ETV Bharat / international

ಇಟಲಿಯಲ್ಲಿ ಭಾರಿ ಮಳೆ: ಭೂಕುಸಿತಕ್ಕೆ ಏಳು ಮಂದಿ ಬಲಿ

author img

By

Published : Nov 28, 2022, 7:10 AM IST

ಪೋಪ್​ ಫ್ರಾನ್ಸಿಸ್​​ ಇಶಿಯಾ ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿದರು. ಸಂತ್ರಸ್ತರು, ಸಂಕಷ್ಟದಲ್ಲಿರುವವರಿಗೆ ನೆರವು ನೀಡುವಂತೆ ಹಾಗೂ ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುವ ಎಲ್ಲರಿಗೂ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

newborn-among-7-dead-in-landslide-on-italys-ischia-island
ಇಟಲಿಯಲ್ಲಿ ಭಾರಿ ಮಳೆ: ಭೂಕುಸಿತಕ್ಕೆ ಏಳು ಮಂದಿ ಬಲಿ

ಮಿಲನ್( ಇಟಲಿ): ಇಟಲಿಯ ಇಶಿಯಾ ದ್ವೀಪದಲ್ಲಿ ಭಾರಿ ಪ್ರಮಾಣದ ಭೂ ಕುಸಿತ ಸಂಭವಿಸಿ, ಮೂರು ವಾರಗಳ ಹಸುಳೆ ಸೇರಿ ಏಳು ಜನ ಮೃತಪಟ್ಟಿದ್ದಾರೆ. ನೇಪಲ್ಸ್ ಪ್ರಿಫೆಕ್ಟ್ ನಲ್ಲಿ ಐದು ಜನರು ನಾಪತ್ತೆಯಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ದೃಢಪಡಿಸಿದ್ದಾರೆ.

ಶನಿವಾರ ಮುಂಜಾನೆ ಭೂಸಿತ ಸಂಭವಿಸಿದ್ದು,ಅನೇಕರು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದಾರೆ. ಭೂಕುಸಿತದಿಂದ ಭಾರಿ ಪ್ರಮಾಣದ ಹಾನಿಯಾಗಿದೆ. ಪಟ್ಟಣದ ಒಂದು ಭಾಗ ಭಾರಿ ಹಾನಿಗೊಳಗಾಗಿದೆ. ಅತಿಯಾದ ಮಳೆಯಿಂದಾಗಿ ಪರ್ವತದ ಭಾಗವು ಸಡಿಲಗೊಂಡಿದ್ದು, ಬದುಕುಳಿದವರಿಗಾಗಿ ಶೋಧ ಮುಂದುವರೆದಿದೆ.

ಪೋಪ್​ ಫ್ರಾನ್ಸಿಸ್​​ ಇಶಿಯಾ ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿದರು. ಸಂತ್ರಸ್ತರು, ಸಂಕಷ್ಟದಲ್ಲಿರುವವರಿಗೆ ನೆರವು ನೀಡುವಂತೆ ಹಾಗೂ ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುವ ಎಲ್ಲರಿಗೂ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

ನೇಪಲ್ಸ್ ಪ್ರಿಫೆಕ್ಟ್ ಕ್ಲಾಡಿಯೊ ಪಲೊಂಬಾದಲ್ಲಿ 30 ಮನೆಗಳು ಮುಳುಗಿವೆ ಮತ್ತು 200 ಕ್ಕೂ ಹೆಚ್ಚು ಜನರು ಸ್ಥಳಾಂತರ ಮಾಡಲಾಗಿದೆ ಎಂದು ತಿಳಿದು ಬಂದಿದೆ. 20 ವರ್ಷಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪನ ಸಕ್ರಿಯ ವಲಯದಲ್ಲಿರುವ ಪರ್ವತ ದ್ವೀಪದಲ್ಲಿ ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ ನಿರ್ಮಿಸುವುದರಿಂದ ಅನಾಹುತ ಉಲ್ಬಣಗೊಂಡಿದೆ ಎಂದು ತಜ್ಞರು ಹೇಳಿದ್ದಾರೆ.

2017 ರಲ್ಲಿ ಕ್ಯಾಸಮಿಸಿಯೊಲಾ ಮತ್ತು ಲ್ಯಾಕೊ ಅಮೆನೊದಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿದಾಗ ಇಬ್ಬರು ಸಾವನ್ನಪ್ಪಿದ್ದರು.

ಇದನ್ನು ಓದಿ: 2 ದಿನದಲ್ಲಿ ಖೆರ್ಸನ್​ ಪ್ರದೇಶದ ಮೇಲೆ 54 ಶೆಲ್​ ದಾಳಿ ಮಾಡಿದ ರಷ್ಯಾ: ಉಕ್ರೇನ್​ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.