ETV Bharat / international

ಅಮೆರಿಕದ ದಮನಕಾರಿ ನೀತಿಗೆ ಮಿತ್ರರಾಷ್ಟ್ರಗಳೇ ಬಲಿ: ಚೀನಾ ವಾಗ್ದಾಳಿ

author img

By

Published : Jun 6, 2023, 5:48 PM IST

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್​ ಆಸ್ಟಿನ್ ಚೀನಾ ವಿರುದ್ಧ ಹೇಳಿಕೆ ನೀಡಿದ ಬೆನ್ನಲ್ಲೇ ಭಾರತದಲ್ಲಿನ ಚೀನಾ ರಾಯಭಾರ ಕಚೇರಿಯ ವಕ್ತಾರರು ಅಮೆರಿಕದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

It is the US not China who resorts to all types
It is the US not China who resorts to all types

ನವದೆಹಲಿ : ಅಮೆರಿಕದ ಮಿತ್ರರಾಷ್ಟ್ರಗಳು ಮತ್ತು ಪಾಲುದಾರ ರಾಷ್ಟ್ರಗಳೇ ಅದರ ದಬ್ಬಾಳಿಕೆ ಮತ್ತು ದಮನಕಾರಿ ನೀತಿಯ ಬಲಿಪಶುಗಳಾಗಿವೆ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳು ಕೂಡ ಇದರಿಂದ ಸಂಕಷ್ಟ ಎದುರಿಸುತ್ತಿವೆ ಎಂದು ಚೀನಾ ಅಮೆರಿಕದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. "ವಿಶ್ವ ಶಾಂತಿ ಮತ್ತು ಸಮೃದ್ಧಿಗೆ ಚೀನಾ ಸಹಕಾರ ನೀಡುತ್ತದೆ. ತನ್ನ ಪ್ರಾಬಲ್ಯ ಸಾಧಿಸಲು ದಮನಕಾರಿ ನೀತಿಗಳನ್ನು ಅಳವಡಿಸಿಕೊಂಡಿರುವುದು ಅಮೆರಿಕವೇ ಹೊರತು ಚೀನಾ ಅಲ್ಲ. ಮಿತ್ರರಾಷ್ಟ್ರಗಳೇ ಅದರ ದಮನಕಾರಿ ನೀತಿಯ ಬಲಿಪಶುಗಳಾಗಿವೆ ಮತ್ತು ಅಭಿವೃದ್ಧಿಶೀಲ ದೇಶಗಳು ಕೂಡ ಇದರ ಸಂಕಷ್ಟ ಎದುರಿಸುತ್ತಿವೆ" ಎಂದು ಭಾರತದಲ್ಲಿ ಚೀನಾ ರಾಯಭಾರ ಕಚೇರಿಯ ವಕ್ತಾರ ವಾಂಗ್ ಶಿಯೋಜಿಯಾನ್ ಟ್ವೀಟ್ ಮಾಡಿದ್ದಾರೆ.

  • China is a contributor to world peace and prosperity. It is the US, not China, who resorts to all types of measures for coercion and hegemony. Victims to US coercion and bullying include its allies and partners, with developing countries bearing the brunt of it.

    — Wang Xiaojian (@ChinaSpox_India) June 6, 2023 " class="align-text-top noRightClick twitterSection" data=" ">

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್​ ಆಸ್ಟಿನ್ ಅವರ ನಿರ್ದಿಷ್ಟ ಹೇಳಿಕೆಗಳ ನಂತರ ಚೀನಾದ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. "ನಾವೆಲ್ಲರೂ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾದ ಬೆದರಿಕೆ ಮತ್ತು ದಬ್ಬಾಳಿಕೆಗಳನ್ನು ಮತ್ತು ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣವನ್ನು ನಾವು ನೋಡುತ್ತಿದ್ದೇವೆ. ರಷ್ಯಾ ತನ್ನ ಗಡಿಗಳನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ ಮತ್ತು ರಾಷ್ಟ್ರೀಯ ಸಾರ್ವಭೌಮತೆಗೆ ಬೆದರಿಕೆ ಹಾಕುತ್ತಿದೆ." ಎಂದು ಲಾಯ್ಡ್​ ಆಸ್ಟಿನ್ ಹೇಳಿದ್ದರು. ಅದಕ್ಕೆ ಪ್ರತಿಯಾಗಿ ಚೀನಾ ತಿರುಗೇಟು ನೀಡಿದೆ.

ಆಸ್ಟಿನ್ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಆಕ್ರಮಣಶೀಲತೆಯನ್ನು ಎದುರಿಸಲು ಎರಡೂ ದೇಶಗಳು ರಕ್ಷಣಾ ಕೈಗಾರಿಕಾ ಸಹಕಾರಕ್ಕಾಗಿ ಮಹತ್ವಾಕಾಂಕ್ಷೆಯ ಮಾರ್ಗಸೂಚಿಗೆ ಒಪ್ಪಿಗೆ ಸೂಚಿಸಿವೆ. ಉಭಯ ನಾಯಕರು ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಬಲಪಡಿಸುವ ಜೊತೆಗೆ ಇಂಡೋ ಪೆಸಿಫಿಕ್ ಪ್ರದೇಶದ ಭದ್ರತೆ ಮತ್ತು ಭಾರತದ ನೆರೆಯ ದೇಶ ಚೀನಾ ಬೆದರಿಕೆಯ ಕುರಿತು ಮಾತುಕತೆ ನಡೆಸಿದರು.

ವಾಸ್ತವ ನಿಯಂತ್ರಣ ರೇಖೆಯಲ್ಲಿ ಚೀನಾದ ಪ್ರಾಬಲ್ಯದ ಬಗ್ಗೆ ಪ್ರತಿಕ್ರಿಯಿಸುವ ಸಮಯದಲ್ಲಿ ಚೀನಾವನ್ನು ಕೆಣಕುವ ರೀತಿಯಲ್ಲಿ ಮಾತನಾಡಿದ ಯುಎಸ್ ರಕ್ಷಣಾ ಕಾರ್ಯದರ್ಶಿ, ನಾನು ಯಾವುದೇ ಊಹಾಪೋಹಗಳ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಕೆಲ ಘಟನೆಗಳು ಯಾವುದೇ ಸಮಯದಲ್ಲಾದರೂ ಘಟಿಸಬಹುದು. ಆದರೆ ಅಂಥ ಘಟನೆಗಳು ನಡೆಯದಂತೆ ಖಚಿತಪಡಿಸಿಕೊಳ್ಳಲು ಬೇಕಾದ ಎಲ್ಲವನ್ನೂ ನಾವು ಮಾಡುತ್ತೇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾನು ಬಯಸುತ್ತೇನೆ. ಅದರ ಭಾಗವಾಗಿ ಪರಸ್ಪರ ಸಂವಹನ ನಡೆಸುವುದು ಮತ್ತು ನಮ್ಮ ನಿಯಂತ್ರಣದಿಂದ ಹೊರತಾದ ಘಟನೆಗಳು ನಡೆಯದಂತೆ ತಡೆಯಲು ನಾವು ಪ್ರಯತ್ನಿಸುತ್ತೇವೆ ಎಂದು ಆಸ್ಟಿನ್ ಹೇಳಿದ್ದರು.

ಭಾರತ ಚೀನಾ ಗಡಿ ಸಮಸ್ಯೆಯ ಕುರಿತು ಅಮೆರಿಕದ ರಕ್ಷಣಾ ಕಾರ್ಯದರ್ಶಿಯ ಹೇಳಿಕೆಗೆ ದೆಹಲಿಯಲ್ಲಿನ ಚೀನಾ ರಾಯಭಾರಿ ಕಚೇರಿಯ ವಕ್ತಾರ ವಾಂಗ್ ಕ್ಸಿಯಾಜಿಯಾನ್ ಇಂದು ಮಾತನಾಡಿದ್ದು, ಪ್ರಸ್ತುತ ಚೀನಾ ಭಾರತದ ಗಡಿ ಪರಿಸ್ಥಿತಿ ಒಟ್ಟಾರೆ ಸ್ಥಿರವಾಗಿದೆ. ಗಡಿ ಪ್ರಶ್ನೆಯು ಚೀನಾ ಮತ್ತು ಭಾರತದ ನಡುವಿನ ವಿಷಯವಾಗಿದೆ ಮತ್ತು ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪವನ್ನು ನಾವು ಬಯಸುವುದಿಲ್ಲ ಎಂದರು. 2020 ರಿಂದ ಭಾರತ ಮತ್ತು ಚೀನಾ ನಡುವಿನ ಬಾಂಧವ್ಯವು ತೀರಾ ಹದಗೆಟ್ಟಿದೆ. ಭಾರತದ ಭೂಪ್ರದೇಶಗಳ ಮೇಲೆ ಚೀನಾ ಪದೇ ಪದೆ ಅತಿಕ್ರಮಣ ಮಾಡಲು ಪ್ರಯತ್ನಿಸುತ್ತಿದೆ. ಗಲ್ವಾನ್ ಕಣಿವೆಯ ಬಿಕ್ಕಟ್ಟಿನ ನಂತರ ಪರಿಸ್ಥಿತಿಯು ಮತ್ತಷ್ಟು ಬಿಗಡಾಯಿಸಿದ್ದು, ಎರಡೂ ದೇಶಗಳ ಮಧ್ಯೆ ದ್ವೇಷದ ವಾತಾವರಣ ಮೂಡಿಸಿದೆ.

ಇದನ್ನೂ ಓದಿ : ರಷ್ಯಾ ಬಾಂಬ್ ದಾಳಿಯಿಂದ ಉಕ್ರೇನ್‌ನ ಬೃಹತ್ ಅಣೆಕಟ್ಟೆಗೆ ಹಾನಿ, ಭಾರಿ ಪ್ರವಾಹ ಸಾಧ್ಯತೆ- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.