ETV Bharat / international

ಇಂದು ಚಂದ್ರನತ್ತ ಸಾಗಲಿದೆ ನಾಸಾದ ಆರ್ಟೆಮಿಸ್ 1 ಮಿಷನ್

author img

By

Published : Aug 29, 2022, 9:17 AM IST

ಕಳೆದ ಹಲವು ದಶಕಗಳಿಂದ ವಿಜ್ಞಾನಿಗಳು ಚಂದ್ರನ ಮೇಲೆ ವಾಸಿಸುವ ಕನಸು ಕಾಣುತ್ತಿದ್ದಾರೆ. ಇದರ ಭಾಗವಾಗಿ ಆರ್ಟೆಮಿಸ್ 1 ಮಿಷನ್ ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಇಂದು ಉಡ್ಡಾಯನಗೊಳ್ಳಲಿದೆ. ಇದು ನಾಸಾ ನಿರ್ಮಿಸಿದ ಅತ್ಯಂತ ಶಕ್ತಿಶಾಲಿ ರಾಕೆಟ್ ಆಗಿದೆ.

moon rocket
ಆರ್ಟೆಮಿಸ್ 1 ಮಿಷನ್

ಕೇಪ್ ಕೆನವರಲ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ವಿಜ್ಞಾನಿಗಳು ಆರ್ಟೆಮಿಸ್ ಮಿಷನ್ ಅಡಿ ಮತ್ತೆ ಚಂದ್ರನ ಮೇಲೆ ಮಾನವನನ್ನು ಕಳುಹಿಸಲು ತಯಾರಿ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಇಂದು ಆರ್ಟೆಮಿಸ್ 1 ಮಿಷನ್ ರಾಕೆಟ್ ಉಡಾವಣೆಗೊಳ್ಳಲಿದ್ದು, ಚಂದ್ರನತ್ತ ಸಾಗಲಿದೆ. ಒಂದು ವೇಳೆ ಹವಾಮಾನ ವೈಪರಿತ್ಯದಿಂದಾಗಿ ರಾಕೆಟ್ ಉಡಾವಣೆ ಮಾಡಲು ಸಾಧ್ಯವಾಗದಿದ್ದರೆ, ಮುಂದಿನ ಸೆಪ್ಟೆಂಬರ್ 2 ರಂದು ಸಮಯ ನಿಗದಿ ಮಾಡಲಾಗಿದೆ.

ಕಳೆದ ಹಲವು ದಶಕಗಳಿಂದ ವಿಜ್ಞಾನಿಗಳು ಚಂದ್ರನ ಮೇಲೆ ವಾಸಿಸುವ ಕನಸು ಕಾಣುತ್ತಿದ್ದಾರೆ. ಇದರ ಭಾಗವಾಗಿ ಆರ್ಟೆಮಿಸ್ 1 ಮಿಷನ್ ಪ್ರಯೋಗ ನಡೆಯುತ್ತಿದೆ. ಇಂದು ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಲಿದೆ.

ಈ ಮೂನ್ ರಾಕೆಟ್ ಚಂದ್ರನ ದೂರದ ಬದಿಯಿಂದ ಮತ್ತು ಹಿಂದಕ್ಕೆ 42 ದಿನಗಳ ಪ್ರಯಾಣವನ್ನು ನಡೆಸಲಿದೆ. ಇದು ನಾಸಾ ನಿರ್ಮಿಸಿದ ಅತ್ಯಂತ ಶಕ್ತಿಶಾಲಿ ರಾಕೆಟ್ ಆಗಿದ್ದು, 50 ವರ್ಷಗಳ ಅನುಪಸ್ಥಿತಿಯ ನಂತರ ಜನರನ್ನು ಚಂದ್ರನ ಮೇಲ್ಮೈಗೆ ಕೊಂಡೊಯ್ಯುವ ಗುರಿ ಹೊಂದಿರುವ ಆರ್ಟೆಮಿಸ್ ಕಾರ್ಯಕ್ರಮದ ಭಾಗವಾಗಿದೆ.

ಆರ್ಟೆಮಿಸ್ ಪಾಲುದಾರರಾದ ನಾಸಾ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA) ಪ್ರಕಾರ, ಆರ್ಟೆಮಿಸ್ ಕಾರ್ಯಕ್ರಮವು ಕಳೆದ ಅರ್ಧ ಶತಮಾನದಲ್ಲಿ ಬಾಹ್ಯಾಕಾಶ ಪರಿಶೋಧನೆಯಲ್ಲಿ ಏನು ಬದಲಾವಣೆ ಆಗಿದೆ ಎಂಬುದನ್ನು ತೋರಿಸಲಿದೆ. ಆರ್ಟೆಮಿಸ್ 2025ರಲ್ಲಿ ಮಾನವರು ಚಂದ್ರನ ಮೇಲೆ ಹೋಗಲು ಮತ್ತು ಮುಂದಿನ ವರ್ಷಗಳಲ್ಲಿ ಪ್ರವಾಸಗಳ ಮೂಲಕ ಹೆಚ್ಚು ಶಾಶ್ವತ ನೆಲೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.

ಇದನ್ನೂ ಓದಿ: ನಾಸಾ ವಿಶ್ಲೇಷಣೆ..100+ ವರ್ಷಗಳವರೆಗೆ ಕ್ಷುದ್ರಗ್ರಹ ಅಪೋಫಿಸ್‌ನಿಂದ ಭೂಮಿ ಸುರಕ್ಷಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.