ETV Bharat / international

ಅಮೆರಿಕದಲ್ಲಿ ಜೈನ ಸಮುದಾಯದಿಂದ ಡಿಜಿಟಲ್ ಡಿಟಾಕ್ಸ್ ದಿನಾಚರಣೆಗೆ ಕರೆ: ಏನಿದರ ಉದ್ದೇಶ?

author img

By PTI

Published : Dec 14, 2023, 2:26 PM IST

ಜೈನ ಸಮುದಾಯದಿಂದ ಅಮೆರಿಕದಲ್ಲಿ ಡಿಜಿಟಲ್ ಡಿಟಾಕ್ಸ್ ದಿನಕ್ಕೆ ಕರೆ ನೀಡಲಾಗಿದೆ. ಡಿಜಿಟಲ್ ಸಾಧನಗಳ ಬಳಕೆಯನ್ನು ಮಿತಿಗೊಳಿಸಲು ಇದು ಉತ್ತೇಜನ ನೀಡಲಾಗಿದೆ.

Digital Detox Day
ಅಮೇರಿಕಾದಲ್ಲಿ ಡಿಜಿಟಲ್ ಡಿಟಾಕ್ಸ್ ದಿನಾಚರಣೆ: ಡಿಜಿಟಲ್ ಸಾಧನಗಳ ಬಳಕೆ ಮಿತಿಗೊಳಿಸಲು ಉತ್ತೇಜನ

ವಾಷಿಂಗ್ಟನ್ (ಅಮೆರಿಕ): ಡಿಜಿಟಲ್ ಸಾಧನಗಳ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜನರನ್ನು ಉತ್ತೇಜಿಸಲು ಜೈನ ಸಮುದಾಯವು ಅಮೆರಿಕದಾದ್ಯಂತ ರಾಷ್ಟ್ರವ್ಯಾಪಿ ಡಿಜಿಟಲ್ ಡಿಟಾಕ್ಸ್ ಆಂದೋಲನ ಘೋಷಣೆ ಮಾಡಲಾಗಿದೆ. ವಾರ್ಷಿಕ ಡಿಜಿಟಲ್ ಡಿಟಾಕ್ಸ್ ದಿನವು (Digital Detox Day) ಬುಧವಾರ ಕೊನೆಗೊಳ್ಳಲಿದೆ.

ಅಜಯ್ ಜೈನ್ ಭೂಟೋರಿಯಾ ಮಾಹಿತಿ: "ಡಿಜಿಟಲ್ ಡಿಟಾಕ್ಸ್ ಆಂದೋಲನದ ಮೂಲಕ ಡಿಜಿಟಲ್ ಬಳಕೆಯನ್ನು ಸಂಪೂರ್ಣವಾಗಿ ತೊಡೆದುಹಾಕುವುದು ಗುರಿಯಲ್ಲ. ಆದರೆ, ಜನರು ಸ್ವಯಂ-ಆರೈಕೆ ಮತ್ತು ಅವರು ಇಷ್ಟಪಡುವ ಚಟುವಟಿಕೆಗಳಲ್ಲಿ ಸಮಯವನ್ನು ಕಳೆಯಲು ಪ್ರೋತ್ಸಾಹಿಸುವುದು ಮೂಲ ಉದ್ದೇಶವಾಗಿದೆ" ಎಂದು ಭಾರತೀಯ ಅಮೆರಿಕನ್ ಸಮುದಾಯದ ನಾಯಕ ಮತ್ತು ಏಷ್ಯನ್ ಅಮೆರಿಕನ್ನರ ಅಧ್ಯಕ್ಷೀಯ ಆಯೋಗದ ಸದಸ್ಯ ಅಜಯ್ ಜೈನ್ ಭೂಟೋರಿಯಾ ಹೇಳಿದ್ದಾರೆ.

ಆಂದೋಲನವು ನಮ್ಮ ಸಮಯವನ್ನು ಡಿಜಿಟಲ್ ಕ್ಷೇತ್ರದಿಂದ ಮರುಪಡೆಯುವುದು, ಡಿಜಿಟಲ್ ಪರದೆಯ ಆಚೆಗಿನ ಜೀವನದ ಸೌಂದರ್ಯವನ್ನು ಮರುಶೋಧಿಸುವುದು ಮತ್ತು ಹೆಚ್ಚು ಮಾನವ ಸ್ಪರ್ಶ, ಮಾನವ ಸಂಭಾಷಣೆ, ಆರೋಗ್ಯಕರ ಸಂಬಂಧಗಳನ್ನು ವೃದ್ಧಿಸಲು ಸಹಕಾರಿಯಾಗುತ್ತದೆ'' ಎಂದು ತಿಳಿಸಿದರು.

ಡಿಜಿಟಲ್ ಸಾಧನಗಳ ಬಳಕೆಗೆ ಮಿತಿ: ''ಈ ಪರಿಕಲ್ಪನೆಯು 11ನೇ ಜೈನ ಗುರು ಆಚಾರ್ಯ ಮಹಾಶ್ರಮನ್ ಮತ್ತು ಮುನಿ ಜಾಗೃತ್ ಅವರ ಬೋಧನೆಗಳಲ್ಲಿ ಅಡಕವಾಗಿದೆ. ಡಿಜಿಟಲ್ ಸಾಧನದ ಬಳಕೆಯನ್ನು ಸೀಮಿತಗೊಳಿಸುವ ನಿಟ್ಟಿನಲ್ಲಿ ವ್ಯಕ್ತಿಗಳನ್ನು ಪ್ರೋತ್ಸಾಹಿಸಲು ಆಂದೋಲನ ಕೈಗೊಳ್ಳಲಾಗಿದೆ. ತಾನು ಮತ್ತು ಅಮೇರಿಕಾದಲ್ಲಿರುವ ಇತರ ಜೈನ ಸಮುದಾಯದ ಮುಖಂಡರು, ಕಾಂಗ್ರೆಸ್ ಸದಸ್ಯರು, ಸ್ಥಳೀಯ ಮೇಯರ್‌ಗಳು ಮತ್ತು ಶಾಸಕರು ಸೇರಿದಂತೆ ಪ್ರಮುಖ ವ್ಯಕ್ತಿಗಳೊಂದಿಗೆ ಈ ಕುರಿತು ವ್ಯಾಪಕ ಚರ್ಚೆ ಮಾಡಲಾಗಿದೆ. ಅವರ ಸರ್ವಾನುಮತದ ಅನುಮೋದನೆ ಮತ್ತು ಪ್ರೋತ್ಸಾಹವು ಡಿಜಿಟಲ್ ಡಿಟಾಕ್ಸ್ ದಿನವನ್ನು ಆಚರಿಸಲು ಪೂರಕವಾಗಿದೆ'' ಎಂದು ಅಜಯ್ ಜೈನ್ ಭೂಟೋರಿಯಾ ವಿವರಿಸಿದ್ದಾರೆ.

ಜೀವನದ ಸೌಂದರ್ಯ ಕಂಡುಕೊಳ್ಳಲು ಅನುಕೂಲ: "ಅನುವ್ರತ್ ಡಿಜಿಟಲ್ ಡಿಟಾಕ್ಸ್ ಆಂದೋಲನವು ನಮ್ಮ ಸಮಯವನ್ನು ಡಿಜಿಟಲ್ ಕ್ಷೇತ್ರದಿಂದ ಮರುಪಡೆಯುವುದು ಮತ್ತು ಡಿಜಿಟಲ್ ಪರದೆಯ ಆಚೆಗಿನ ಜೀವನದ ಸೌಂದರ್ಯವನ್ನು ಕಂಡುಕೊಳ್ಳಲು ಅನುಕೂಲವಾಗುತ್ತದೆ. ಯುಎನ್ ಸಿವಿಲ್ ಸೊಸೈಟಿ ಇಲಾಖೆಯೊಂದಿಗೆ ಸಂಯೋಜಿತವಾಗಿರುವ ಅನುವ್ರತ್ ವಿಶ್ವ ಭಾರತಿ ಸೊಸೈಟಿಯು ಜಾಗತಿಕವಾಗಿ ಸಮಾನ ಮನಸ್ಕ ಸಂಸ್ಥೆಗಳೊಂದಿಗೆ ಡಿಜಿಟಲ್ ಡಿಟಾಕ್ಸ್ ಆಂದೋಲನ ನಡೆಸಲಾಗಿದೆ ಎಂದು ಅಜಯ್ ಜೈನ್ ಭೂಟೋರಿಯಾ ಅವರು, ಅತಿಯಾದ ಡಿಜಿಟಲ್ ಸಾಧನದ ಬಳಕೆಯ ಪ್ರತಿಕೂಲ ಪರಿಣಾಮಗಳ ಬಗ್ಗೆ ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧ: ಕದನ ವಿರಾಮಕ್ಕೆ ಒತ್ತಾಯಿಸುವ ಕರಡು ನಿರ್ಣಯದ ಪರ ಮತ ಚಲಾಯಿಸಿದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.