ETV Bharat / international

ಪುಟಿನ್​ ಮೇಲ್ವಿಚಾರಣೆಯಲ್ಲಿ ರಷ್ಯಾದ ಪರಮಾಣು ಪಡೆಗಳ ಅಭ್ಯಾಸ

author img

By

Published : Oct 26, 2022, 10:36 PM IST

ರಷ್ಯಾದ ಭೂಪ್ರದೇಶದ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸಲು ಲಭ್ಯವಿರುವ ಎಲ್ಲ ವಿಧಾನಗಳನ್ನು ಬಳಸುವ ಬಗ್ಗೆ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಎಚ್ಚರಿಕೆ ನೀಡಿದ್ದಾರೆ.

Putin monitors practice launches by Russia's nuclear forces
ಪುಟಿನ್​ ಮೇಲ್ವಿಚಾರಣೆಯಲ್ಲಿ ರಷ್ಯಾದ ಪರಮಾಣು ಪಡೆಗಳ ಅಭ್ಯಾಸ

ಮಾಸ್ಕೋ (ರಷ್ಯಾ): ಉಕ್ರೇನ್​ ಜತೆಗಿನ ಯುದ್ಧದ ನಡುವೆಯೇ ರಷ್ಯಾ ಸೇನೆಯು ಪ್ರಬಲ ಸೇನಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಪರಮಾಣು ಪಡೆಗಳು ಬುಧವಾರ ಖಂಡಾಂತರ ಮತ್ತು ಕ್ರೂಸ್ ಕ್ಷಿಪಣಿಗಳ ಬಹು ಉಡಾವಣೆಯ ಅಭ್ಯಾಸವನ್ನು ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ಮೇಲ್ವಿಚಾರಣೆಯಲ್ಲಿ ನಡೆಸಿವೆ.

ಈ ಸಮರಾಭ್ಯಾಸದ ಬಗ್ಗೆ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಪ್ರತಿಕ್ರಿಯಿಸಿ, ರಷ್ಯಾದ ಮೇಲಿನ ಪರಮಾಣು ದಾಳಿ ಹಿಮ್ಮೆಟ್ಟಿಸುವುದು ಅಭ್ಯಾಸದ ಹಿಂದಿರುವ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

  • Russian President Vladimir Putin oversaw the training of Moscow's strategic deterrence forces, troops responsible for responding to threats of nuclear war, the Kremlin said.

    (Pics: Reuters) pic.twitter.com/pagwGQ6BkZ

    — ANI (@ANI) October 26, 2022 " class="align-text-top noRightClick twitterSection" data=" ">

ಬುಧವಾರದ ನಡೆದ ಈ ಅಭ್ಯಾಸದಲ್ಲಿ ಉತ್ತರ ಪ್ಲೆಸೆಟ್ಸ್ಕ್ ಉಡಾವಣಾ ಸ್ಥಳದಿಂದ ಯಾರ್ಸ್ ಲ್ಯಾಂಡ್ ಆಧಾರಿತ ಖಂಡಾಂತರ ಕ್ಷಿಪಣಿಯನ್ನು ಹಾರಿಸಲಾಗಿದೆ. ಬ್ಯಾರೆಂಟ್ಸ್ ಸಮುದ್ರದಲ್ಲಿ ರಷ್ಯಾದ ಪರಮಾಣು ಜಲಾಂತರ್ಗಾಮಿ ನೌಕೆ ಸಿನೆವಾ ಐಸಿಬಿಎಂನ್ನು ಪೂರ್ವ ಕಮ್ಚಟ್ಕಾ ದ್ವೀಪದ ಕುರಾ ಫೈರಿಂಗ್ ರೇಂಜ್‌ನಲ್ಲಿ ಉಡಾಯಿಸಲಾಗಿದೆ. ಜೊತೆಗೆ ಟು-95 ಕಾರ್ಯತಂತ್ರದ ಬಾಂಬರ್‌ಗಳನ್ನೂ ಸ್ಫೋಟಿಸಲಾಗಿದೆ. ಈ ಅಭ್ಯಾಸದ ಎಲ್ಲ ಕಾರ್ಯತಂತ್ರಗಳು ಸಫಲವಾಗಿದೆ ಮತ್ತು ಪರೀಕ್ಷಾರ್ಥ ಎಲ್ಲ ಕ್ಷಿಪಣಿಗಳು ತಮ್ಮ ನಿಗದಿತ ಗುರಿಗಳನ್ನು ತಲುಪಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ: ವಾರ್ಷಿಕ ಪರಮಾಣು ಲೆಕ್ಕದ ಕುರಿತು ಅಮೆರಿಕಕ್ಕೆ ಮಾಹಿತಿ ನೀಡಿದ ರಷ್ಯಾ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.