ETV Bharat / international

ಅಮೆರಿಕ: ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವ ಮಸೂದೆಗೆ ಸೆನೆಟ್‌ ಒಪ್ಪಿಗೆ

author img

By

Published : Nov 30, 2022, 1:10 PM IST

ಈ ಮಸೂದೆಗೆ ಸದನದಲ್ಲಿ 61 ಮಂದಿ ಸಮ್ಮದಿ ಸೂಚಿಸಿದ್ದು, 36 ಮಂದಿ ವಿರೋಧ ಮತಚಲಾಯಿಸಿದ್ದಾರೆ. 12 ರಿಪಬ್ಲಿಕನ್​ ಕೂಡ ಈ ಮಸೂದೆಗೆ ಬೆಂಬಲ ಸೂಚಿಸಿದೆ.

ಅಮೆರಿಕ ಸೆನೆಟ್​ನಲ್ಲಿ ಸಲಿಂಗ ವಿವಾಹದ ಮಾನ್ಯತೆ ಮಸೂದೆ ಪಾಸ್​
ಅಮೆರಿಕ ಸೆನೆಟ್​ನಲ್ಲಿ ಸಲಿಂಗ ವಿವಾಹದ ಮಾನ್ಯತೆ ಮಸೂದೆ ಪಾಸ್​

ವಾಷಿಂಗ್ಟನ್​: ಸಲಿಂಗ ವಿವಾಹದ ಮಾನ್ಯತೆಯನ್ನು ರಕ್ಷಿಸುವ ಮಸೂದೆಗೆ ಅಮೆರಿಕದ ಸಂಸತ್ತಿನಲ್ಲಿ ಅಂಗೀಕಾರ ಸಿಕ್ಕಿದೆ. 2015ರಲ್ಲಿ ರಾಷ್ಟ್ರಾದ್ಯಂತ ಸಲಿಂಗ ವಿವಾಹವನ್ನು ಕಾನೂನು ಬದ್ಧಗೊಳಿಸಿದ ಬಳಿಕ ಹಾಗೂ ರಾಷ್ಟ್ರ ಮಟ್ಟದಲ್ಲಿ ರಾಜಕೀಯ ವಿಷಯವಾಗಿದ್ದ ಈ ಮಸೂದೆಯ ಜೊತೆಗೆ ಮದುವೆಯಾಗಿದ್ದ ಸಾವಿರಾರು ಸಲಿಂಗಿಗಳಿಗೆ ಈ ನಡೆ ನಿರಾಳತೆ ಮೂಡಿಸಿದೆ.

ಸಲಿಂಗ ವಿವಾಹ ಮತ್ತು ಅಂತರ್‌ಜನಾಂಗದ ಮದುವೆಯ ವಿಚಾರವನ್ನು ಈಗ ಫೆಡರಲ್​ ನಿಯಮದ ಅಡಿ ತರಲಾಗಿದೆ. ಈ ಮಸೂದೆಗೆ ಸದನದಲ್ಲಿ 61 ಮಂದಿ ಸಮ್ಮತಿ ಸೂಚಿಸಿದ್ದು, 36 ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ. 12 ರಿಪಬ್ಲಿಕನ್ ಸದಸ್ಯರ​ ಬೆಂಬಲ ಸಿಕ್ಕಿದೆ. ಈ ಸಂಬಂಧ ನಡೆದ ಹೋರಾಟಗಳಿಗೆ ಸಮಾನತೆಯನ್ನು ಈ ಮಸೂದೆ ತರುತ್ತದೆ ಎಂದು ಸೆನೆಟ್​ ನಾಯಕ​ ಚುಕ್​ ಶುಮರ್​ ತಿಳಿಸಿದರು.

ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅಧ್ಯಕ್ಷ ಜೋ ಬೈಡನ್, ಮಸೂದೆಗೆ ಪ್ರಾಮಾಣಿಕ ಮತ್ತು ಗೌರವಯುತವಾಗಿ ತಾವು ಸಹಿ ಮಾಡುವುದಾಗಿ ತಿಳಿಸಿದ್ದಾರೆ. ಎಲ್​ಜಿಬಿಟಿಕ್ಯೂ ಸಮುದಾಯ ಇದೀಗ ಸಂತೋಷವಾಗಿ, ಖುಷಿಯಿಂದ ಜೀವನ ನಡೆಸಿ ತಮ್ಮದೇ ಆದ ಕುಟುಂಬ ಕಟ್ಟಿಕೊಳ್ಳಲು ಈ ಮಸೂದೆ ಭರವಸೆ ನೀಡುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ವಿಯೆಟ್ನಾಂನ ಚಿನ್ನದ ಮನೆ ಪ್ರವಾಸಿಗರ ಆಕರ್ಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.