ETV Bharat / international

ಜಾಗತಿಕವಾಗಿ ಕಡಿಮೆ ವಾಸಯೋಗ್ಯ ನಗರದಲ್ಲಿ ಸ್ಥಾನ ಪಡೆದ ಕರಾಚಿ

author img

By

Published : Jul 14, 2023, 3:48 PM IST

ಈ ಸೂಚ್ಯಂಕದಲ್ಲಿ ಉತ್ತಮ ವಾಸಯೋಗ್ಯ ನಗರಗಳಲ್ಲಿ ಬಹುತೇಕ ಪಶ್ಚಿಮ ಯುರೋಪ್​ ಮತ್ತು ಕೆನಡಾದ ನಗರಗಳು ಸ್ಥಾನ ಪಡೆದುಕೊಂಡಿವೆ.

Karachi ranked as the least livable city globally
Karachi ranked as the least livable city globally

ಕರಾಚಿ ( ಪಾಕಿಸ್ತಾನ)​: ಪ್ರಪಂಚದಲ್ಲೇ ಅತಿ ಕಡಿಮೆ ವಾಸಯೋಗ್ಯ ನಗರ ಎಂಬ ಗುರಿಗೆ ಇದೀಗ ಕರಾಚಿ ಪಾತ್ರವಾಗಿದೆ. ಎಕಾನಾಮಿಸ್ಟ್​ ಇಂಟೆಲಿಜೆನ್ಸಿ ಯುನಿಟ್​​ (ಇಐಯು) ವರದಿ ಮಾಡಿದ ಐದು ಕಡಿಮೆ ವಾಸಯೋಗ್ಯ ನಗರಗಳ ಪಟ್ಟೆಯಲ್ಲಿ ಕರಾಚಿ ಸ್ಥಾನ ಪಡೆದುಕೊಂಡಿದೆ ಎಂದು ಪಾಕಿಸ್ತಾನದ ಇಂಗ್ಲಿಷ್​ ಪತ್ರಿಕೆಯೊಂದು ವರದಿ ಮಾಡಿದೆ.

ಇಐಯು 2023ರ ಜಾಗತಿಕವಾಗಿ ಕಡಿಮೆ ವಾಸಯೋಗ್ಯ ಸೂಚ್ಯಂಕದ 173 ನಗರಗಳಲ್ಲಿ ಕರಾಚಿ 169ನೇ ಸ್ಥಾನಪಡೆದಿದೆ. ಕರಾಚಿ ಬಳಿಕ ನೈಜೀರಿಯಾದ ಲಾಗೋಸ್​, ಅಲ್ಜೀರಿಯಾದ ರಾಜಧಾನಿ ಅಲ್ಚಿಯರ್ಸ್​​, ಲಿಬಿಯಾದ ಟ್ರಿಪೋಲಿ ಮತ್ತು ಸಿರಿಯಾದ ಡಮಾಸ್ಕಸ್​ ಕೂಡಾ ಇದೆ.

ಡಮಸ್ಕಾಸ್​ನಲ್ಲಿ ನಿರಂತರ ಅಸ್ಥಿರತೆ ಮತ್ತು ಕ್ರೌರ್ಯದಿಂದಾಗಿ ಈ ಪಟ್ಟಿಯಲ್ಲಿ ಕಡೆಯ ಸ್ಥಾನ ಪಡೆದರೆ, ಎರಡನೇ ಕಡಿಮೆ ಕಳಪೆ ವಾಸಯೋಗ್ಯ ನಗರದಲ್ಲಿ ತೈಲ ಶ್ರೀಮಂತ ನಗರವಾದ ಟ್ರಿಪೋಲಿಯಲ್ಲಿ ರಾಜಕೀಯ ಪ್ರಕ್ಷುಬ್ಧತೆ ಹೆಚ್ಚಿದೆ. ಕಳಪೆ ಶಿಕ್ಷಣ, ಆರೋಗ್ಯ, ಮೂಲಭೂತ ವ್ಯವಸ್ಥೆಯಿಂದ ಅಲ್ಜಿಯರ್ಸ್ ಸ್ಥಾನ ಪಡೆದುಕೊಂಡಿದೆ.

ಕೋವಿಡೋತ್ತರ ಚೇತರಿಕೆ: ಎಕಾನಾಮಿಕ್​ ಗ್ರೂಪ್​​ನ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ ಈ ಎಕನಾಮಿಸ್ಟ್​​ ಇಂಟೆಲಿಜೆನ್ಸ್​​ ಯುನಿಟ್​ ಆಗಿದೆ. ಕರಾಚಿ ಈ ಸೂಚ್ಯಂಕದಲ್ಲಿ ಸ್ಥಾನ ಪಡೆದಿರುವ ನಗರವಾಗಿದೆ. ಪ್ರಪಂಚದೆಲ್ಲೆಡೆ ನಗರಗಳ ಕೋವಿಡೋತ್ತರ ಚೇತರಿಕೆಯನ್ನು ಈ ಸೂಚ್ಯಂಕ ಗುರಿಯಾಗಿದೆ. ನಗರದಲ್ಲಿ ವಾಸಿಸಲು ಐದು ಪ್ರಮುಖ ವರ್ಗಗಳ ಅನುಸಾರವಾಗಿ ಈ ಸೂಚ್ಯಂಕವನ್ನು ನಿಗದಿಸಲಾಗಿದೆ. ಅವುಗಳಲ್ಲಿ ಸ್ಥಿರತೆ, ಆರೋಗ್ಯ ಸೇವೆ, ಸಾಂಸ್ಕೃತಿಕ ಮತ್ತು ಪರಿಸರ, ಶಿಕ್ಷಣ ಹಾಗೂ ಮೂಲಭೂತ ಸೌಲಭ್ಯಗಳು ಸೇರಿದೆ ಎಂದಿದೆ.

1 ರಿಂದ 100 ವ್ಯಾಪ್ತಿಯೊಳಗೆ ವಾಸಯೋಗ್ಯ ಅಂಶದ ಸ್ಕೋರ್​​ಗಳನ್ನು ಸಂಗ್ರಹಿಸಿ, ತೀರ್ಮಾನಿಸಲಾಗಿದೆ. 1 ಅಂಕವನ್ನು ಸಹನಯೋಗ್ಯವಲ್ಲ ಎಂದು ಮತ್ತು 100ರನ್ನು ಅತ್ಯುತ್ತಮ ಎಂದು ಪರಿಗಣಿಸಲಾಗಿದೆ.

ಕರಾಚಿ ನಗರವೂ ಈ ವ್ಯಾಪ್ತಿಯಲ್ಲಿ 42.5 ಸ್ಕೋರ್​ ಗಳಿಸಿಕೊಂಡಿದೆ. ಇದು ಆದರ್ಶಕ್ಕಿಂತ ಕಡಿಮೆ ಇದೆ. ಇದು ಸ್ಥಿರತೆ ಅಂಶದಲ್ಲಿ ಕಳಪೆ ಪ್ರದರ್ಶನ ತೋರಿದ್ದು, 42 ಸ್ಕೋರ್​ ಪಡೆದಿದೆ. 2022ಕ್ಕೆ ಹೋಲಿಕೆ ಮಾಡಿದರೆ, ಇಲ್ಲಿನ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಆರೋಗ್ಯ ವಿಚಾರದಲ್ಲಿ 50, ಸಾಂಸ್ಕೃತಿಕತೆ ಮತ್ತು ಪರಿಸರ ವಿಚಾರದಲ್ಲಿ 28.7, ಶಿಕ್ಷಣದಲ್ಲಿ 75 ಮತ್ತು ಮೂಲ ಸೌಲಭ್ಯದಲ್ಲಿ 51.8ರಷ್ಟು ಸ್ಕೋರ್​ ಪಡೆದಿದೆ.

ಇಐಯು ಸೂಚ್ಯಂಕದ ಇತಿಹಾದಲ್ಲಿ ಕರಾಚಿ ಉತ್ತಮ ಪ್ರದರ್ಶನವನ್ನು ತೋರಿಲ್ಲ. 2019ರಲ್ಲಿ 140 ನಗರದಲ್ಲಿ ಕರಾಚಿ 136ನೇ ಸ್ಥಾನ ಪಡೆದಿತ್ತು. ಬಳಿಕ 2020 ಮತ್ತು 2022ರಲ್ಲೂ ಕ್ರಮವಾಗಿ 134 ಮತ್ತು 140ನೇ ಸ್ಥಾನ ಪಡೆದಿದೆ.

ಅತ್ಯುತ್ತಮ ನಗರಗಳು: ಈ ಸೂಚ್ಯಂಕದಲ್ಲಿ ಉತ್ತಮ ವಾಸಯೋಗ್ಯ ನಗರಗಳಲ್ಲಿ ಬಹುತೇಕ ಪಶ್ಚಿಮ ಯುರೋಪ್​ ಮತ್ತು ಕೆನಡಾ ನಗರಗಳು ಸ್ಥಾನ ಪಡೆದುಕೊಂಡಿವೆ. ಆಸ್ಟ್ರೀಯನ್​ ರಾಜಧಾನಿ ವಿಯೆನ್ನಾ ಇದರಲ್ಲಿ ಮೊದಲ ಸ್ಥಾನ ಪಡೆದಿದೆ. ಎರಡನೇ ವರ್ಷವೂ ಮೊದಲ ಸ್ಥಾನ ಕಾಯ್ದುಕೊಂಡಿದೆ. ಐದು ಸೂಚಕದಲ್ಲಿ ನಾಲ್ಕರಲ್ಲಿ ಶೇ 100ಕ್ಕೆ 100 ಸ್ಥಾನ ಪಡೆದಿದೆ.

ಡೆನ್ಮಾರ್ಕ್​ನ ಕೋಪನ್​ ಹೇಗನ್​​ ಇದರಲ್ಲಿ ಟಾಪ್​ ಎರಡನೇ ಸ್ಥಾನ ಪಡೆದಿದ್ದರೆ, ಮೆಲ್ಬೋರ್ನ್​ ಮೂರನೇ ಸ್ಥಾನ ಪಡೆದಿದೆ. ಜುರಿಚ್​, ಜಿನೀವಾ, ಪ್ರಾಂಕ್​ಫರ್ಟ್​ ಮತ್ತು ಅಮಸ್ಟರ್ಡಮ್​ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.

ಇದನ್ನೂ ಓದಿ: ಕೊನೆಗೂ ಸಿಕ್ತು 3 ಬಿಲಿಯನ್ ಡಾಲರ್ IMF ಸಾಲ; ನಿಟ್ಟುಸಿರು ಬಿಟ್ಟ ಪಾಕಿಸ್ತಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.