ETV Bharat / international

ರಷ್ಯಾ ನ್ಯೂ ಸ್ಟಾರ್ಟ್ ಪರಮಾಣು ಒಪ್ಪಂದ ಮೀರುತ್ತಿದೆ: ಅಮೆರಿಕ

author img

By

Published : Feb 1, 2023, 9:04 AM IST

ಎರಡು ಬಲಿಷ್ಠ ರಾಷ್ಟ್ರಗಳ ಮಧ್ಯೆ ಅಣು ಒಪ್ಪಂದ- ಪರಮಾಣು ನ್ಯೂ ಸ್ಟಾರ್ಟ್​ ಒಪ್ಪಂದ- ರಷ್ಯಾದಿಂದ ಒಡಂಬಡಿಕೆ ನಿಯಮ ಉಲ್ಲಂಘನೆ- ರಷ್ಯಾದ ಮೇಲೆ ಅಮೆರಿಕ ಆರೋಪ

nuclear-arms-control-treaty
ರಷ್ಯಾ ನ್ಯೂ ಸ್ಟಾರ್ಟ್ ಪರಮಾಣು ಒಪ್ಪಂದ

ವಾಷಿಂಗ್ಟನ್: ಉಕ್ರೇನ್​ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾದ ಮೇಲೆ ಅಮೆರಿಕ ಪರಮಾಣು ನಿಯಂತ್ರಣ ಒಪ್ಪಂದ ಉಲ್ಲಂಘನೆಯ ಆರೋಪ ಮಾಡಿದೆ. ವಿಶ್ವದ ಎರಡು ಪ್ರಮುಖ ರಾಷ್ಟ್ರಗಳ ನಡುವಿನ ಅಣು ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದವಾದ ನ್ಯೂ ಸ್ಟಾರ್ಟ್​ ನಿಯಮಗಳನ್ನು ರಷ್ಯಾ ಅನುಸರಿಸುತ್ತಿಲ್ಲ ಎಂದು ಅಮೆರಿಕ ಮಂಗಳವಾರ ಹೇಳಿದೆ.

ಪರಮಾಣು ಶಸ್ತ್ರಾಸ್ತ್ರಗಳ ಕುರಿತು ತಪಾಸಣೆ ಮತ್ತು ನಡೆಯಬೇಕಿದ್ದ ಮಾತುಕತೆಗಳಿಂದ ರಷ್ಯಾ ದೂರವಿದೆ. ಒಪ್ಪಂದದ ಪ್ರಕಾರ ಎಲ್ಲ ಮಿತಿಗಳನ್ನು ಮೀರಿ ಪರಮಾಣು ಸಿಡಿತಲೆಗಳನ್ನು ರಷ್ಯಾ ದೇಶವು ವಿಸ್ತರಿಸುತ್ತಿದೆ. ತನ್ನ ಭೂಪ್ರದೇಶದಲ್ಲಿ ಚಟುವಟಿಕೆಗಳನ್ನು ಸುಲಭಗೊಳಿಸಲು ಹೊಸ ಸ್ಟಾರ್ಟ್​ ಒಪ್ಪಂದದ ಅಡಿಯಲ್ಲಿ ರಷ್ಯಾ ತನ್ನ ಬಾಧ್ಯತೆಯನ್ನು ಅನುಸರಿಸುತ್ತಿಲ್ಲ. ಅಣು ತಪಾಸಣೆ ನಿರಾಕರಣೆ ಅಮೆರಿಕ ಮತ್ತು ರಷ್ಯಾದ ಪರಮಾಣು ಶಸ್ತ್ರಾಸ್ತ್ರ ನಿಯಂತ್ರಣದ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರರು ಹೇಳಿದ್ದಾರೆ.

2020 ರಲ್ಲಿ ಕೊರೊನಾ ಅಡ್ಡಿ: ಮಾರ್ಚ್ 2020 ರಲ್ಲಿ ಕೊರೊನಾ ವೈರಸ್​ ಹರಡುವಿಕೆಯಿಂದಾಗಿ ಹೊಸ ಸ್ಟಾರ್ಟ್​ ಒಪ್ಪಂದದ ಅಡಿಯಲ್ಲಿ ಅಮೆರಿಕ ಮತ್ತು ರಷ್ಯಾದ ಮಿಲಿಟರಿ ಸೈಟ್‌ಗಳ ತಪಾಸಣೆಯನ್ನು ಎರಡೂ ಕಡೆಯವರು ನಿಲ್ಲಿಸಿದ್ದರು. ಈ ಒಪ್ಪಂದದ ಮೇಲ್ವಿಚಾರಣಾ ಸಮಿತಿ ಕೊನೆಯದಾಗಿ ಅಕ್ಟೋಬರ್ 2021 ರಲ್ಲಿ ಭೇಟಿಯಾಗಿತ್ತು. ಉಕ್ರೇನ್​ ಯುದ್ಧ ಆರಂಭವಾದ ಬಳಿಕ ರಷ್ಯಾ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ನಿಯಮದಂತೆ ಶಸ್ತ್ರಾಸ್ತ್ರ ತಪಾಸಣೆಯನ್ನು ನಿಲ್ಲಿಸಿದೆ ಎಂದು ಅಮೆರಿಕ ಹೇಳಿದೆ.

ಅಧಿಕಾರಿಗಳು ಅಮೆರಿಕಕ್ಕೆ ತೆರಳಿ ತಪಾಸಣೆ ನಡೆಸುವುದನ್ನು ತಡೆದು, ಹೊಸ START ಒಪ್ಪಂದದಂತೆ ತನ್ನ ಮಿಲಿಟರಿ ಸೈಟ್‌ಗಳ ಅಮೆರಿಕದ ತಪಾಸಣೆಯನ್ನು ಸ್ಥಗಿತಗೊಳಿಸುವುದಾಗಿ ರಷ್ಯಾ ಆಗಸ್ಟ್ ಆರಂಭದಲ್ಲಿ ಘೋಷಿಸಿತು. ಬಳಿಕ ಅಮೆರಿಕದಿಂದಲೇ ಒಪ್ಪಂದ ಮುರಿಯಲಾಗಿದೆ ಎಂದು ರಷ್ಯಾ ಆರೋಪಿಸಿತ್ತು. ಇದಕ್ಕೀಗ ಅಮೆರಿಕ ತಿರುಗೇಟು ನೀಡಿದೆ.

ಉಭಯ ರಾಷ್ಟ್ರಗಳ ಮಧ್ಯೆ ಬಿಕ್ಕಟ್ಟು: ಎರಡು ರಾಷ್ಟ್ರಗಳ ನಡುವಿನ ರಾಜತಾಂತ್ರಿಕತೆಯು ಕಳೆದ ವರ್ಷದಿಂದ ಬಿಗಡಾಯಿಸಿದೆ. ಉಕ್ರೇನ್​ ಮೇಲೆ ರಷ್ಯಾ ದಾಳಿ ಮಾಡಿದ ಬಳಿಕ ಅಮೆರಿಕ ಹಲವಾರು ನಿರ್ಬಂಧಗಳನ್ನು ಹೇರಿದೆ. ಇದಾದ ಬಳಿಕ ಉಭಯ ರಾಷ್ಟ್ರಗಳ ಮಧ್ಯೆ ಸಂಬಂಧ ಸೂಕ್ಷ್ಮವಾಗಿದೆ. ರಷ್ಯಾದ ದಾಳಿಯನ್ನು ಹಿಮ್ಮೆಟ್ಟಿಸಲು ಉಕ್ರೇನ್​ಗೆ ಶತಕೋಟಿ ಡಾಲರ್‌ಗಳ ನೆರವು ಮತ್ತು ಶಸ್ತ್ರಾಸ್ತ್ರಗಳನ್ನು ಉಕ್ರೇನ್​ಗೆ ಅಮೆರಿಕ ಮಾಡುತ್ತಿದೆ.

ಇದರಿಂದ ಕೆಂಡಾಮಂಡಲವಾಗಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಯುದ್ಧದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ಮೂಗು ತೂರಿಸಿದರೆ, ಉಕ್ರೇನ್‌ನ ಮೇಲೆ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲಾಗುವುದು ಎಂದು ಬೆದರಿಕೆ ಹಾಕಿದ್ದರು. ಇದು ಪರಿಸ್ಥಿತಿಯನ್ನು ಇನ್ನಷ್ಟು ಭೀಕರಗೊಳಿಸಿದೆ.

ಕಳೆದ ವರ್ಷ ನವೆಂಬರ್ 29 ರಂದು ಕೈರೋದಲ್ಲಿ ಉಭಯ ರಾಷ್ಟ್ರಗಳ ಮಧ್ಯೆ ನ್ಯೂ ಸ್ಟಾರ್ಟ್​ ಒಪ್ಪಂದದಂತೆ ಮಾತುಕತೆಗಳನ್ನು ಆರಂಭಿಸಬೇಕಿತ್ತು. ಆದರೆ, ಉಕ್ರೇನ್​ಗೆ ನೆರವು ನೀಡುತ್ತಿರುವ ಕಾರಣ ಅಮೆರಿಕನ್ನು ರಷ್ಯಾ ದ್ವೇಷಿಸುತ್ತಿದೆ.

ಓದಿ: ಪೇಶಾವರ್​ ಬಾಂಬ್​ ದಾಳಿ ಪ್ರಕರಣ: 100ರಲ್ಲಿ 97 ಪೊಲೀಸರು ಸಾವು, ಈ ಪರಿಸ್ಥಿತಿಯನ್ನು ಭಾರತಕ್ಕೆ ಹೊಲಿಸಿದ ಪಾಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.