ETV Bharat / international

ಮುಗಿಯದ ಇಸ್ರೇಲ್​-ಸಿರಿಯಾ ವಾರ್​; ಇಂದು ಮತ್ತೆ ಸಿರಿಯಾ ಮೇಲೆ ಪ್ರತಿ​ ದಾಳಿ ​

author img

By

Published : Apr 9, 2023, 11:57 AM IST

ಸಿರಿಯಾದ 6 ರಾಕೆಟ್​ಗಳ ದಾಳಿಗೆ ಇಸ್ರೇಲ್​ ಪ್ರತ್ಯುತ್ತರವಾಗಿ ಇಂದು ಮುಂಜಾನೆ ದಾಳಿ ನಡೆಸಿದೆ.

war
ಇಸ್ರೇಲ್​ ಸಿರಿಯಾ

ಜೆರುಸಲೆಮ್(ಇಸ್ರೇಲ್‌): ಇಸ್ರೇಲ್‌ ಮೇಲೆ ಸಿರಿಯಾ 6 ರಾಕೆಟ್​ಗಳ ದಾಳಿಯ ನಂತರ ಪ್ರತ್ಯುತ್ತರವಾಗಿ ಇಸ್ರೇಲ್‌ ಸಿರಿಯಾ ಮೇಲೆ ಇಂದು ಮುಂಜಾನೆ ಪ್ರತಿ ದಾಳಿ ನಡೆಸಿದೆ ಎಂದು ಇಸ್ರೇಲಿ ಮಿಲಿಟರಿ ತಿಳಿಸಿದೆ. ಸಿರಿಯಾವು ಇಸ್ರೇಲ್‌ ಮೇಲೆ ಎರಡು ಬಾರಿ ಮೂರು ಮೂರು ದಾಳಿಯನ್ನು ರಾಕೆಟ್​ ಮೂಲಕ ನಡೆಸಿತ್ತು. ಹೀಗಾಗಿ ದಕ್ಷಿಣ ಸಿರಿಯಾದ ಮೇಲೆ ಫಿರಂಗಿ ಗುಂಡಿನ ಮೂಲಕ ಇಸ್ರೇಲ್‌ ಪ್ರತಿಕ್ರಿಯಿಸಿದೆ.

ಮೊದಲು ಫಿರಂಗಿ ಗುಂಡಿನ ನಂತರ ಇಸ್ರೇಲಿ ಫೈಟರ್ ಜೆಟ್‌ಗಳು ಸಿರಿಯಾದ 4ನೇ ವಿಭಾಗ ಮತ್ತು ರಾಡಾರ್ ಮತ್ತು ಫಿರಂಗಿ ಪೋಸ್ಟ್‌ಗಳ ಕಾಂಪೌಂಡ್ ಸೇರಿದಂತೆ ಸಿರಿಯನ್ ಸೈನ್ಯದ ಸೈಟ್‌ಗಳ ಮೇಲೆ ದಾಳಿ ಮಾಡಿದೆ ಎಂದು ಮಿಲಿಟರಿ ಹೇಳಿರುವುದನ್ನು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.ಮೊದಲು ಸಿರಿಯಾ ಇಸ್ರೇಲ್​ ನ ಗೋಲನ್ ಹೈಟ್ಸ್‌ನಲ್ಲಿರುವ ಪಟ್ಟಣಗಳ ಮೇಲೆ 3 ರಾಕೆಟ್‌ಗಳನ್ನು ಉಡಾಯಿಸಿತು. ಮತ್ತೆ ಅದೇ ಸಿರಿಯಾದಿಂದ ಗೋಲನ್‌ ಮೇಲೆ ಮೂರು ರಾಕೆಟ್‌ಗಳನ್ನು ಉಡಾವಣೆ ಮಾಡಿದೆ.

ಇದಾದ ಕೆಲವು ಗಂಟೆಗಳ ಬಳಿಕ ಇಸ್ರೇಲ್​ ಸಿರಿಯಾದ ಮೇಲೆ ದಾಳಿ ನಡೆಸಿದೆ ಎಂದು ಇಸ್ರೇಲ್​ ಮಿಲಿಟರಿ ತಿಳಿಸಿದೆ. ಇನ್ನು ಶನಿವಾರ ರಾತ್ರಿ ಯಹೂದಿ ಆರಾಧಕರು ಪಾಸೋವರ್‌ನಲ್ಲಿ ನಡೆಯುವ ಪುರೋಹಿತರ ಆಶೀರ್ವಾದಕ್ಕಾಗಿ ಹೆಚ್ಚಿನ ಜನ ಸೇರುವುದರಿಂದ ಭಾನುವಾರ ಮತ್ತಷ್ಟು ಅಶಾಂತಿ ಉಂಟಾಗಬಹುದೆಂದು ಭದ್ರತಾ ಪಡೆಗಳು ಜೆರುಸಲೆಮ್‌ನ ಓಲ್ಡ್ ಸಿಟಿಯತ್ತ ಹೆಚ್ಚಿನ ಗಮನ ಹರಿಸಿದೆ. ಈ ಕುರಿತು ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ.

ಇನ್ನು ಯಹೂದಿ ಸಂದರ್ಶಕರು ಟೆಂಪಲ್ ಮೌಂಟ್ ಅನ್ನು ಏರುವ ನಿರೀಕ್ಷೆಯಿದೆ, ಇದನ್ನು ಮುಸ್ಲಿಮರು ಅಲ್-ಹರಾಮ್ ಅಲ್-ಶರೀಫ್ ಎಂದು ಕರೆಯಲಾಗುತ್ತದೆ. ಹೀಗಾಗಿ ನಗರದಾದ್ಯಂತ ಹೆಚ್ಚುವರಿಯಾಗಿ 2,300 ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಮುಸ್ಲಿಮರು, ಯಹೂದಿಗಳು ಮತ್ತು ಕ್ರಿಶ್ಚಿಯನ್ನರು ರಂಜಾನ್, ಪಾಸೋವರ್ ಮತ್ತು ಈಸ್ಟರನ್ನು ಶಾಂತಿಯುತವಾಗಿ ಆಚರಿಸಲು ಇಸ್ರೇಲ್ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಇನ್ನು ಸಿರಿಯಾ ಈ ಸಂದರ್ಭ ನೋಡಿಕೊಂಡೇ ದಾಳಿ ಮಾಡಿದೆ. ಪ್ಯಾಲೇಸ್ಟಿನಿಯನ್ ಉಗ್ರಗಾಮಿಗಳ ರಾಕೆಟ್ ಗುಂಡಿನ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಕೂಡ ಗಾಜಾ ಮತ್ತು ಲೆಬನಾನ್ ಎರಡನ್ನೂ ಪ್ರತ್ಯುತ್ತರವಾಗಿ ದಾಳಿ ಮಾಡುವ ಮೂಲಕ ಸ್ಫೋಟಿಸಿತು.

ಇಸ್ರೇಲ್​ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ಟೆಂಪಲ್ ಮೌಂಟ್‌ನಲ್ಲಿ ಪ್ರಾರ್ಥನೆಯು ಶಾಂತಿಯುತವಾಗಿ ನೆರವೇರಲು ರಕ್ಷಣಾ ವ್ಯವಸ್ಥೆಗಳನ್ನು ಹೆಚ್ಚಿಸಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ. ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರು ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಕರೆಯಲ್ಲಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಜೊತೆ ಪವಿತ್ರ ಸ್ಥಳಗಳಲ್ಲಿ ಮುಖ್ಯವಾಗಿ ಟೆಂಪಲ್ ಮೌಂಟ್ನಲ್ಲಿ ರಕ್ಷಣೆ ಮತ್ತು ಶಾಂತಿಯನ್ನು ಕಾಪಾಡಲು ಬದ್ಧವಾಗಿದೆ ಎಂದು ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರು ಹೇಳಿದ್ದಾರೆ. ಕಳೆದ ವಾರ ನೆತನ್ಯಾಹು ಇಸ್ರೇಲ್‌ನಲ್ಲಿ ಇತ್ತೀಚಿಗೆ ಸಂಭವಿಸುತ್ತಿರುವ ಹಿಂಸಾಚಾರದ ಹಿಂದೆ ಇರಾನ್ ಕೈವಾಡವಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಪಾಕ್ ಪ್ರಧಾನಿ ಮನೆಯೊಳಗೆ ನುಗ್ಗಿದ ಶಂಕಿತ ಅಫ್ಘಾನಿಸ್ತಾನದ ವ್ಯಕ್ತಿ : ಬಂಧನ, ಮುಂದುವರೆದ ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.