ETV Bharat / international

ಡಿಜಿಟಲ್​ ಬಳಕೆಯಲ್ಲಿ ವಿಶ್ವಕ್ಕೇ ಭಾರತ ನಾಯಕ: ಐಎಂಎಫ್​

author img

By

Published : Oct 15, 2022, 9:52 AM IST

ಡಿಜಿಟಲೀಕರಣದಲ್ಲಿ ಭಾರತ ಪ್ರಗತಿ ಸಾಧಿಸಿದೆ. ಸರ್ಕಾರಿ ಸೇವೆಗಳ ಡಿಜಿಟಲೀಕರಣದಲ್ಲೂ ದೇಶ ಮುಂಚೂಣಿಯಲ್ಲಿದೆ ಎಂದು ಐಎಂಎಫ್‌ ಹೇಳಿದೆ.

india-a-leader-in-digitalisation-says-imf-official
ಡಿಜಿಟಲ್​ ಬಳಕೆಯಲ್ಲಿ ವಿಶ್ವಕ್ಕೇ ಭಾರತ ನಾಯಕ

ವಾಷಿಂಗ್ಟನ್: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಡಿಜಿಟಲ್​ ಇಂಡಿಯಾ ಫಲ ನೀಡಿದೆ. ಕಳೆದ 2 ವರ್ಷಗಳಿಂದ ಭಾರತ ಡಿಜಿಲೀಕರಣದಲ್ಲಿ ಮುಂಚೂಣಿಯಲ್ಲಿದೆ. ಇದರ ಬಳಕೆಯಿಂದ ಕೆಲ ಆಡಳಿತಾತ್ಮಕ ಸಮಸ್ಯೆಗಳೂ ಕೂಡ ನಿವಾರಣೆಯಾಗಿವೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ.

ಕೋವಿಡ್​ ಬಳಿಕ ಡಿಜಿಟಲೀಕರಣ ಜಗತ್ತಿನಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಅದರಲ್ಲೂ ಭಾರತದಲ್ಲಿ ಇದರ ಬಳಕೆ ಹೆಚ್ಚಿದೆ. 2 ವರ್ಷಗಳಿಂದ ದೇಶ ಮುಂಚೂಣಿಯಲ್ಲಿದೆ. ಡಿಜಿಟಲ್​ ಸೌಕರ್ಯ ಒದಗಿಸಿರುವುದರಿಂದ ಆಡಳಿದಲ್ಲಿನ ದೋಷಗಳೂ ಮುಕ್ತಿ ಕಂಡಿವೆ ಎಂದು ಐಎಂಎಫ್‌ನ ಏಷ್ಯಾ ಪೆಸಿಫಿಕ್ ವಿಭಾಗದ ಉಪನಿರ್ದೇಶಕ ಅನ್ನೆರ್ ಮೇರಿ ಗುಲ್ಡೆ ವೋಲ್ಫ್ ಹೇಳಿದ್ದಾರೆ.

ಕೋವಿಡ್ ವೇಳೆ, ನಂತರ ಏಷ್ಯಾ ಮತ್ತು ಇತರಡೆಗಳಲ್ಲಿ ಗಮನಾರ್ಹವಾದ ಬದಲಾವಣೆ ಕಂಡುಬಂದಿದೆ. ಡಿಜಿಟಲೀಕರಣವು ಆಯಾ ಸಂಸ್ಥೆಗಳ ಉತ್ಪಾದಕತೆಯನ್ನೂ ಹೆಚ್ಚಿಸಿದೆ ಎಂದು ಪ್ರತಿಕ್ರಿಯಿಸಿದರು. ಡಿಜಿಟಲೀಕರಣದಲ್ಲಿ ಜಾಗತಿಕವಾಗಿ ಭಾರತ 6.1 ಶೇಕಡಾ ಬೆಳವಣಿಗೆಯನ್ನು ಸಾಧಿಸಿದೆ. ಅತಿ ಬೇಡಿಕೆ ಇರುವ ದೇಶಗಳಲ್ಲಿ ಇದು ಮುಂದಿದೆ ಎಂದು ಹೇಳಿದರು.

ಓದಿ: ಅಮೆರಿಕದಲ್ಲಿ ನಿರ್ಮಲಾ ಸೀತಾರಾಮನ್​; ಇಯು ಹಣಕಾಸು ಆಯುಕ್ತರನ್ನ ಭೇಟಿ ಮಾಡಿದ ವಿತ್ತ ಸಚಿವೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.