ETV Bharat / international

ಅಮೆರಿಕಾದ ಗೈರುಹಾಜರಾತಿ ಮಧ್ಯೆಯೇ ಗಾಜಾಕ್ಕೆ ನೆರವು ಒದಗಿಸುವ ನಿರ್ಣಯ ಅಂಗೀಕರಿಸಿದ ವಿಶ್ವಸಂಸ್ಥೆ ಭದ್ರತಾ ಮಂಡಳಿ

author img

By ANI

Published : Dec 23, 2023, 2:21 PM IST

ಅಮೆರಿಕಾದ ಗೈರುಹಾಜರಾತಿ ಮಧ್ಯೆಯೇ ಗಾಜಾಕ್ಕೆ ನೆರವು ನೀಡುವ ನಿರ್ಣಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಅಂಗೀಕರಿಸಿದೆ.

passes resolution
ವಿಶ್ವಸಂಸ್ಥೆ ಭದ್ರತಾ ಮಂಡಳಿ

ನ್ಯೂಯಾರ್ಕ್ (ಅಮೆರಿಕಾ): ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧಕ್ಕೆ ಮಾನವೀಯ ವಿರಾಮ, ಗಾಜಾಕ್ಕೆ ಹೆಚ್ಚಿನ ನೆರವು ಒದಗಿಸಲು ಕರೆ ನೀಡುವ ನಿರ್ಣಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್​ಎಸ್​ಸಿ) ಶುಕ್ರವಾರ ಅಂಗೀಕರಿಸಿದೆ. ಯುದ್ಧಕ್ಕೆ ಶಾಶ್ವತ ವಿರಾಮ ಹಾಕಲು ಪೂರಕ ವಾತಾವರಣ ಸೃಷ್ಟಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಿರ್ಣಯ ಹೇಳುತ್ತದೆ ಎಂದು ಸಿಎನ್​ಎನ್​ ವರದಿ ಮಾಡಿದೆ.

ಅಮೆರಿಕದ ಗೈರು ಹಾಜರಾತಿ ಮಧ್ಯೆಯೇ ಗಾಜಾಗೆ ನೆರವು ನೀಡುವ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ನಿರ್ಣಯ ಅಂಗೀಕಾರ ಮಾಡಿದೆ. ಯುಎಸ್ ಮತ್ತೊಮ್ಮೆ ಗಾಜಾಕ್ಕೆ ನೆರವು ನೀಡುವ ನಿರ್ಣಯದ ಮೇಲೆ ಮತ ಚಲಾಯಿಸಲು ವಿಳಂಬ ಮಾಡಿದೆ. ಜೊತೆಗೆ ನಿರ್ಣಯವನ್ನು ದುರ್ಬಲಗೊಳಿಸಲು ಕೂಡ ಅಮೆರಿಕ ನಿರಾಕರಿಸಿದೆ. ಪರಿಷ್ಕೃತ ಕರಡು ಪ್ರಸ್ತಾವನೆ ಮೇಲೆ ಯುಎನ್​ ಸದಸ್ಯರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದಾರೆ.

ಯುಎಸ್ ರಾಯಭಾರಿ ಲಿಂಡಾ ಥಾಮಸ್ ಗ್ರೀನ್‌ಫೀಲ್ಡ್ ಅವರು, ಈ ನಿರ್ಣಯವನ್ನು ಅಮೆರಿಕ ಬೆಂಬಲಿಸುತ್ತದೆ. ಆದರೆ, ಪ್ರಸ್ತಾವವನ್ನು ದುರ್ಬಲಗೊಳಿಸಲಾಗುತ್ತಿದೆ ಎಂಬುದು ಸರಿಯಲ್ಲ. ಕರಡು ನಿರ್ಣಯವು ಅತ್ಯಂತ ಪ್ರಬಲವಾಗಿದೆ. ಅರಬ್ ದೇಶಗಳ ಕಡೆಯಿಂದ ಸಂಪೂರ್ಣ ಬೆಂಬಲ ಲಭಿಸಿದೆ. ಗಾಜಾಕ್ಕೆ ಮಾನವೀಯ ನೆರವಿನ ಅಗತ್ಯತೆಯನ್ನು ಒತ್ತಿ ಹೇಳುತ್ತದೆ ಎಂದು ತಿಳಿಸಿದ್ದಾರೆ.

ಯುದ್ಧವನ್ನು ತಕ್ಷಣ ಹಾಗೂ ಶಾಶ್ವತವಾಗಿ ನಿಲ್ಲಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಈ ನಿರ್ಣಯವು ಕರೆ ನೀಡುತ್ತದೆ. ಆದರೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ವ್ಯಾಖ್ಯಾನಿಸಲಾಗಿಲ್ಲ. ಆದರೆ, ವಿಶ್ವಸಂಸ್ಥೆಯಿಂದ ಎರಡೂ ರಾಷ್ಟ್ರಗಳ ನಡುವಿನ ಯುದ್ಧಕ್ಕೆ ಅಂತ್ಯ ಹೇಳುವ ಬಗ್ಗೆ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಅಧಿಕಾರದ ಅಡಿಯಲ್ಲಿ ಗಾಜಾ ಪಟ್ಟಿಯಲ್ಲಿ ಅಗತ್ಯ ಸಿಬ್ಬಂದಿ ಮತ್ತು ಸಲಕರಣೆಗಳೊಂದಿಗೆ ಮೇಲ್ವಿಚಾರಣಾ ಕಾರ್ಯವಿಧಾನವನ್ನು ಸ್ಥಾಪಿಸಲು ವಿಶ್ವಸಂಸ್ಥೆ ಅಂಗೀಕಾರ ಮಾಡಿರುವ ನಿರ್ಣಯದ ಪ್ರಮುಖ ಅಂಶವಾಗಿದೆ ಎಂದು ಮೂಲಗಳು ತಿಳಿಸಿದ್ದವು. ಗಾಜಾ ಪಟ್ಟಿಗೆ ಹೋಗುವ ಸಹಾಯಕ್ಕಾಗಿ ವಿಶ್ವಸಂಸ್ಥೆ ರಚಿಸಿದ ಮೇಲ್ವಿಚಾರಣಾ ಕಾರ್ಯವಿಧಾನದ ಪ್ರಸ್ತಾಪವು ತೊಡಕಾಗಿರುತ್ತದೆ. ಈ ನಿರ್ಣಯವು ಸಹಾಯದ ವಿತರಣೆಯನ್ನು ನಿಧಾನಗೊಳಿಸುತ್ತದೆ ಎಂದು ಅಮೆರಿಕಾ ವಾದ ಮಾಡಿತ್ತು.

ಇದನ್ನೂ ಓದಿ: 75ನೇ ಗಣರಾಜ್ಯೋತ್ಸವಕ್ಕೆ ಆಹ್ವಾನ: ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಫ್ರಾನ್ಸ್ ಅಧ್ಯಕ್ಷ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.