ETV Bharat / international

ಸುಡಾನ್​ನಲ್ಲಿನ ಅಮೆರಿಕ ರಾಯಭಾರ ಕಚೇರಿ ಬಂದ್: ತಾಯ್ನಾಡಿಗೆ ಮರಳಿದ ಸಿಬ್ಬಂದಿ

author img

By

Published : Apr 23, 2023, 12:28 PM IST

ಯುದ್ಧಪೀಡಿತ ಸುಡಾನ್​ನಿಂದ ತನ್ನ ಎಲ್ಲ ನಾಗರಿಕರನ್ನು ಮರಳಿ ಕರೆತರಲು ಅಮೆರಿಕ ಸೇನಾ ಕಾರ್ಯಾಚರಣೆ ಆರಂಭಿಸಿದೆ. ಈ ಮಧ್ಯೆ ಅಮೆರಿಕವು ಸುಡಅನ್​ನಲ್ಲಿನ ತನ್ನ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದೆ.

US military evacuates diplomats from Sudan: Biden

ವಾಷಿಂಗ್ಟನ್ : ಸುಡಾನ್‌ನಲ್ಲಿ ಸೇನಾಪಡೆಗಳ ಮಧ್ಯೆ ಹಿಂಸಾಚಾರ ಮುಂದುವರೆದಿದ್ದು, ಖಾರ್ಟೂಮ್‌ನಿಂದ ತನ್ನ ಎಲ್ಲ ರಾಯಭಾರ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರಗೆ ತರಲು ಅಮೆರಿಕ ಮಿಲಿಟರಿ ಕಾರ್ಯಾಚರಣೆ ಆರಂಭಿಸಿರುವುದಾಗ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. ಶನಿವಾರ ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅಧ್ಯಕ್ಷ ಬಿಡೆನ್, ನಮ್ಮ ರಾಯಭಾರ ಕಚೇರಿಯ ಸಿಬ್ಬಂದಿಯ ಅಸಾಧಾರಣ ಬದ್ಧತೆಯ ಬಗ್ಗೆ ನಮಗೆ ಹೆಮ್ಮೆಯಿದೆ. ಅವರು ತಮ್ಮ ಕರ್ತವ್ಯಗಳನ್ನು ಧೈರ್ಯ ಮತ್ತು ವೃತ್ತಿಪರತೆಯಿಂದ ನಿರ್ವಹಿಸಿದ್ದಾರೆ ಮತ್ತು ಸುಡಾನ್ ಜನರೊಂದಿಗೆ ಅಮೆರಿಕದ ಸ್ನೇಹ ಮತ್ತು ಸಂಪರ್ಕವನ್ನು ಸಾಕಾರಗೊಳಿಸಿದ್ದಾರೆ ಎಂದು ಹೇಳಿದ್ದಾರೆ. ತಮ್ಮ ಆದೇಶದ ಮೇರೆಗೆ ಸುಡಾನ್​ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಲಾಯಿತು ಎಂದು ಅವರು ತಿಳಿಸಿದ್ದಾರೆ.

ನಮ್ಮ ರಾಯಭಾರ ಸಿಬ್ಬಂದಿಯನ್ನು ಸುರಕ್ಷಿತವಾಗಿ ಕರೆತಂದ ನಮ್ಮ ಸೇನಾಪಡೆ ಯೋಧರ ಅಪ್ರತಿಮ ಕೌಶಲ್ಯಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ನಮ್ಮ ಈ ಕಾರ್ಯಾಚರಣೆಯ ಯಶಸ್ಸಿಗೆ ನಿರ್ಣಾಯಕ ಬೆಂಬಲ ನೀಡಿದ ಜಿಬೌಟಿ, ಇಥಿಯೋಪಿಯಾ ಮತ್ತು ಸೌದಿ ಅರೇಬಿಯಾ ದೇಶಗಳಿಗೆ ನಾನು ಧನ್ಯವಾದಗಳು ಎಂದು ವೈಟ್ ಹೌಸ್ ಬಿಡುಗಡೆ ಮಾಡಿದ ಬಿಡೆನ್ ಹೇಳಿಕೆಯಲ್ಲಿ ತಿಳಿಸಲಾಗಿದೆ. ಸುಡಾನ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಅಧ್ಯಕ್ಷ ಬಿಡೆನ್ ತಿಳಿಸಿದ್ದಾರೆ. ಸಾಧ್ಯವಾದ ಮಟ್ಟಿಗೆ ಸುಡಾನ್‌ನಲ್ಲಿರುವ ಅಮೆರಿಕನ್ನರಿಗೆ ಸಹಾಯ ಮಾಡಲು ನನ್ನ ತಂಡ ಕೆಲಸ ಮಾಡುತ್ತಿದ್ದು, ಅದರ ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದ್ದೇನೆ ಎಂದು ಅವರು ಹೇಳಿದರು.

ಸುಡಾನ್‌ನಲ್ಲಿನ ಹಿಂಸಾಚಾರದಲ್ಲಿ ಈಗಾಗಲೇ ನೂರಾರು ಮುಗ್ಧ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇದು ಮನಸ್ಸಿಗೆ ಒಪ್ಪುವಂಥದ್ದಲ್ಲ ಮತ್ತು ಇದು ನಿಲ್ಲಬೇಕು. ಯುದ್ಧಮಾಡುತ್ತಿರುವ ಗುಂಪುಗಳು ತಕ್ಷಣವೇ ಬೇಷರತ್ತಾಗಿ ಕದನ ವಿರಾಮ ಜಾರಿಗೊಳಿಸಬೇಕು. ಅಡೆತಡೆಯಿಲ್ಲದ ಮಾನವೀಯ ಪ್ರವೇಶವನ್ನು ಅನುಮತಿಸಬೇಕು ಮತ್ತು ಸುಡಾನ್ ಜನರ ಇಚ್ಛೆಯನ್ನು ಗೌರವಿಸಬೇಕು ಎಂದು ಬಿಡೆನ್ ಯುದ್ಧ ನಿರತ ಸೇನಾಪಡೆಯ ಗುಂಪುಗಳಿಗೆ ಮನವಿ ಮಾಡಿದ್ದಾರೆ.

ಅಮೆರಿಕದ ನಾಗರಿಕರನ್ನು ಮರಳಿ ಕರೆತರುವ ಕಾರ್ಯಾಚರಣೆಗಳು ಶನಿವಾರವೂ ಮುಂದುವರೆದಿದ್ದವು. ಶನಿವಾರ 150 ಕ್ಕೂ ಹೆಚ್ಚು ನಾಗರಿಕರು, ರಾಜತಾಂತ್ರಿಕರು ಮತ್ತು ಅಂತಾರಾಷ್ಟ್ರೀಯ ಅಧಿಕಾರಿಗಳನ್ನು ಸಮುದ್ರ ಮಾರ್ಗದ ಮೂಲಕ ಸೌದಿ ಅರೇಬಿಯಾದ ಜೆಡ್ಡಾ ಬಂದರಿಗೆ ಕರೆತರಲಾಯಿತು. ಇದರಲ್ಲಿ ಗಲ್ಫ್ ದೇಶ ಸೇರಿದಂತೆ ಈಜಿಪ್ಟ್, ಪಾಕಿಸ್ತಾನ ಮತ್ತು ಕೆನಡಾದ ಪ್ರಜೆಗಳೂ ಇದ್ದಾರೆ. ಏತನ್ಮಧ್ಯೆ ಬ್ರಿಟನ್ ಕೂಡ ತನ್ನ ಸಿಬ್ಬಂದಿಯನ್ನು ಬೇರೆ ಕಡೆಗೆ ಸ್ಥಳಾಂತರಿಸುವ ಮಾರ್ಗಗಳನ್ನು ಪರಿಶೀಲಿಸುತ್ತಿದೆ.

ಕೆನಡಾ ಸಹ ಸುಡಾನ್​ನಲ್ಲಿರುವ ತನ್ನ ಪ್ರಜೆಗಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಆದಷ್ಟು ಸುರಕ್ಷಿತ ಸ್ಥಳಗಳಲ್ಲಿ ಅವಿತುಕೊಳ್ಳುವಂತೆ ತನ್ನ ಪ್ರಜೆಗಳಿಗೆ ಅದು ಸೂಚಿಸಿದೆ. ಸೇನಾ ಪಡೆಗಳ ನಡುವೆ ನಡೆದ ಭೀಕರ ಹೋರಾಟದಿಂದ ಸುಡಾನ್​ನಲ್ಲಿ ಈಗಾಗಲೇ 400 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಡಬ್ಲ್ಯೂಎಚ್​​​ಒ ಹೇಳಿದೆ. ದೇಶದಲ್ಲಿನ ಹಲವಾರು ಆಸ್ಪತ್ರೆಗಳು ಬಂದ್ ಆಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡುವುದು ಕೂಡ ಅಸಾಧ್ಯವಾಗುತ್ತಿದೆ.​

ಇದನ್ನೂ ಓದಿ : ಸುಡಾನ್​ನಲ್ಲಿ ಮೃತರ ಸಂಖ್ಯೆ 400ಕ್ಕೇರಿಕೆ: 3500ಕ್ಕೂ ಹೆಚ್ಚು ಮಂದಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.