ETV Bharat / international

ಭಾರತ ಮೂಲದ ಲೇಖಕ ಸಲ್ಮಾನ್ ರಶ್ದಿ ಬದುಕುಳಿದಿದ್ದುಅಚ್ಚರಿಯಾಗಿದೆ: ಆರೋಪಿ ಮತರ್​

author img

By

Published : Aug 18, 2022, 8:13 AM IST

ಭಾರತ ಮೂಲದ ಲೇಖಕ ಸಲ್ಮಾನ್ ರಶ್ದಿ ಬದುಕುಳಿದಿದ್ದು ಅಚ್ಚರಿಯಾಗಿದೆ ಎಂದು ಆರೋಪಿ ಮತರ್​ ಮಾಧ್ಯಮಕ್ಕೆ ನೀಡಿದ ಸಂದರ್ಶದಲ್ಲಿ ಹೇಳಿದ್ದಾರೆ.

Salman Rushdie attacker surprised  Salman Rushdie attacker surprised the author survived  Attack on Salman Rushdie  Salman Rushdie news  Indian born British and American novelist Salman Rushdie  ಭಾರತೀಯ ಮೂಲದ ಬ್ರಿಟಿಷ್ ಮತ್ತು ಅಮೇರಿಕನ್ ಕಾದಂಬರಿಕಾರ  ಭಾರತ ಮೂಲದ ಲೇಖಕ ಸಲ್ಮಾನ್ ರಶ್ದಿ  ಸಲ್ಮಾನ್ ರಶ್ದಿ ಬದುಕುಳಿದಿದ್ದು ಅಚ್ಚರಿ  ಭಾರತೀಯ ಮೂಲದ ಬ್ರಿಟಿಷ್ ಮತ್ತು ಅಮೇರಿಕನ್ ಕಾದಂಬರಿಕಾರ ಸಲ್ಮಾನ್ ರಶ್ದಿ ಮೇಲೆ ದಾಳಿ  ಇರಾನ್‌ನ ದಿವಂಗತ ನಾಯಕ ಅಯತೊಲ್ಲಾ ರುಹೊಲ್ಲಾ ಖೊಮೇನಿ  ದಿ ಸೈಟಾನಿಕ್ ವರ್ಸಸ್ ಎಂಬ ಕಾದಂಬರಿ  ಇರಾನ್‌ನ ಕ್ರಾಂತಿಕಾರಿ ಗಾರ್ಡ್‌  ನ್ಯೂಜೆರ್ಸಿಯ ಫೇರ್‌ವ್ಯೂನಲ್ಲಿ ವಾಸಿಸುವ ಆರೋಪಿ ಮತರ್ ಹೇಳಿಕೆ
ಭಾರತ ಮೂಲದ ಲೇಖಕ ಸಲ್ಮಾನ್ ರಶ್ದಿ

ನ್ಯೂಯಾರ್ಕ್​, ಅಮೆರಿಕ: ಪಶ್ಚಿಮ ನ್ಯೂಯಾರ್ಕ್‌ನಲ್ಲಿ ಉಪನ್ಯಾಸ ವೇದಿಕೆಯೊಂದರಲ್ಲಿ ನೀಡಿದ ಸಂದರ್ಶನದಲ್ಲಿ ಭಾರತೀಯ ಮೂಲದ ಬ್ರಿಟಿಷ್ ಮತ್ತು ಅಮೆರಿಕನ್​ ಕಾದಂಬರಿಕಾರ ಸಲ್ಮಾನ್ ರಶ್ದಿ ಮೇಲೆ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಬರಹಗಾರ ಸಲ್ಮಾನ್​ ರಶ್ದಿ ಗಂಭೀರವಾಗಿ ಗಾಯಗೊಂಡಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈ ದಾಳಿಯಿಂದ ಸಲ್ಮಾನ್​ ರಶ್ದಿ ಬದುಕುಳಿದಿರುವುದು ಅಚ್ಚರಿ ಮೂಡಿಸಿದೆ ಎಂದು ದಾಳಿಕೋರ ಹೇಳಿಕೊಂಡಿದ್ದಾನೆ.

ಜೈಲಿನಿಂದ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಆರೋಪಿ ಹಾದಿ ಮಾತರ್, ಸಲ್ಮಾನ್​ ರಶ್ದಿ ಕಳೆದ ಚಳಿಗಾಲದಲ್ಲಿ ಚೌಟಕ್ವಾ ಇನ್‌ಸ್ಟಿಟ್ಯೂಟ್​ದಲ್ಲಿ ಉಪನ್ಯಾಸ ನೀಡುತ್ತಾರೆ ಎಂಬುದು ಟ್ವೀಟ್​ ಮೂಲಕ ತಿಳಿಯಿತು. ಆಗ ಅವರನ್ನು ಅಲ್ಲಿ ನೋಡಲು ನಿರ್ಧರಿಸಿದ್ದೆನು. ನಾನು ಆ ವ್ಯಕ್ತಿಯನ್ನು ಇಷ್ಟಪಡುವುದಿಲ್ಲ. ಅವರು ತುಂಬಾ ಒಳ್ಳೆಯ ವ್ಯಕ್ತಿ ಎಂದು ನಾನು ಭಾವಿಸುವುದಿಲ್ಲ. ಅವನು ಇಸ್ಲಾಂ ಧರ್ಮದ ಮೇಲೆ ದಾಳಿ ಮಾಡಿದವನು. ನಮ್ಮ ನಂಬಿಕೆಗಳು, ನಂಬಿಕೆ ವ್ಯವಸ್ಥೆಗಳ ಮೇಲೆ ದಾಳಿ ಮಾಡಿದರು ಎಂದು ಆರೋಪಿ ಮಾತರ್​ ಹೇಳಿದರು.

ಇರಾನ್‌ನ ದಿವಂಗತ ನಾಯಕ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರನ್ನು ನಾನು ಶ್ರೇಷ್ಠ ವ್ಯಕ್ತಿ ಎಂದು ಪರಿಗಣಿಸಿದ್ದೇನೆ. ಆದರೆ, ರಶ್ದಿ ಅವರು 1989 ರಲ್ಲಿ ಇರಾನ್‌ನಲ್ಲಿ ಖೊಮೇನಿ ಹೊರಡಿಸಿದ ಫತ್ವಾ ಅಥವಾ ಸುಗ್ರೀವಾಜ್ಞೆ ಅನುಸರಿಸುತ್ತಿದ್ದಾರೆಯೇ ಎಂದು ಹೇಳುವುದಿಲ್ಲ ಎಂದು 24 ವರ್ಷದ ಮತರ್ ಹೇಳಿದರು. ದಿ ಸೈಟಾನಿಕ್ ವರ್ಸಸ್ ಎಂಬ ಕಾದಂಬರಿ ಪ್ರಕಟಿಸಿದ ನಂತರ ಲೇಖಕ ರಶ್ದಿ ಅವರ ಸಾವಿಗೆ ಕರೆ ನೀಡಿದ್ದರು.

ಈ ದಾಳಿಯಲ್ಲಿ ಭಾಗಿಯಾಗಿಲ್ಲ ಎಂದು ಇರಾನ್ ಹೇಳಿದೆ. ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ನೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲ. ದಿ ಸೈಟಾನಿಕ್ ವರ್ಸಸ್​ನ ಒಂದೆರಡು ಪುಟಗಳನ್ನು ಮಾತ್ರ ಓದಿದ್ದೇನೆ ಎಂದು ನ್ಯೂಜೆರ್ಸಿಯ ಫೇರ್‌ವ್ಯೂನಲ್ಲಿ ವಾಸಿಸುವ ಆರೋಪಿ ಮತರ್ ಹೇಳಿಕೆ ನೀಡಿದ್ದಾರೆ.

ಅವರ ಏಜೆಂಟ್ ಪ್ರಕಾರ, ಶುಕ್ರವಾರ ಚಾಕು ಇರಿತಕ್ಕೆ ಒಳಗಾದ ವಿವಾದಾತ್ಮಕ 75 ವರ್ಷದ ಲೇಖಕ ಸಲ್ಮಾನ್​ ರಶ್ದಿ ಅವರ ಸ್ಥಿತಿ ಗಂಭೀರವಾಗಿದೆ. ಇರಿತದಿಂದಾಗಿ ಒಂದು ಕಣ್ಣಿಗೆ ತೀವ್ರ ಹಾನಿಯಾಗಿದ್ದು, ದೃಷ್ಟಿ ಕಳೆದುಹೋಗುವ ಸಾಧ್ಯತೆ ಇದೆ. ಯಕೃತ್ತಿಗೂ ಚಾಕು ಇರಿದು ಹಾನಿಗೀಡಾಗಿದೆ. ವೆಂಟಿಲೇಟರ್​ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ವೈದ್ಯ ಮೂಲಗಳು ತಿಳಿಸಿವೆ.

ದಾಳಿಯ ಹಿಂದಿನ ದಿನ ಬಸ್​ ಮೂಲಕ ಬಫಲೋಗೆ ಬಂದಿದ್ದೆ. ಬಳಿಕ ಅಲ್ಲಿಂದ ಸುಮಾರು 40 ಮೈಲುಗಳ (64 ಕಿಲೋಮೀಟರ್) ದೂರದಲ್ಲಿರುವ ಚೌಟಕ್ವಾಗೆ ಲಿಫ್ಟ್ ತೆಗೆದುಕೊಂಡು ಆಗಮಿಸಿದೆ. ಚೌಟಕ್ವಾ ಸಂಸ್ಥೆಯ ಮೈದಾನಕ್ಕೆ ಪಾಸ್ ಖರೀದಿಸಿದೆ. ಸಲ್ಮಾನ್​ ರಶ್ದಿ ಅವರ ಉಪನ್ಯಾಸ ಹಿಂದಿನ ರಾತ್ರಿ ಹುಲ್ಲಿನಲ್ಲಿ ಮಲಗಿದೆ ಎಂದು ಕೊಲೆ ಯತ್ನ ಮತ್ತು ಆಕ್ರಮಣದ ಆರೋಪ ಹೊತ್ತಿರುವ ಮತರ್ ಹೇಳಿದರು.

ವಿವಾದಾತ್ಮಕ ಬರವಣಿಗೆಗಳ ಮೂಲಕ ಒಂದು ದಶಕಗಳಿಂದ ಜೀವ ಬೆದರಿಕೆ ಎದುರಿಸುತ್ತಿದ್ದ ಸಲ್ಮಾನ್​ ರಶ್ದಿ ಮೇಲೆ ಆಗಸ್ಟ್​ 12ರಂದು ನ್ಯೂಯಾರ್ಕ್​ನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಉಪನ್ಯಾಸ ನೀಡುತ್ತಿದ್ದಾಗ ಮತರ್​(24) ಎಂಬಾತ ಚಾಕುವಿನಿಂದ ಸತತವಾಗಿ 12- 14 ಕಡೆ ಇರಿದಿದ್ದನು. ಇದರಿಂದ ಕಣ್ಣು, ಯಕೃತ್ತು ಭಾಗಕ್ಕೆ ಗಂಭೀರ ಗಾಯವಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಈವರೆಗೂ ಅವರು ಮಾತನಾಡುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಲೇಖಕ ರಶ್ದಿ ಅವರ ಮೇಲಾದ ದಾಳಿಗೆ ಸಾಹಿತ್ಯಲೋಕ ಭೀತಿಗೊಂಡಿದೆ. ಸಾಹಿತ್ಯದ ಮೂಲಕ ಅಭಿಪ್ರಾಯ ಹಂಚಿಕೊಳ್ಳುವದನ್ನೇ ವಿರೋಧಿಸಿ ಹತ್ಯೆ ಯತ್ನ ಮಾಡಿದ್ದಕ್ಕೆ ಸಾಹಿತಿಗಳು ಕಿಡಿಕಾರಿದ್ದಾರೆ.

ಓದಿ: ಚಾಕು ದಾಳಿಗೀಡಾದ ಲೇಖಕ ಸಲ್ಮಾನ್ ರಶ್ದಿ ದೇಹಸ್ಥಿತಿ ತುಸು ಚೇತರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.