ETV Bharat / international

ಸ್ಥೂಲಕಾಯತೆಗೆ ನಿಜವಾದ ಕಾರಣವೇನು? ಹೊಸ ಅಧ್ಯಯನದಲ್ಲಿ ಅಚ್ಚರಿಯ ಅಂಶ ಪತ್ತೆ

author img

By ETV Bharat Karnataka Team

Published : Oct 24, 2023, 9:50 PM IST

Updated : Oct 24, 2023, 10:45 PM IST

ಫ್ರಕ್ಟೋಸ್ (ಸಕ್ಕರೆಯ ವಿಧ) ಸ್ಥೂಲಕಾಯತೆಗೆ ನಿಜವಾದ ಕಾರಣವೆಂದು ಹೊಸ ಅಧ್ಯಯನ ತಿಳಿಸಿದೆ.

ಸ್ಥೂಲಕಾಯತೆ
ಸ್ಥೂಲಕಾಯತೆ

ನ್ಯೂಯಾರ್ಕ್: ಸ್ಥೂಲಕಾಯತೆಯ ಹೆಚ್ಚಳಕ್ಕೆ ಕಾರಣವೇನೆಂದು ಪೌಷ್ಟಿಕಾಂಶ ತಜ್ಞರು ಹಲವು ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದಾರೆ. ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳು ಅಧಿಕವಾಗಿರುವ ಆಹಾರಗಳು ಈ ಸ್ಥಿತಿಗೆ ಕೊಡುಗೆ ನೀಡುತ್ತಿದ್ದರೂ, ಫ್ರಕ್ಟೋಸ್ (ಸಕ್ಕರೆಯ ವಿಧ) ಸ್ಥೂಲಕಾಯತೆಗೆ ನಿಜವಾದ ಕಾರಣ ಎಂಬ ಅಚ್ಚರಿಯ ಅಂಶವನ್ನು ಅಧ್ಯಯನ ತಿಳಿಸಿದೆ.

ಕೊಲೊರಾಡೋ ವಿಶ್ವವಿದ್ಯಾಲಯದ ಆನ್‌ಸ್ಚುಟ್ಜ್ ವೈದ್ಯಕೀಯ ಕ್ಯಾಂಪಸ್‌ನ ರಿಚರ್ಡ್ ಜಾನ್ಸನ್ ಹೇಳುವ ಪ್ರಕಾರ, ಸ್ಥೂಲಕಾಯಕ್ಕೆ ಪ್ರಾಥಮಿಕ ಕಾರಣ ಫ್ರಕ್ಟೋಸ್. ಪ್ರಕ್ಟೋಸ್​ ಸಕ್ಕರೆ ಮತ್ತು ಕಾರ್ನ್ ಸಿರಪ್‌ನಲ್ಲಿ ಹೆಚ್ಚಾಗಿರುತ್ತದೆ. ಕಾರ್ಬೋಹೈಡ್ರೇಟ್‌ಗಳಿಂದ (ವಿಶೇಷವಾಗಿ ಗ್ಲೂಕೋಸ್) ದೇಹದಲ್ಲಿ ಫ್ರಕ್ಟೋಸ್ ಹೆಚ್ಚಳವಾಗುತ್ತದೆ ಎಂದಿದ್ದಾರೆ.

ಫ್ರಕ್ಟೋಸ್ ಚಯಾಪಚಯಗೊಂಡಾಗ ದೇಹದಲ್ಲಿ ಸಕ್ರಿಯ ಶಕ್ತಿಯನ್ನು ಕಡಿಮೆ ಮಾಡುತ್ತದೆ. (ಎಟಿಪಿ, ಅಥವಾ ಅಡೆನೊಸಿನ್ ಟ್ರೈಫಾಸ್ಫೇಟ್ ಎಂದು ಕರೆಯಲಾಗುತ್ತದೆ) ಇದರಿಂದಾಗಿ ವ್ಯಕ್ತಿಗೆ ಹಸಿವು ಜಾಸ್ತಿಯಾಗುತ್ತದೆ. ಇದರ ಪರಿಣಾಮ ಹೆಚ್ಚಿನ ಆಹಾರ ಸೇವಿಸುವಂತೆ ಪ್ರೇರೇಪಿಸುತ್ತದೆ.

ಜಾನ್ಸನ್ ಇದನ್ನು "ಫ್ರಕ್ಟೋಸ್ ಸರ್ವೇವೈವಲ್​ ಹಿಪ್ನೋಥಿಸಿಸ್​'' ಎಂದು ಕರೆದಿದ್ದಾರೆ. "ಫ್ರಕ್ಟೋಸ್ ನಮ್ಮ ಚಯಾಪಚಯವನ್ನು ಕಡಿಮೆ ಮಾಡುತ್ತದೆ. ಇದು ನಾವು ಹಸಿವಿನ ನಿಯಂತ್ರಣ ಕಳೆದುಕೊಳ್ಳಲು ಪ್ರಚೋದಿಸುತ್ತದೆ. ಆದರೆ ಕೊಬ್ಬಿನ ಆಹಾರಗಳು ತೂಕ ಹೆಚ್ಚಿಸುವ ಕ್ಯಾಲೊರಿಗಳ ಪ್ರಮುಖ ಮೂಲವಾಗಿದೆ" ಎಂದು ಜಾನ್ಸನ್ ವಿವರಿಸಿದ್ದಾರೆ.

ಸ್ಥೂಲಕಾಯತೆಯು ಹೃದ್ರೋಗ, ಮಧುಮೇಹ, ಕ್ಯಾನ್ಸರ್ ಮತ್ತು ಬುದ್ಧಿಮಾಂದ್ಯತೆ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂಬ ಅಪಾಯಕಾರಿ ಅಂಶಗಳನ್ನು ಅವರು ತಿಳಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ದತ್ತಾಂಶದ ಪ್ರಕಾರ, ವಿಶ್ವಾದ್ಯಂತ 1 ಶತಕೋಟಿಗೂ ಹೆಚ್ಚು ಜನರು ಬೊಜ್ಜು ಹೊಂದಿದ್ದಾರೆ. ಇದರಲ್ಲಿ 650 ಮಿಲಿಯನ್ ವಯಸ್ಕರು, 340 ಮಿಲಿಯನ್ ಹದಿಹರೆಯದವರು ಮತ್ತು 39 ಮಿಲಿಯನ್ ಮಕ್ಕಳು ಸೇರಿದ್ದಾರೆ.

ವಿಶ್ವ ಸ್ಥೂಲಕಾಯ ಒಕ್ಕೂಟವು 2030 ರ ವೇಳೆಗೆ ಐದು ಮಹಿಳೆಯರಲ್ಲಿ ಒಬ್ಬರು ಮತ್ತು ಏಳು ಪುರುಷರಲ್ಲಿ ಒಬ್ಬರು ಬೊಜ್ಜು ಹೊಂದಿರುತ್ತಾರೆ ಎಂದು ಭವಿಷ್ಯ ನುಡಿದಿದೆ. ಸ್ಥೂಲಕಾಯಕ್ಕೆ ಕಾರಣವಾಗುವ ವಿವಿಧ ಸಿದ್ಧಾಂತಗಳು ಒಂದಕ್ಕೊಂದು ಹೊಂದಿಕೆಯಾಗುವುದಿಲ್ಲ ಎಂದು ಸಂಶೋಧನಾ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನ ಸೂಚಿಸುತ್ತದೆ.

ಹಣ್ಣುಗಳು ಹೆಚ್ಚಿನ ಫ್ರಕ್ಟೋಸ್ ಆಹಾರಗಳಾಗಿವೆ. ಫ್ರಕ್ಟೋಸ್ ಸಕ್ರಿಯ ಶಕ್ತಿಯನ್ನು ಗಮನಾರ್ಹವಾಗಿ ಕಡಿಮೆಗೊಳಿಸುತ್ತದೆ. ಕೊಬ್ಬು ಸಂಗ್ರಹವಾದ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಹೆಚ್ಚಿನ ಫ್ರಕ್ಟೋಸ್ ಆಹಾರಗಳನ್ನು ತಿನ್ನುವುದು ಕೊಬ್ಬಿನ ಶೇಖರಣೆಯಿಂದ ಸಕ್ರಿಯ ಶಕ್ತಿಯನ್ನು ಬದಲಿಸುವುದನ್ನು ನಿರ್ಬಂಧಿಸುತ್ತದೆ ಎಂದು ತಿಳಿದುಬಂದಿದೆ. "ಈ ಸಿದ್ಧಾಂತವು ಸ್ಥೂಲಕಾಯತೆಯನ್ನು ಕಡಿಮೆ-ಶಕ್ತಿಯ ಸ್ಥಿತಿಯಾಗಿ ವೀಕ್ಷಿಸುತ್ತದೆ" ಎಂದು ಜಾನ್ಸನ್ ಹೇಳಿದ್ದಾರೆ.

ಇದನ್ನೂ ಓದಿ: ಮಾನಸಿಕ ಖಿನ್ನತೆಗೆ ಬಿಸಿಯೋಗ ಪರಿಹಾರವಂತೆ: ಸಂಶೋಧನೆ ಹೇಳುವುದೇನು?

Last Updated :Oct 24, 2023, 10:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.