ETV Bharat / international

ಕೋವಿಡ್ ಹೊಸ ಅಲೆ ಭೀತಿ: ಸಾಮೂಹಿಕ ಸೋಂಕು ಪರೀಕ್ಷೆಗೆ ಮುಂದಾದ ಚೀನಾ ಸರ್ಕಾರ

author img

By

Published : Apr 26, 2022, 1:01 PM IST

ಚೀನಾದಲ್ಲಿ ಕೆಲವೇ ಕೆಲವು ಸೋಂಕು ಪ್ರಕರಣಗಳು ಕಂಡುಬರುತ್ತವೆ. ಆದರೂ ಚೀನಾ ಸರ್ಕಾರ ಶೂನ್ಯ ಕೋವಿಡ್ ನೀತಿ ಅನುಸರಿಸುತ್ತಿದೆ. ಇದರಿಂದಾಗಿ ಚೀನಾದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಲಾಕ್​ಡೌನ್ ಭೀತಿಯಿಂದಾಗಿ ಜನರು ಆಹಾರ ಸಾಮಗ್ರಿಗಳನ್ನು ಖರೀದಿಸಲು ಮುಂದಾಗಿದ್ದಾರೆ.

Most of Beijing to be tested for COVID amid lockdown worry
ಕೋವಿಡ್ ಹೊಸ ಅಲೆಯ ಭೀತಿ: ಸಾಮೂಹಿಕ ಸೋಂಕು ಪರೀಕ್ಷೆಗೆ ಮುಂದಾದ ಚೀನಾ ಸರ್ಕಾರ

ಬೀಜಿಂಗ್(ಚೀನಾ): ಮತ್ತೆ ಕೊರೊನಾ ಹೊಸ ಅಲೆ ಬರುತ್ತದೆಯೇ? ಎಂಬ ಅನುಮಾನಗಳು ಕಾಡುತ್ತಿವೆ. ಚೀನಾದ ಹಲವೆಡೆ ಈಗಾಗಲೇ ಪ್ರದೇಶಗಳಲ್ಲಿ ಕಠಿಣ ಲಾಕ್​ಡೌನ್ ಹೇರಲಾಗಿದೆ. ಕೊರೊನಾ ನಿಯಮಗಳನ್ನು ಹೇರಿರುವುದು ಮಾತ್ರವಲ್ಲದೇ ಸೋಂಕು ಪರೀಕ್ಷೆಯನ್ನು ಕ್ಷಿಪ್ರಗೊಳಿಸಲಾಗುತ್ತಿದೆ. ಚೀನಾದ ರಾಜಧಾನಿ ಬೀಜಿಂಗ್ ನಗರದಲ್ಲಿ 20 ಮಿಲಿಯನ್ ಜನರಿಗೆ ಸೋಂಕು ಸಾಮೂಹಿಕ ಸೋಂಕು ಪರೀಕ್ಷೆ ಮಾಡ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಚೀನಾದ ಅಧಿಕಾರಿಗಳು ಸೋಮವಾರ ಘೋಷಿಸಿದ್ದಾರೆ.

ಬೀಜಿಂಗ್​ನಲ್ಲಿ ಸುಮಾರು 21 ಮಿಲಿಯನ್ ಮಂದಿಗೆ ಸಾಮೂಹಿಕ ಪರೀಕ್ಷೆಗಳನ್ನು ಮಾಡಲಾಗುತ್ತದೆ ಎಂದು ಅಧಿಕಾರಿಗಳು ಘೋಷಣೆ ಮಾಡಿದ ನಂತರವೇ ಅಲ್ಲಿನ ಜನರಲ್ಲಿ ಲಾಕ್​ಡೌನ್ ಘೋಷಣೆಯಾಗುವ ಅನುಮಾನ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ಸಂಗ್ರಹಣೆಗೆ ಅಲ್ಲಿನ ಜನರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಬೀಜಿಂಗ್​ ನಗರದಲ್ಲಿ ಸುಮಾರು 16 ಜಿಲ್ಲೆಗಳಿದ್ದು, ಈಗಾಗಲೇ ಒಂದು ಜಿಲ್ಲೆಯಲ್ಲಿ ಸಾಮೂಹಿಕ ಸೋಂಕು ಪರೀಕ್ಷೆ ನಡೆಸಲಾಗುತ್ತಿದೆ. ನಗರದಲ್ಲಿನ ಪ್ರತ್ಯೇಕವಾಗಿರುವ ವಸತಿ ಕಟ್ಟಡಗಳಲ್ಲಿ ಲಾಕ್​ಡೌನ್​ ಜಾರಿಗೊಳಿಸಲಾಗಿದೆ. ಐದು ಜಿಲ್ಲೆಗಳನ್ನು ಹೊರತುಪಡಿಸಿ, ಎಲ್ಲಾ ಜಿಲ್ಲೆಗಳಿಗೆ ಸೋಂಕು ಪರೀಕ್ಷೆಯನ್ನು ಮಂಗಳವಾರ ವಿಸ್ತರಿಸಲಾಗುವುದು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾದಲ್ಲಿ ಕೆಲವೇ ಕೆಲವು ಸೋಂಕು ಪ್ರಕರಣಗಳು ಕಂಡುಬರುತ್ತವೆ. ಆದರೂ ಚೀನಾ ಸರ್ಕಾರ ಶೂನ್ಯ ಕೋವಿಡ್ ನೀತಿಯನ್ನು ಅನುಸರಿಸುತ್ತಿದೆ. ಇದರಿಂದಾಗಿ ಚೀನಾದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ವರ್ಕ್ ಫ್ರಂ ಹೋಮ್ ಕೂಡಾ ನಡೆಯುತ್ತಿದೆ. ಐಸೋಲೇಷನ್​ಗೆ ಒಳಪಡುವ ಸಾಧ್ಯತೆ ಇರುವ ಕಾರಣದಿಂದ ಇನ್ನೂ ಕೆಲವರು ಆಹಾರ ಮುಂತಾದ ಅವಶ್ಯಕ ಸಾಮಗ್ರಿಗಳನ್ನು ಖರೀದಿಸುವಲ್ಲಿ ತೊಡಗಿಕೊಂಡರು. ಅಕ್ಕಿ, ನೂಡಲ್ಸ್, ತರಕಾರಿಗಳು ಮತ್ತು ಇತರ ಆಹಾರ ಪದಾರ್ಥಗಳು ಸೂಪರ್​​ ಮಾರ್ಕೆಟ್​ಗಳಲ್ಲಿ ಜನರ ಸರತಿ ಸಾಲು ದೊಡ್ಡದಾಗಿದೆ. ಮಧ್ಯ ಚೀನಾದ ಅನ್ಯಾಂಗ್ ನಗರ ಮತ್ತು ಉತ್ತರ ಕೊರಿಯಾದ ಗಡಿಯಲ್ಲಿರುವ ದಾಂಡಾಂಗ್ ನಗರಗಳಲ್ಲಿ ಲಾಕ್​​ಡೌನ್​​ ಲಾಕ್‌ಡೌನ್‌ಗಳನ್ನು ಇತ್ತೀಚೆಗೆ ಪ್ರಾರಂಭಿಸಲಾಗಿದೆ.

ಈಗಾಗಲೇ ಶಾಂಘೈ ನಗರದಲ್ಲಿ ಎರಡು ವಾರಗಳಿಗೂ ಹೆಚ್ಚು ಕಾಲ ಲಾಕ್‌ಡೌನ್ ಆಗಿದೆ. 24 ಗಂಟೆಗಳ ಅವಧಿಯಲ್ಲಿ 19,000ಕ್ಕೂ ಹೆಚ್ಚು ಹೊಸ ಸೋಂಕುಗಳು ಶಾಂಘೈ ನಗರದಲ್ಲಿ ದಾಖಲಾಗಿದ್ದು, 51 ಮಂದಿ ಸಾವನ್ನಪ್ಪಿದ್ದಾರೆ. ಚಾಯಾಂಗ್‌ ಜಿಲ್ಲೆಯ 3.5 ಮಿಲಿಯನ್ ನಿವಾಸಿಗಳು ಮತ್ತು ಜಿಲ್ಲೆಯಲ್ಲಿ ಪರೀಕ್ಷಿಸಲಾಗುತ್ತಿದೆ. ಜಿಲ್ಲೆಯಾದ್ಯಂತ ವಸತಿ ಸಂಕೀರ್ಣಗಳು ಮತ್ತು ಕಚೇರಿ ಕಟ್ಟಡಗಳಲ್ಲಿ ಚಾಯಾಂಗ್‌ನಲ್ಲಿ ರಾತ್ರಿ ಮತ್ತು ಮುಂಜಾನೆ ಸೋಂಕು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮಾದರಿಗಳನ್ನು ನೀಡಲು ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾದ ಟೆಂಟ್​ಗಳ ಬಳಿ ನಿವಾಸಿಗಳು ಮತ್ತು ಕಾರ್ಮಿಕರು ಸಾಲುಗಟ್ಟಿ ನಿಂತಿದ್ದಾರೆ. ಇದರೊಂದಿಗೆ ಸೋಂಕು ಪರೀಕ್ಷೆ ಸಂಪೂರ್ಣ ಉಚಿತವಾಗಿದೆ.

ಇದನ್ನೂ ಓದಿ: ಮರಿಯುಪೋಲ್ ಬಂದರು ತೆರವಿಗೆ ರಷ್ಯಾ ಮೇಲೆ ಒತ್ತಡ ಹೇರಿ: ಯುಎನ್​ಗೆ ಉಕ್ರೇನ್‌ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.