ETV Bharat / international

ಭಾರತೀಯ ಮಕ್ಕಳು ಸ್ಪೈಡರ್​ಮ್ಯಾನ್​ ವೇಷ ಧರಿಸಿದ್ರೆ, ಅಮೆರಿಕ ಯುವಕರು ನಾಟುನಾಟು ಹಾಡಿಗೆ ಹೆಜ್ಜೆ ಹಾಕುತ್ತಾರೆ: ಪ್ರಧಾನಿ ಮೋದಿ

author img

By

Published : Jun 23, 2023, 8:03 AM IST

Updated : Jun 23, 2023, 1:31 PM IST

ಪ್ರಧಾನಿ ಮೋದಿಗಾಗಿ ಆಯೋಜಿಸಿದ್ದ ಔತಣಕೂಟದಲ್ಲಿ ನೂರಾರು ಗಣ್ಯರು ಭಾಗಿಯಾಗಿದ್ದು, ಈ ವೇಳೆ ಮೋದಿಯವರು ಔತಣಕೂಟ ಉದ್ದೇಶಿಸಿ ಮಾತನಾಡಿದರು.

Indian kids dress up as Spiderman  America youth steps to the Natu Natu song  ಭಾರತೀಯ ಮಕ್ಕಳು ಸ್ಪೈಡರ್​ಮ್ಯಾನ್​ ವೇಷ ಧರಿಸಿದ್ರೆ  ಅಮೆರಿಕ ಯುವಕರು ನಾಟುನಾಟು ಹಾಡಿಗೆ ಹೆಜ್ಜೆ ಹಾಕುತ್ತಾರೆ  ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್  ಪ್ರಥಮ ಮಹಿಳೆ ಜಿಲ್ ಬೈಡನ್  ಬೈಡನ್ ಆಯೋಜಿಸಿದ್ದ ಭೋಜನಕೂಟ  ಔತಣಕೂಟವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿ  ಎರಡೂ ದೇಶಗಳ ಜನರ ಉಪಸ್ಥಿತಿಯಿಂದ ಈ ಔತಣಕೂಟ ವಿಶೇಷ  ನಮ್ಮ ಅತ್ಯಮೂಲ್ಯ ಆಸ್ತಿ  ಕ್ವಾಡ್ ಶೃಂಗಸಭೆಗಾಗಿ ನಾವು ಜಪಾನ್‌ನಲ್ಲಿ ಭೇಟಿ  ಭಾರತ ಅಮೆರಿಕ ಸಂಬಂಧ  ಪ್ರಧಾನಿ ಮೋದಿಗಾಗಿ ಆಯೋಜಿಸಿದ್ದ ಔತಣಕೂಟ  ಔತಣಕೂಟದಲ್ಲಿ ನೂರಾರು ಗಣ್ಯರು ಭಾಗಿ
ಪ್ರಧಾನಿ ಮೋದಿ

ಪ್ರಧಾನಿ ಮೋದಿ ಭಾಷಣ

ವಾಷಿಂಗ್ಟನ್​, ಅಮೆರಿಕ: ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಆಯೋಜಿಸಿದ್ದ ಭೋಜನಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಇದರಲ್ಲಿ ಭಾಗವಹಿಸಲು ಭಾರತ ಮತ್ತು ಅಮೆರಿಕದ ಹಲವು ದಿಗ್ಗಜರು ಸಹ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಔತಣಕೂಟವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.

ಶ್ವೇತಭವನದಲ್ಲಿ ಆಯೋಜಿಸಿದ್ದ ಭೋಜನಕೂಟದ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಇಂದು ಈ ಅದ್ಭುತ ಭೋಜನಕ್ಕೆ ನಾನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಹಾಗೇ ನನ್ನ ಭೇಟಿಯನ್ನು ಯಶಸ್ವಿಗೊಳಿಸಲು ಕಾಳಜಿ ವಹಿಸಿದ್ದಕ್ಕಾಗಿ ನಾನು ಪ್ರಥಮ ಮಹಿಳೆ ಜಿಲ್ ಬೈಡನ್ ಅವರಿಗೆ ಧನ್ಯವಾದ ಹೇಳುತ್ತೇನೆ.

ಇಂದು ಸಂಜೆ ನಮ್ಮ ಎರಡೂ ದೇಶಗಳ ಜನರ ಉಪಸ್ಥಿತಿಯಿಂದ ಈ ಔತಣಕೂಟ ವಿಶೇಷವಾಗಿದೆ. ನಿವೆಲ್ಲರೂ ನಮ್ಮ ಅತ್ಯಮೂಲ್ಯ ಆಸ್ತಿ. ಭಾರತ ಅಮೆರಿಕ ಸಂಬಂಧಗಳ ಬಗ್ಗೆ ನಾನು ಹೆಚ್ಚು ಹೇಳಲು ಬಯಸುವುದಿಲ್ಲ. 2014 ರಲ್ಲಿ ನೀವು ನನಗಾಗಿ ಔತಣಕೂಟವನ್ನು ಏರ್ಪಡಿಸಿದಾಗ, ಕಾಕತಾಳೀಯವಾಗಿ ಅದು ನನ್ನ 9 ದಿನಗಳ ನವರಾತ್ರಿ ಉಪವಾಸವಾಗಿತ್ತು, ಆಗ ನೀವು ಏನನ್ನೂ ತಿನ್ನುವುದಿಲ್ಲವೇ ಎಂದು ನನ್ನನ್ನು ಪದೇ ಪದೇ ಕೇಳುತ್ತಿದ್ದಿರಿ.. ಆಗ ನೀವು ಈ ಬಗ್ಗೆ ತುಂಬಾ ಚಿಂತಿತರಾಗಿದ್ದೀರಿ. ಆ ಸಮಯದಲ್ಲಿ ನನಗೆ ಪ್ರೀತಿಯಿಂದ ಉಣಬಡಿಸಬೇಕೆಂಬ ನಿಮ್ಮ ಆಸೆ ಇಂದು ಈಡೇರುತ್ತಿದೆ ಎಂದು ನಾನು ಭಾವಿಸುತ್ತೇನೆ ಅಂತಾ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸುಮಾರು ಒಂದು ದಶಕದ ಹಿಂದೆ ನೀವು ಉಪಾಧ್ಯಕ್ಷರಾಗಿದ್ದಾಗ ನಾನು ನಿಮ್ಮನ್ನು ಮೊದಲ ಬಾರಿಗೆ ಭೇಟಿಯಾಗಿದ್ದೆ. ಇಂದಿಗೂ ನಾನು ನಿಮ್ಮಲ್ಲಿ ಅದೇ ಬದ್ಧತೆ ಮತ್ತು ಶಿಸ್ತು ಅನ್ನು ನೋಡುತ್ತಿದ್ದೇನೆ. ನೀವು ಮಾತಿನಲ್ಲಿ ಸರಳ.. ಆದರೆ ಕಾರ್ಯದಲ್ಲಿ ಬಲಶಾಲಿ ಎಂದು ಹೊಗಳಿದರು. ನಿಮ್ಮ ಪ್ರಯಾಣಕ್ಕೆ ಡಾ. ಜಿಲ್ ಬೈಡನ್​ ಅವರು ಪ್ರಮುಖ ಕೊಡುಗೆ ನೀಡಿದ್ದಾರೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಅಂತಾ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಆಸ್ಪತ್ರೆ, ಹೋಟೆಲ್, ವಿಶ್ವವಿದ್ಯಾಲಯ, ಸಂಶೋಧನಾ ಸ್ಥಳಗಳು, ಗ್ಯಾಸ್​ ಸ್ಟೇಷನ್​ಗಳು, ಲಾಜಿಸ್ಟಿಕ್​ಗಳು, ಮ್ಯಾನೆಜ್ಮೆಂಟ್​, ಐಟಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಮ್ಮ ಯೋಗದಾನ ನೀಡುತ್ತಿದ್ದೇವೆ. ಅಷ್ಟೇ ಅಲ್ಲ ನಾವು ಶ್ವೇತಭವನಕ್ಕೂ ಪ್ರವೇಶಿಸಿದ್ದೇವೆ. ಹೇಗೆ ಸಮಯ ಕಳೆಯುತ್ತಿದೆ ಅದರಂತೆ ನಮ್ಮ ಜನರು ವಿಶ್ವಾಸ, ಆತ್ಮೀಯತೆ, ಕಷ್ಟಗಳು ಅರ್ಥ ಮಾಡಿಕೊಂಡು ಮುನ್ನುಗ್ಗುತ್ತಿದ್ದಾರೆ. ನಮ್ಮ ದೇಶದಲ್ಲಿ ಮಕ್ಕಳು ಸ್ಪೈಡರ್​ಮ್ಯಾನ್​ ವೇಷ ಧರಿಸುತ್ತಾರೆ. ಇನ್ನು ಅಮೆರಿಕ ಯುವಕರು ನಾಟು ನಾಟು ಹಾಡಿಗೆ ಹೆಜ್ಜೆ ಹಾಕುತ್ತಾರೆ. ಹೀಗೆ ಅಮೆರಿಕ ಮತ್ತು ಭಾರತ ಸಂಬಂಧ ಹೆಚ್ಚು ಗಟ್ಟಿಗೊಳ್ಳುತ್ತಿದೆ ಎಂದು ಹೇಳಿದರು.

ಶ್ವೇತಭವನದಲ್ಲಿ ಅಧಿಕೃತ ಭೋಜನಕೂಟದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಕ್ರಿಕೆಟ್ ಬಗ್ಗೆ ಪ್ರಸ್ತಾಪಿಸಿದರು. ಬೇಸ್‌ಬಾಲ್ ಮೇಲಿನ ಪ್ರೀತಿಯ ನಡುವೆಯೂ ಅಮೆರಿಕದಲ್ಲಿ ಕ್ರಿಕೆಟ್ ಕೂಡ ಜನಪ್ರಿಯವಾಗುತ್ತಿದೆ. ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಯುಎಸ್ ತಂಡವು ತನ್ನ ಅತ್ಯುತ್ತಮ ಪ್ರಯತ್ನದಲ್ಲಿದೆ. ನಾನು ಅವರಿಗೆ ಶುಭ ಹಾರೈಸುತ್ತೇನೆ ಮತ್ತು ಅವರಿಗೆ ಯಶಸ್ಸನ್ನು ಬಯಸುತ್ತೇನೆ ಎಂದು ಹೇಳಿದರು.

ಓದಿ: ಪ್ರಧಾನಿ ಮೋದಿಗಾಗಿ ಆಯೋಜಿಸಿದ್ದ ಭೋಜನಕೂಟದಲ್ಲಿ ಕಾರ್ಪೊರೇಟ್ ನಾಯಕರು ಸೇರಿ 400 ಅತಿಥಿಗಳು ಭಾಗಿ

Last Updated : Jun 23, 2023, 1:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.