ETV Bharat / international

'ಬೆಂಕಿಯೊಂದಿಗೆ ಆಡುವವರು ಸುಟ್ಟು ಹೋಗ್ತಾರೆ': ತೈವಾನ್‌ ವಿಚಾರವಾಗಿ ಅಮೆರಿಕಕ್ಕೆ ಚೀನಾ ಎಚ್ಚರಿಕೆ

author img

By

Published : Jul 29, 2022, 8:42 AM IST

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ತೈವಾನ್ ವಿಷಯದ ಕುರಿತು ಅಮೆರಿಕಾಧ್ಯಕ್ಷ ಜೋ ಬೈಡನ್‌ ಅವರಿಗೆ ಕಠಿಣ ಪದಗಳಲ್ಲಿ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Those Who Play With Fire Eventually Get Burned  Xi Tells Biden On Taiwan  President Joe Biden and Chinese counterpart Xi Jinping meeting  America President Joe Biden news  Chinese counterpart Xi Jinping news  ಬೆಂಕಿಯೊಂದಿಗೆ ಆಡುವವರು ಅಂತಿಮವಾಗಿ ಸುಟ್ಟು ಹೋಗುತ್ತಾರೆ  ಅಮೆರಿಕಾ ಅಧ್ಯಕ್ಷ ಬೈಡನ್​ಗೆ ಎಚ್ಚರಿಕೆ ನೀಡಿದ ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸುದ್ದಿ  ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸುದ್ದಿ
ಬೈಡೆನ್​ಗೆ ಕ್ಸಿ ಎಚ್ಚರಿಕೆ

ಬೀಜಿಂಗ್: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿನ್ನೆ ದೂರವಾಣಿ ಮೂಲಕ ಸುಮಾರು ಎರಡೂವರೆ ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಚೀನಾ ತೈವಾನ್‌ಗೆ ಸಂಬಂಧಿಸಿದಂತೆ ಅಮೆರಿಕಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಉಭಯ ದೇಶಗಳ ಮುಖ್ಯಸ್ಥರ ನಡುವಿನ ಮಾತುಕತೆಯ ನಂತರ ಕ್ಸಿ ಜಿನ್‌ಪಿಂಗ್ ತೈವಾನ್‌ ವಿಚಾರವಾಗಿ ಬೈಡನ್‌ಗೆ, "ಬೆಂಕಿಯೊಂದಿಗೆ ಆಡುವವರು ಅಂತಿಮವಾಗಿ ಸುಟ್ಟು ಹೋಗುತ್ತಾರೆ" ಎಂದು ಎಚ್ಚರಿಸಿರುವುದಾಗಿ ಚೀನಾ ಮಾಧ್ಯಮಗಳು ಹೇಳಿವೆ. ಅಮೆರಿಕ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೊವೆಲ್ ತೈವಾನ್‌ಗೆ ಭೇಟಿ ನೀಡಲು ಯೋಜಿಸುತ್ತಿದ್ದಾರೆ. ಈ ಸಂದರ್ಭದಲ್ಲೇ ಚೀನಾ ಗರಂ ಆಗಿದೆ. ತೈವಾನ್ ಒಂದು ಸ್ವ-ಆಡಳಿತ ದ್ವೀಪ. ಇದನ್ನು ಚೀನಾ ತನ್ನದೆಂದು ಪರಿಗಣಿಸುತ್ತಿದೆ. ಹಾಗಾಗಿ, ಅಮೆರಿಕದ ಈ ಭೇಟಿಯನ್ನು ಪ್ರಚೋದನಕಾರಿ ನಡೆಯೆಂದು ಚೀನಾ ಪರಿಗಣಿಸುತ್ತಿದೆ.

ಇದನ್ನೂ ಓದಿ: 60 ವರ್ಷ ಹಿಂದೆ ಕಳವಾಗಿದ್ದ ವಿಗ್ರಹ ವಾಷಿಂಗ್ಟನ್​​​ನಲ್ಲಿ ಪತ್ತೆ: ಮರಳಿ ತರಲು ಭಾರತ ಪ್ರಯತ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.