ETV Bharat / international

ಸಿವಿಲ್​ ವಂಚನೆ ಪ್ರಕರಣ : ನವೆಂಬರ್​ 8ರಂದು ಇವಾಂಕಾ ಟ್ರಂಪ್​ ವಿಚಾರಣೆ

author img

By PTI

Published : Oct 31, 2023, 7:46 AM IST

ಸಿವಿಲ್​ ವಂಚನೆ ಪ್ರಕರಣದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಹಿರಿಯ ಮಗಳು ಇವಾಂಕಾ ಟ್ರಂಪ್ ವಿಚಾರಣೆ ನವೆಂಬರ್​ 8ರಂದು ನಡೆಯಲಿದೆ.

ivanka-trump-testimony-delayed-to-november-8-will-follow-dad-donald-trump-on-stand-at-civil-fraud-trial
ಸಿವಿಲ್​ ವಂಚನೆ ಪ್ರಕರಣ : ನವೆಂಬರ್​ 8ರಂದು ಇವಾಂಕ ಟ್ರಂಪ್​ ವಿಚಾರಣೆ

ನ್ಯೂಯಾರ್ಕ್​ (ಅಮೆರಿಕ) : ಸಿವಿಲ್​ ವಂಚನೆ ಆರೋಪ ಪ್ರಕರಣದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಿಚಾರಣೆ ನಡೆಯುತ್ತಿದೆ. ಕಳೆದ ಶುಕ್ರವಾರ ನಡೆದ ಪ್ರಕರಣದ ವಿಚಾರಣೆ ವೇಳೆ ಡೊನಾಲ್ಡ್​ ಟ್ರಂಪ್​ ಅವರ ಹಿರಿಯ ಮಗಳು ಇವಾಂಕಾ ಟ್ರಂಪ್​ ವಿಚಾರಣೆಯನ್ನು ನವೆಂಬರ್​ 8ರಂದು ನಡೆಸಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಶುಕ್ರವಾರ ಇವಾಂಕಾ ಟ್ರಂಪ್​​ ಪ್ರಕರಣದ ವಿಚಾರಣೆಗೆ ಹಾಜರಾಗಬೇಕಿತ್ತು. ಇವಾಂಕಾ ಅವರ ವಿಚಾರಣೆ ದೀರ್ಘ ಅವಧಿಗೆ ನಡೆಯುವುದರಿಂದ ನ್ಯಾಯಾಧೀಶ ಆರ್ಥರ್​ ಎಂಗೊರಾನ್ ಅವರು ನವೆಂಬರ್​ 8ಕ್ಕೆ ವಿಚಾರಣೆಯನ್ನು ನಿಗದಿಪಡಿಸಿದ್ದಾರೆ. ನವೆಂಬರ್​ 6ಕ್ಕೆ ಡೊನಾಲ್ಡ್​ ಟ್ರಂಪ್ ಮತ್ತೆ​ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಕಳೆದ ವಾರ ಇವಾಂಕಾ ಅವರು ಪ್ರಕರಣದ ವಿಚಾರಣೆಯನ್ನು ರದ್ದು ಮಾಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಾಧೀಶ ಆರ್ಥರ್​ ಎಂಗೊರಾನ್ ಅವರು ತಿರಸ್ಕರಿಸಿದ್ದರು. ಇದೀಗ ಇವಾಂಕಾ ನವೆಂಬರ್​ 8ರಂದು ಪ್ರಕರಣದ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ನ್ಯಾಯಾಧೀಶ ಆರ್ಥರ್​ ಎಂಗೊರಾನ್ ತಿಳಿಸಿದ್ದಾರೆ. ಇದರಿಂದ ಇವಾಂಕ ವಿಚಾರಣೆಗೆ ದೀರ್ಘ ಅವಧಿ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

ಶುಕ್ರವಾರ ಇಡೀ ದಿನ ಸಿವಿಲ್​ ವಂಚನೆ ಪ್ರಕರಣ ವಿಚಾರಣೆ ನಡೆಸುವ ಬಗ್ಗೆ ನ್ಯಾಯಾಧೀಶರು ಪ್ರಸ್ತಾಪಿಸಿದಾಗ, ಡೊನಾಲ್ಡ್​ ಟ್ರಂಪ್​ ಪರ ವಕೀಲರು ಕಾರಣಾಂತರಗಳಿಂದ ವಿಚಾರಣೆಗೆ ಪೂರ್ತಿ ದಿನ ಹಾಜರಾಗಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರಿಗೆ ತಿಳಿಸಿದರು. ಈ ಸಂಬಂಧ ಡೊನಾಲ್ಡ್​ ಟ್ರಂಪ್​ ಪರ ವಕೀಲರೊಂದಿಗೆ ಚರ್ಚೆ ನಡೆಸಿದ ಬಳಿಕ ನ್ಯಾಯಾಧೀಶರು, ನವೆಂಬರ್​ 8ರಂದು ಇವಾಂಕಾ ವಿಚಾರಣೆ ನಡೆಯಲಿದೆ ಎಂದು ತಿಳಿಸಿದರು.

ಕಳೆದ ವರ್ಷ ನ್ಯೂಯಾರ್ಕ್​ ಅಟಾರ್ನಿ ಜನರಲ್​ ಲೆಟಿಟಿಯಾ ಜೇಮ್ಸ್​ ಅವರು ಡೊನಾಲ್ಡ್​ ಟ್ರಂಪ್​ ಮತ್ತು ಟ್ರಂಪ್ ಸಂಸ್ಥೆ ಹಾಗೂ ಪುತ್ರರಾದ ಎರಿಕ್​ ಮತ್ತು ಡೊನಾಲ್ಡ್​ ಟ್ರಂಪ್​ ಜೂನಿಯರ್​ ವಿರುದ್ಧ ಆಸ್ತಿ ಮೌಲ್ಯವನ್ನು ಹೆಚ್ಚು ತೋರಿಸಿದ ಹಿನ್ನೆಲೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಇವಾಂಕಾ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಇವಾಂಕಾ ಅವರು ಈ ಮೊದಲು ಟ್ರಂಪ್​ ಸಂಸ್ಥೆಯಲ್ಲಿ ಕಾರ್ಯನಿರ್ವಾಹಕರಾಗಿದ್ದರು. ಈ ಸಂಬಂಧ ಅವರ ವಿರುದ್ಧವೂ ಮೊಕದ್ದಮೆ ದಾಖಲಿಸಲಾಗಿತ್ತು. ಆದರೆ ಕಳೆದ ಜೂನ್​ ತಿಂಗಳಲ್ಲಿ ನ್ಯಾಯಾಲಯವು ಆರೋಪವನ್ನು ತಿರಸ್ಕರಿಸಿತ್ತು.

2017ರ ಜನವರಿಯಲ್ಲಿ ಇವಾಂಕಾ ಅವರು ಟ್ರಂಪ್​ ಸಂಸ್ಥೆಯಿಂದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸ್ಥಾನವನ್ನು ತೊರೆದಿದ್ದರು. ಬಳಿಕ ತಂದೆಗೆ ಆಡಳಿತ ಸಲಹೆಗಾರರಾಗಿ ಸೇರಿಕೊಂಡಿದ್ದರು. 2021ರಲ್ಲಿ ಡೊನಾಲ್ಡ್​​ ಟ್ರಂಪ್​ ಸೋತ ನಂತರ ಫ್ಲೋರಿಡಾಕ್ಕೆ ತೆರಳಿದರು. ಇದೇ ವೇಳೆ ಟ್ರಂಪ್​ ಇದು ರಾಜಕೀಯ ಪ್ರೇರಿತ ಪ್ರಕರಣ. ನನ್ನ ವಿರುದ್ಧ ದ್ವೇಷ ಸಾಧಿಸಲು ಕೆಲವರು ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಇವಾಂಕಾ ವಿಚಾರಣೆ ನಂತರ ಪ್ರಕರಣ ಸಂಬಂಧ ಒಟ್ಟು 127 ಜನರನ್ನು ನ್ಯಾಯಾಲಯ ವಿಚಾರಣೆ ನಡೆಸಲಿದೆ. ಈ ಪ್ರಕರಣದ ತನಿಖೆಯು ಅಕ್ಟೋಬರ್​ 2 ರಂದು ಪ್ರಾರಂಭವಾಗಿತ್ತು.

ಟ್ರಂಪ್ ಪ್ರಕರಣ : ಡೊನಾಲ್ಡ್​ ಟ್ರಂಪ್ ತನ್ನ ಆಸ್ತಿಯನ್ನು ಅತಿಯಾಗಿ ಮೌಲ್ಯಮಾಪನ ಮಾಡುವ ಮೂಲಕ ಮತ್ತು ತಮ್ಮ ನಿವ್ವಳ ಮೌಲ್ಯವನ್ನು ಹೆಚ್ಚು ತೋರಿಸುವ ಮೂಲಕ ಬ್ಯಾಂಕುಗಳು, ವಿಮಾದಾರರು ಮತ್ತು ಇತರರಿಗೆ ವಂಚಿಸಿದ್ದಾರೆ. ಟ್ರಂಪ್ ಸಂಸ್ಥೆಗೆ ಹೆಚ್ಚಿನ ಹಣವನ್ನು ಪಡೆಯಲು ಅವರು ಈ ರೀತಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಡೊನಾಲ್ಡ್ ಟ್ರಂಪ್ 1 ಶತಕೋಟಿ ಡಾಲರ್‌ಗೂ ಹೆಚ್ಚು ಸಾಲ ಮಾಡಿದ್ದಾರೆ ಎಂಬ ಆರೋಪವೂ ಅವರ ಮೇಲಿದೆ.

ಇದನ್ನೂ ಓದಿ : ಸಿವಿಲ್​ ವಂಚನೆ ಪ್ರಕರಣ: ಟ್ರಂಪ್​ ವಿರುದ್ಧ ಸಾಕ್ಷ್ಯ ನುಡಿದ ಮೈಕೆಲ್​ ಕೊಹೆನ್​​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.