ರಾಣಿ ಎಲಿಜಬೆತ್‌​​ಗೆ ಅಂತಿಮ ವಿದಾಯ ಹೇಳಿದ ಬ್ರಿಟನ್​: ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ

author img

By

Published : Sep 20, 2022, 6:39 AM IST

QUEEN ELIZABETH

ಬ್ರಿಟನ್​ ದೇಶವನ್ನು ದೀರ್ಘಾವಧಿಗೆ ಆಳಿದ ರಾಣಿ 2ನೇ ಎಲಿಜಬೆತ್ ಅವರ ಅಂತ್ಯಕ್ರಿಯೆ ಸೆ.19 ರಂದು ಸಕಲ ಗೌರವಗಳೊಂದಿಗೆ ನಡೆಯಿತು. ಅಗಲಿದ ನಾಯಕಿಗೆ ಬ್ರಿಟನ್​ ಜನತೆ ಕಣ್ಣೀರ ವಿದಾಯ ಹೇಳಿದರು.

ವೆಸ್ಟ್​​ಮಿನಿಸ್ಟರ್​​(ಲಂಡನ್​): ಏಳು ದಶಕಗಳಿಗೂ ಹೆಚ್ಚು ಕಾಲ ಬ್ರಿಟನ್​ ರಾಣಿಯಾಗಿದ್ದ 2ನೇ ಎಲಿಜಬೆತ್​​ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಸೋಮವಾರ ಪೂರ್ಣಗೊಂಡಿವೆ. ರಾಜಮನೆತನದ ಸಂಪ್ರದಾಯ ಹಾಗೂ ಸರ್ಕಾರಿ ಗೌರವಗಳೊಂದಿಗೆ ಇಲ್ಲಿನ ವೆಸ್ಟ್​​​​ಮಿನಿಸ್ಟರ್​ ಅಬೆಯಲ್ಲಿ ಅಂತ್ಯಕ್ರಿಯೆ ನೆರವೇರಿತು. ಲಂಡನ್‌ನಲ್ಲಿರುವ 700 ವರ್ಷಗಳಿಗೂ ಪುರಾತನವಾದ ವೆಸ್ಟ್‌ ಮಿನಿಸ್ಟರ್ ಅಬ್ಬೆ ಚರ್ಚ್‌ನ ಅವರಣದಲ್ಲಿ ನಡೆದ ಅಂತಿಮ ಕಾರ್ಯಕ್ಕೆ ಯುಕೆ ಜನತೆ, ಜಗತ್ತಿನೆಲ್ಲೆಡೆಯ ಗಣ್ಯರು ಸಾಕ್ಷಿಯಾದರು.

ಸೇಂಟ್​ ಜಾರ್ಜ್​ ಚಾಪಲ್​​ನಲ್ಲಿ ರಾಣಿಯ ಪತಿ ರಾಜ ಫಿಲಿಪ್​ ಅವ​​ರ ಅಂತ್ಯಕ್ರಿಯೆ ನಡೆಸಿದ ಸ್ಥಳದ ಪಕ್ಕದಲ್ಲೇ ಎಲಿಜಬೆತ್​​ ಅವರ ಪಾರ್ಥಿವ ಶರೀರವನ್ನು ಸಮಾಧಿ ಮಾಡಲಾಯಿತು. ಈ ಸಂದರ್ಭದಲ್ಲಿ ಇಂಗ್ಲೆಂಡ್​ ರಾಷ್ಟ್ರಗೀತೆ ನುಡಿಸಲಾಯಿತು. ಗೌರವಾರ್ಥವಾಗಿ ದೇಶಾದ್ಯಂತ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಗಿದೆ.

  • Her Majesty The Queen’s coffin makes its final journey down the Long Walk to Windsor Castle for the Committal Service at St George's Chapel. pic.twitter.com/vqczfMENlM

    — The Royal Family (@RoyalFamily) September 19, 2022 " class="align-text-top noRightClick twitterSection" data=" ">

ಇದನ್ನೂ ಓದಿ: ರಾಣಿ ಎಲಿಜಬೆತ್ ಅಂತ್ಯಕ್ರಿಯೆ ಇಂದು: ಲಂಡನ್​ಗೆ ಆಗಮಿಸಿದ ವಿಶ್ವ ನಾಯಕರು

ಸುಮಾರು 70 ವರ್ಷಗಳ ಕಾಲ ಬ್ರಿಟನ್​ ರಾಣಿಯಾಗಿದ್ದ 96 ವರ್ಷದ 2ನೇ ಎಲಿಜಬೆತ್​​ ಅವರಿಗೆ ಬ್ರಿಟನ್​ ಪ್ರಜೆಗಳು ಗೌರವ ನಮನ ಸಲ್ಲಿಸಿದರು. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಅಮೆರಿಕ ಅಧ್ಯಕ್ಷ ಜೋ ಬೈಡನ್​ ಸೇರಿದಂತೆ ವಿವಿಧ ದೇಶದ 500ಕ್ಕೂ ಅಧಿಕ ಪ್ರಮುಖ ನಾಯಕರು ಭಾಗಿಯಾಗಿದ್ದರು.

ಸೋಮವಾರ ಬೆಳಗ್ಗೆ 6:30ಕ್ಕೆ ಅಂತ್ಯಕ್ರಿಯೆಯ ವಿಧಿವಿಧಾನಗಳು ಆರಂಭಗೊಂಡಿದ್ದವು. ಸರ್ಕಾರಿ ಗೌರವದೊಂದಿಗೆ ಭಾರತೀಯ ಕಾಲಮಾನ ಮಧ್ಯಾಹ್ನ 3:30ಕ್ಕೆ ಅಂತ್ಯಕ್ರಿಯೆ ನಡೆಯಿತು. ಈ ವಿಧಿವಿಧಾನಗಳು ಸುಮಾರು 125 ಸಿನಿಮಾ ಮಂದಿರ, ಹಲವು ಚರ್ಚ್​​ಗಳಲ್ಲಿ ನೇರ ಪ್ರಸಾರವಾಗಿದೆ. ಗೌರವ ಸಲ್ಲಿಸುವ ಕಾರ್ಯಕ್ರಮದಲ್ಲಿ 4 ಸಾವಿರ ಸೇನಾ ಯೋಧರು ಭಾಗಿಯಾಗಿದ್ದರು.

ಯುಕೆ ಹಾಗು ಕಾಮನ್‌ವೆಲ್ತ್‌ ದೇಶಗಳ ಒಕ್ಕೂಟದ ಮಾಜಿ ಮುಖ್ಯಸ್ಥೆಯಾಗಿರುವ 2ನೇ ರಾಣಿ ಎಲಿಜಬೆತ್‌ ಸೆಪ್ಟೆಂಬರ್‌ 8 ರಂದು ತಮ್ಮ 96ನೇ ವಯಸ್ಸಿನಲ್ಲಿ ನಿಧನರಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.