ETV Bharat / international

ಐಸಿಸ್​​ನಿಂದ ರಾಸಾಯನಿಕ ಅಸ್ತ್ರ ಬಳಕೆ: ವಿಶ್ವಸಂಸ್ಥೆ ತನಿಖಾಧಿಕಾರಿಗಳಿಂದ ಸಾಕ್ಷ್ಯಸಂಗ್ರಹ

author img

By

Published : Jun 8, 2023, 7:13 AM IST

ಇರಾಕ್​ನ ಕೆಲ ಪ್ರದೇಶಗಳನ್ನು ವಶಪಡಿಸಿಕೊಂಡಿರುವ ಐಸಿಸ್​ ಉಗ್ರರು ರಾಸಾಯನಿಕ ಮತ್ತು ಜೈವಿಕ ಅಸ್ತ್ರಗಳ ಪ್ರಯೋಗ ನಡೆಸುತ್ತಿರುವುದರ ಬಗ್ಗೆ ವಿಶ್ವಸಂಸ್ಥೆ ತನಿಖೆ ಮಾಡುತ್ತಿದೆ.

ಐಸಿಸ್​​ನಿಂದ ರಾಸಾಯನಿಕ ಅಸ್ತ್ರ ಬಳಕೆ
ಐಸಿಸ್​​ನಿಂದ ರಾಸಾಯನಿಕ ಅಸ್ತ್ರ ಬಳಕೆ

ವಿಶ್ವಸಂಸ್ಥೆ: ಇರಾಕ್​​ನ ಕೆಲ ಪ್ರದೇಶಗಳನ್ನು ಐಸಿಸ್​​ ಉಗ್ರರು 2014 ರಲ್ಲಿ ವಶಪಡಿಸಿಕೊಂಡ ನಂತರ ರಾಸಾಯನಿಕ ಅಸ್ತ್ರಗಳ ಅಭಿವೃದ್ಧಿ ಮತ್ತು ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ, ವಿಶ್ವಸಂಸ್ಥೆ ಅಧಿಕಾರಿಗಳು ಈ ಬಗ್ಗೆ ಪುರಾವೆಗಳನ್ನು ಸಂಗ್ರಹಣೆ ಮಾಡುತ್ತಿದ್ದಾರೆ. ಮಕ್ಕಳು, ಸುನ್ನಿ ಮತ್ತು ಶಿಯಾ ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಯಾಜಿದಿಗಳ ವಿರುದ್ಧದ ಹಿಂಸಾಚಾರ ಮತ್ತು ಅಪರಾಧಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

2016 ರಲ್ಲಿ ಈಶಾನ್ಯ ಇರಾಕ್‌ನ ಕಿರ್ಕುಕ್‌ನ ಶಿಯಾ ತುರ್ಕಮೆನ್ ಪಟ್ಟಣದ ಮೇಲ ರಾಸಾಯನಿಕ ದಾಳಿ ನಡೆಸಲಾಗಿದ್ದು, ಇದರಿಂದ ಆ ಪ್ರದೇಶದಲ್ಲಿನ ಜನರು ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ವಿಶ್ವಸಂಸ್ಥೆ ತಿಳಿಸಿದೆ.

ಐಎಸ್ಐಎಲ್ ಎಂದೂ ಕರೆಯಲ್ಪಡುವ ಇಸ್ಲಾಮಿಕ್ ಸ್ಟೇಟ್ ಬಳಸಿದ ರಾಸಾಯನಿಕ ಅಸ್ತ್ರಗಳ ತನಿಖೆಗೆ ಆದ್ಯತೆ ನೀಡಲಾಗಿದೆ. ಐಎಸ್ಐಎಲ್ ಹಲವಾರು ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ರೂಪಿಸಿದೆ. ರಾಕೆಟ್‌ಗಳು ಮತ್ತು ಮಾರ್ಟರ್‌ಗಳು ಮತ್ತು ಸುಧಾರಿತ ಸ್ಫೋಟಕ ಸಾಧನಗಳಿವೆ. ಇವುಗಳನ್ನೇ ತಾಜಾ ಖುರ್ಮಾತು ಸುತ್ತಮುತ್ತಲಿನ ಪ್ರದೇಶಗಳ ವಸತಿ ಮತ್ತು ಕೃಷಿ ಕ್ಷೇತ್ರಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ ಎಂದು ತನಿಖಾಧಿಕಾರಿಗಳ ತಂಡ ಹೇಳಿದೆ.

ತಾಜಾ ಖುರ್ಮಾತು ಮೇಲಾದ ದಾಳಿಯು ಐಎಸ್‌ಐಎಲ್‌ನಿಂದ ರಾಸಾಯನಿಕ ಅಸ್ತ್ರಗಳ ಮೊದಲ ಬಳಕೆಯಾಗಿದೆ. 6,000 ಕ್ಕೂ ಹೆಚ್ಚು ಜನರು ಗಾಯಕ್ಕೆ ತುತ್ತಾಗಿದ್ದಾರೆ. ಮಕ್ಕಳ ಜನನದ ಮೇಲೆ ಇದು ದುಷ್ಪರಿಣಾಮ ಬಿದ್ದಿದೆ. ಅನೇಕ ಜನರು ದೀರ್ಘಕಾಲೀನ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ ಎಂದು ಗೊತ್ತಾಗಿದೆ. ವಿಶ್ವಸಂಸ್ಥೆಯ ತಂಡ ತಾಜಾ ಖುರ್ಮಾತುದಲ್ಲಿ ವಶಪಡಿಸಿಕೊಂಡ ಯುದ್ಧಸಾಮಗ್ರಿಗಳು, ಅವಶೇಷಗಳನ್ನ ವಿಶ್ಲೇಷಣೆಗೆ ಒಳಪಡಿಸಿದೆ.

ಐಸಿಸ್​​ ಉಗ್ರರು ಇರಾಕಿನ ಕೆಲ ನಗರಗಳನ್ನು ವಶಪಡಿಸಿಕೊಂಡರು. 2014 ರಲ್ಲಿ ಸಿರಿಯಾ ಮತ್ತು ಇರಾಕ್‌ನಲ್ಲಿನ ದೊಡ್ಡ ಭೂಪ್ರದೇಶದಲ್ಲಿ ತಮ್ಮದೇ ಅಧಿಕಾರ ಘೋಷಿಸಿದರು. ಮೂರು ವರ್ಷಗಳ ರಕ್ತಸಿಕ್ತ ಯುದ್ಧದ ನಂತರ 2017 ರಲ್ಲಿ ಈ ಗುಂಪನ್ನು ಔಪಚಾರಿಕವಾಗಿ ಇರಾಕ್‌ನಲ್ಲಿ ಸೋಲಿಸಲಾಯಿತು. ಈ ವೇಳೆ ನೂರಾರು ಜನರ ಪ್ರಾಣ ಬಲಿಯಾಗಿದೆ. ಸ್ಲೀಪರ್ ಸೆಲ್‌ಗಳು ಇರಾಕ್‌ನ ವಿವಿಧ ಭಾಗಗಳಲ್ಲಿ ಈಗಲೂ ದಾಳಿಗಳನ್ನು ನಡೆಸುತ್ತಲೇ ಇರುತ್ತವೆ.

ವಿಶ್ವಸಂಸ್ಥೆಯ ತನಿಖಾ ತಂಡ: ವಿಶ್ವಸಂಸ್ಥೆಯು ಐಸಿಎಸ್​ನ ಒಡೆತನದಲ್ಲಿರುವ ಕೆಲ ಭಾಗಗಳ ಮೇಲಾದ ದಾಳಿಗಳನ್ನು ತನಿಖೆ ಮಾಡಲು UNITAD ಎಂದು ಕರೆಯಲ್ಪಡುವ ತನಿಖಾ ತಂಡವನ್ನು 2017 ರಲ್ಲಿ ರಚನೆ ಮಾಡಿದೆ. ಇದು ಇಸ್ಲಾಮಿಕ್ ಸ್ಟೇಟ್‌ನ ಅಪರಾಧಿಗಳನ್ನು ವಿಚಾರಣೆಗೆ ಒಳಪಡಿಸಬಹುದು. ಇದು ಇರಾಕಿನ ನ್ಯಾಯಾಂಗ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದೆ.

ಮೇ 2021 ರಲ್ಲಿ UNITAD ಐಸಿಎಸ್​ ಉಗ್ರರು ಬಳಸಿದ ಜೈವಿಕ ಮತ್ತು ರಾಸಾಯನಿಕ ಬಾಂಬ್​ಗಳು ಕೈದಿಗಳ ಮೇಲೆ ದುಷ್ಪರಿಣಾಮಗಳನ್ನು ಉಂಟು ಮಾಡಿತು. ಇದು ಸಾವಿಗೂ ಕಾರಣವಾಯಿತು. ಹೀಗಾಗಿ ತನಿಖೆ ಪ್ರಾರಂಭಿಸಲಾಗಿದೆ. ರಾಸಾಯನಿಕ ದಾಳಿಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳು ಲಭ್ಯವಿವೆ ಎಂದು ತನಿಖಾಧಿಕಾರಿಗಳು ಭದ್ರತಾ ಮಂಡಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ; ಬ್ರೈನ್ ಟ್ಯೂಮರ್ ದಿನ: ರೋಗ ಲಕ್ಷಣ ತಿಳಿದ ತಕ್ಷಣ ವೈದ್ಯರನ್ನು ಸಂಪರ್ಕಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.