ETV Bharat / international

13 ಮಿಲಿಯನ್ ಡಾಲರ್‌ ವಂಚನೆ ಹಗರಣ: ನ್ಯೂಜೆರ್ಸಿಯಲ್ಲಿ ಭಾರತೀಯ ಮೂಲದ ಅಮೆರಿಕ ಪ್ರಜೆ ಬಂಧನ

author img

By ETV Bharat Karnataka Team

Published : Sep 1, 2023, 11:41 AM IST

ಸಾಫ್ಟ್‌ವೇರ್ ಕಂಪನಿಗಳಿಗೆ ತಾಂತ್ರಿಕ ಬೆಂಬಲ ನೀಡುವುದಾಗಿ ಹೋಗಿ 7 ಸಾವಿರಕ್ಕೂ ಹೆಚ್ಚು ಮಂದಿಗೆ 13 ಮಿಲಿಯನ್ ಡಾಲರ್‌( ಸುಮಾರು 107ಕೋಟಿ ರೂ.) ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ಅಮೆರಿಕ ಪ್ರಜೆಯನ್ನು ಬಂಧಿಸಲಾಗಿದೆ.

tech fraud case
13 ಮಿಲಿಯನ್ ಡಾಲರ್‌ ವಂಚನೆ ಹಗರಣ

ವಾಷಿಂಗ್ಟನ್ (ಅಮೆರಿಕ) : 7,000 ಕ್ಕೂ ಹೆಚ್ಚು ಸಂತ್ರಸ್ತರಿಗೆ ಬರೋಬ್ಬರಿ 13 ಮಿಲಿಯನ್ ಡಾಲರ್‌ಗಿಂತ ಅಧಿಕ ವಂಚಿಸಿರುವ ತಾಂತ್ರಿಕ ಬೆಂಬಲ ಹಗರಣದಲ್ಲಿ (technical support scam) ಭಾಗಿಯಾಗಿರುವ ಆರೋಪ ಕೇಳಿ ಬಂದ ಹಿನ್ನೆಲೆ ಭಾರತೀಯ ಅಮೆರಿಕನ್​​ ಮೂಲದ ವ್ಯಕ್ತಿಯನ್ನು ನ್ಯೂಜೆರ್ಸಿಯಲ್ಲಿ ಬಂಧಿಸಲಾಗಿದೆ ಎಂದು ಅಮೆರಿಕದ ಅಟಾರ್ನಿ ಗುರುವಾರ ಹೇಳಿದರು.

ಸಾಫ್ಟ್‌ವೇರ್ ಕಂಪನಿ ಹೆಸರಿನಲ್ಲಿ ವಂಚನೆಗೆ ಸಂಚು ರೂಪಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೋಜ್ ಯಾದವ್ ಎಂಬಾತನನ್ನು ಬಂಧಿಸಲಾಗಿದೆ. ನಿನ್ನೆ ನೆವಾರ್ಕ್ ಫೆಡರಲ್ ನ್ಯಾಯಾಲಯದಲ್ಲಿ ಅಮೆರಿಕದ​ ಮ್ಯಾಜಿಸ್ಟ್ರೇಟ್ ಕೋರ್ಟ್​​ನ ಜೋಸ್ ಆರ್​ ಅಲ್ಮಾಂಟೆ ಅವರ ಮುಂದೆ ವಿಚಾರಣೆಗೆ ಹಾಜರು ಪಡಿಸಲಾಯಿತು.

ಈ ವೇಳೆ ವಾದ ಮಂಡಿಸಿದ ವಕೀಲ ಫಿಲಿಪ್ R. ಸಾಲಿಂಗರ್ ಅವರು, ಆರೋಪಿಗಳು ಪ್ರಮುಖ ಸಾಫ್ಟ್‌ವೇರ್ ಕಂಪನಿಯೊಂದಿಗೆ ಸಂಬಂಧ ಹೊಂದಿರುವುದಾಗಿ ಹೇಳುವ ಮೂಲಕ ಅನೇಕ ಮಂದಿಯನ್ನು ದಾರಿತಪ್ಪಿಸಿದ್ದಾರೆ. ಸಾಫ್ಟ್‌ವೇರ್ ಕಂಪನಿಯ ಜನಪ್ರಿಯ ಲೆಕ್ಕಪತ್ರ ಸಾಫ್ಟ್‌ವೇರ್‌ಗೆ ಸಂಬಂಧಿಸಿದ ಸಮಸ್ಯೆಗಳಿಗೆ ತಾಂತ್ರಿಕ ಬೆಂಬಲವನ್ನು ನೀಡುವುದಾಗಿ ಹೇಳಿದ್ದು, ಆನಂತರ ಸಾಫ್ಟ್‌ವೇರ್ ಕಂಪನಿಯಿಂದ ಅಧಿಕೃತವಲ್ಲದ ಬೆಂಬಲ ಸೇವೆಗಳಿಗಾಗಿ ಸಂತ್ರಸ್ತರಿಗೆ ಅತಿಯಾದ ಶುಲ್ಕವನ್ನು ವಿಧಿಸಿದ್ದಾರೆ. ಕಂಪನಿಯು ಯಾವುದೇ ಶುಲ್ಕವನ್ನು ವಿಧಿಸಲು ಎಂದಿಗೂ ಯಾದವ್ ಮತ್ತು ಆತನ ಸಹಚರರಿಗೆ ಅಧಿಕಾರ ನೀಡರಲಿಲ್ಲ ಎಂದು ವಾದಿಸಿದರು.

ಇದನ್ನೂ ಓದಿ : Server Hack : ಅಮೆಜಾನ್ ಕಂಪನಿ ಸರ್ವರ್ ಹ್ಯಾಕ್, ಕೋಟ್ಯಂತರ ಹಣ ವಂಚನೆ ; ಓರ್ವನ ಬಂಧನ

"ಯಾದವ್ ಅವರು ಸಾಫ್ಟ್‌ವೇರ್ ಬಳಕೆದಾರರಿಗೆ ಸುಳ್ಳು ಹೇಳಿದ್ದಾರೆ. ಹೀಗಾಗಿ, ಗರಿಷ್ಠ 20 ವರ್ಷಗಳ ಜೈಲು ಶಿಕ್ಷೆ ಮತ್ತು USD 2,50,000 ದಂಡ ವಿಧಿಸಬೇಕು ಎಂದು ಎಫ್‌ಬಿಐ ವಿಶೇಷ ಏಜೆಂಟ್ ಚಾರ್ಜ್ ಜೇಮ್ಸ್ ಇ ಡೆನ್ನೆಹಿ ಹೇಳಿದರು. ಆರೋಪಿಯು ಈ ವಂಚನೆ ಪ್ರಕರಣದಲ್ಲಿ ವೈಯಕ್ತಿಕವಾಗಿ ಭಾಗವಹಿಸಿದ್ದು, ಅವರೇ ಸ್ವತಃ ರಚಿಸಿರುವ Phebs Software Services, LLC ಮೂಲಕ ಹಣವನ್ನು ಪಡೆದುಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಇದನ್ನೂ ಓದಿ : ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಲ್ಲಿ ಮೋಸ : ₹40 ಲಕ್ಷ ವಂಚನೆ ಆರೋಪ ದಾಖಲು - ₹2 ಕೋಟಿಗೂ ಹೆಚ್ಚು ವಹಿವಾಟು!

ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಫೆಬ್ಸ್ ಸಾಫ್ಟ್‌ವೇರ್ ಸೇವೆಗಳು, ಎಲ್ಎಲ್ ಸಿ, ಫೆಬ್ಸ್ ಸಾಫ್ಟ್‌ವೇರ್ ಸೇವೆಗಳು, ಪಿಎನ್ ಬುಕ್‌ಕೀಪಿಂಗ್ ಸೇವೆಗಳು, ಫೆಬ್ಸ್ ಕನ್ಸಲ್ಟಿಂಗ್, ಕ್ವಿಕ್‌ಬುಕ್ಸ್ ಟೆಕ್ ಅಸಿಸ್ಟ್, ಕ್ವಿಕ್‌ಬುಕ್ ಯುಎಸ್, ಕ್ವಿಕ್‌ಬುಕ್ಸ್ ಅಕೌಂಟಿಂಗ್ ಮತ್ತು ಕ್ವಿಕ್‌ಬುಕ್ಸ್ ಸಪೋರ್ಟ್ ಟೀಮ್ ಸೇರಿದಂತೆ ಅನೇಕ ಹೆಸರುಗಳ ಅಡಿಯಲ್ಲಿ 2017 ರಿಂದ 2023 ರವರೆಗೆ ಕಾರ್ಯನಿರ್ವಹಿಸಿದ್ದಾರೆ ಎಂದು ಫೆಡರಲ್ ಪ್ರಾಸಿಕ್ಯೂಟರ್‌ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಹುಬ್ಬಳ್ಳಿ : ಮಹಿಳೆಯರಿಗೆ ರಿಯಾಯಿತಿ ಆಸೆ ತೋರಿಸಿ ಲಕ್ಷಾಂತರ ರೂ ಮೋಸ ಮಾಡಿದ ಕಂಪನಿ.. ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.