೆದವು. 1998ರಲ್ಲಿ ರಷ್ಯಾ ಈ ಗುಂಪಿಗೆ ಸೇರ್ಪಡೆಯಾಯಿತು. ಆಗ ಸದಸ್ಯ ದೇಶಗಳ ಸಂಖ್ಯೆ 8ಕ್ಕೆ ಏರಿಕೆಯಾಯಿತು. 2014ರವರೆಗೂ ಜಿ–8 ಎಂದೇ ಕರೆಯಲಾಗುತ್ತಿತ್ತು. ಆದರೆ, ರಷ್ಯಾ ಉಕ್ರೇನ್‌ ಮೇಲೆ ಆಕ್ರಮಣ ಮಾಡಿದಾಗ ಆ ದೇಶವನ್ನು ಗುಂಪಿನಿಂದ ಹೊರಹಾಕಲಾಯಿತು. ಆಗ ಮತ್ತೆ ಜಿ ಗುಂಪಿನಲ್ಲಿ 7 ದೇಶಗಳು ಉಳಿದಿವೆ.

ಕ್ವಾಡ್ ಶೃಂಗಸಭೆ: ಮೇ 24 ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯಲಿರುವ ಕ್ವಾಡ್ ಶೃಂಗಸಭೆಯಲ್ಲಿ ಬೈಡನ್ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಜಪಾನ್‌ ಪ್ರಧಾನಿ ಫುಮಿಯೊ ಕಿಶಿದಾ, ಭಾರತದ ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾ ಪ್ರಧಾನಿ ಅಲ್ಬೆನೀಸ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಕ್ವಾಡ್ ನಾಯಕರು ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಉತ್ತಮ ಗುಣಮಟ್ಟದ ಮೂಲಸೌಕರ್ಯ, ಜಾಗತಿಕ ಆರೋಗ್ಯ, ಹವಾಮಾನ ಬದಲಾವಣೆ ಕುರಿತು ಮಾತುಕತೆ ನಡೆಸಲಿದ್ದಾರೆ.

  • Hosting our Quad partners in Sydney next month will be an opportunity for Australia to help shape the region we all want to live in. 🇦🇺🇮🇳🇯🇵🇺🇸 pic.twitter.com/UUcIwD6AuN

    — Anthony Albanese (@AlboMP) April 26, 2023 " class="align-text-top noRightClick twitterSection" data=" ">

ಸಿಡ್ನಿಯಲ್ಲಿ ಕ್ವಾಡ್ ನಾಯಕರ ಶೃಂಗಸಭೆಯನ್ನು ಆಯೋಜಿಸಲಿದೆ ಎಂದು ಪ್ರಧಾನಿ ಅಲ್ಬೆನೀಸ್ ಬುಧವಾರ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. "ಆಸ್ಟ್ರೇಲಿಯಾವು ಮೇ 24 ರಂದು ಸಿಡ್ನಿಯಲ್ಲಿ ಮೊದಲ ಬಾರಿಗೆ ಕ್ವಾಡ್ ನಾಯಕರ ಶೃಂಗಸಭೆ ಆಯೋಜಿಸಲಿದೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ. ಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಮೇ ತಿಂಗಳಲ್ಲಿ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದ್ದಾರೆ. ಮಾರ್ಚ್‌ನಲ್ಲಿ ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ 4 ದಿನಗಳ ಭಾರತ ಪ್ರವಾಸದಲ್ಲಿರುವಾಗ ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಮಾಡಲಾಗಿತ್ತು.

ಕ್ವಾಡ್ ಜಾಗತಿಕ ಒಳಿತಿನ ಶಕ್ತಿಯಾಗಿದೆ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದ ಎಲ್ಲ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಜತೆಗೆ ಪ್ರದೇಶವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ ಎಂದು ಪ್ರಧಾನಿ ಮೋದಿ ಹಲವಾರು ಬಾರಿ ಹೇಳಿದ್ದರು. ಕ್ವಾಡ್ ಭಾರತ, ಜಪಾನ್, ಯುಎಸ್ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡಿರುವ ಕಾರ್ಯತಂತ್ರದ ವೇದಿಕೆಯಾಗಿದೆ. ಇಂಡೋ-ಪೆಸಿಫಿಕ್‌ನಲ್ಲಿನ ನಿರ್ಣಾಯಕ ಸಮುದ್ರ ಮಾರ್ಗಗಳನ್ನು ಯಾವುದೇ ಪ್ರಭಾವದಿಂದ ಮುಕ್ತವಾಗಿಡಲು ಹೊಸ ತಂತ್ರವನ್ನು ಅಭಿವೃದ್ಧಿಪಡಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ.

ಏನಿದು 'ಕ್ವಾಡ್‌' ಶೃಂಗಸಭೆ?: ಸರಳವಾಗಿ ಕ್ವಾಡ್ ಎಂದು ಕರೆಯಲಾಗುವ ಈ ಶೃಂಗಸಭೆಯ ಪೂರ್ಣ ಹೆಸರು ಕ್ವಾಡ್ರಿಲ್ಯಾಟರಲ್ ಸೆಕ್ಯುರಿಟಿ ಡೈಲಾಗ್. ಆಸ್ಟ್ರೇಲಿಯಾ, ಭಾರತ, ಜಪಾನ್ ಮತ್ತು ಅಮೆರಿಕ ಇದರ ನಾಲ್ಕು ಸದಸ್ಯ ರಾಷ್ಟ್ರಗಳು. ದೇಶಗಳ ನಡುವಣ ಕಾರ್ಯತಂತ್ರದ ಭದ್ರತಾ ಸಂವಾದಕ್ಕಾಗಿ ಜಾಗತಿಕ ವೇದಿಕೆಯಾಗಿ ಕ್ವಾಡ್‌ ಶೃಂಗಸಭೆ ಸೇರಲಾಗುತ್ತದೆ.

ಕ್ವಾಡ್‌ ಸೃಷ್ಟಿಯಾಗಿದ್ದು ಹೇಗೆ?: 2004ರಲ್ಲಿ ಸಂಭವಿಸಿದ ಹಿಂದೂ ಮಹಾಸಾಗರ ಸುನಾಮಿ ಬಳಿಕ ವಿಪತ್ತು ಪರಿಹಾರ ಯತ್ನಕ್ಕಾಗಿ ಜಾಗತಿಕ ಮಟ್ಟದ ವೇದಿಕೆ ಸೃಷ್ಟಿಸುವ ಕುರಿತು ಚಿಂತನೆ ನಡೆಯುತ್ತದೆ. ಈ ವೇಳೆ ಪ್ರಮುಖ ರಾಷ್ಟ್ರಗಳಾದ ಭಾರತ, ಜಪಾನ್, ಆಸ್ಟ್ರೇಲಿಯಾ ಮತ್ತು ಅಮೆರಿಕ ಸೇರಿ ವಿಪತ್ತು ಪರಿಹಾರ ಪ್ರಯತ್ನದಲ್ಲಿ ಸಹಕರಿಸುವ ನಿಟ್ಟಿನಲ್ಲಿ ಅನೌಪಚಾರಿಕ ಮೈತ್ರಿಯೊಂದನ್ನು ರಚಿಸಿದವು. 2007ರಲ್ಲಿ ಅಂದಿನ ಜಪಾನ್ ಪ್ರಧಾನಿ ಶಿಂಜೋ ಅಬೆ, ಇದೇ ಮೈತ್ರಿಯನ್ನು'ಚತುರ್ಭುಜ ಭದ್ರತಾ ಸಂವಾದ ಅಥವಾ ಕ್ವಾಡ್ ಶೃಂಗ ಎಂದು ಅಧಿಕೃತಗೊಳಿಸಿದರು.

ಇದನ್ನೂ ಓದಿ: ಜಿ-7 ಶೃಂಗಸಭೆ ಮುಗಿಸಿ ಯುಎಇಗೆ ತೆರಳಿದ ಪ್ರಧಾನಿ ಮೋದಿ

Last Updated : Apr 26, 2023, 10:37 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.