ETV Bharat / international

boat capsizes: ನದಿಯಲ್ಲಿ ಮುಳುಗಿದ 300 ಜನರಿದ್ದ ದೋಣಿ: ನೂರಾರು ಮದುವೆ ಅತಿಥಿಗಳ ಸಾವು

author img

By

Published : Jun 14, 2023, 7:48 AM IST

Updated : Jun 14, 2023, 9:14 AM IST

ನೈಜೀರಿಯಾದಲ್ಲಿ ಘನಘೋರ ದೋಣಿ ದುರಂತ ಸಂಭವಿಸಿದೆ. ಮದುವೆ ಕಾರ್ಯಕ್ರಮಕ್ಕೆ ಹೊರಟಿದ್ದ 300 ಮದುವೆ ಅತಿಥಿಗಳಿದ್ದ ದೋಣಿ ಮುಳುಗಿದೆ. ಇದರಲ್ಲಿ ನೂರಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ.

ನೈಗರ್​​ ನದಿಯಲ್ಲಿ ಮುಳುಗಿದ ದೋಣಿ
ನೈಗರ್​​ ನದಿಯಲ್ಲಿ ಮುಳುಗಿದ ದೋಣಿ

ಅಬುಜಾ (ನೈಜೀರಿಯಾ): ಮದುವೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ದೋಣಿ ಮಗುಚಿ ಬಿದ್ದು ನೂರಕ್ಕೂ ಅಧಿಕ ಜನರು ಸಾವನ್ನಪ್ಪಿರುವ ದುರ್ಘಟನೆ ನೈಜೀರಿಯಾದ ನೈಗರ್​ ನದಿಯಲ್ಲಿ ಸೋಮವಾರ ನಡೆದಿದೆ. ಬೋಟ್​​ನಲ್ಲಿ 300 ಜನರು ಇದ್ದರು. ಇದರಲ್ಲಿ ಹಲವರು ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ನದಿಯಲ್ಲಿ ದೋಣಿ ಸಾಗುತ್ತಿದ್ದಾಗ ಇದ್ದಕ್ಕಿದ್ದಂತೆ ಅಲ್ಲಿದ್ದ ದೊಡ್ಡ ಮರದ ಕಾಂಡಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಮಗುಚಿ ಬಿದ್ದಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಇದರಲ್ಲಿ 300 ಜನರಿದ್ದರು. ರ್ದುಘಟನೆಯಲ್ಲಿ ನೂರಕ್ಕೂ ಅಧಿಕ ಜನರು ನದಿ ಪಾಲಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಘಟನೆಯ ವಿವರ: ಇಲ್ಲಿನ ಕ್ವಾರಾ ರಾಜ್ಯದ ಪಾಟಿಗಿ ಜಿಲ್ಲೆಯ ಕ್ಪಾಡಾ ಎಂಬಲ್ಲಿ ಈ ದುರಂತ ಸಂಭವಿಸಿದೆ. ಕ್ಪಾಡಾದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಅತಿಯಾದ ಮಳೆ ಸುರಿದ ಕಾರಣ ರಸ್ತೆ ಸಂಪರ್ಕ ಕಡಿತವಾಗಿತ್ತು. ಹೀಗಾಗಿ ಅಲ್ಲಿಗೆ ತಲುಪಲು ಜನರು ವಾಹನಗಳ ಬದಲಾಗಿ, ದೋಣಿಯನ್ನು ಆಯ್ದುಕೊಂಡಿದ್ದಾರೆ. ಎಗ್ಬೋಟಿ ಎಂಬ ಗ್ರಾಮದಿಂದ ದೋಣಿಯಲ್ಲಿ ಸಾಗುತ್ತಿದ್ದಾಗ ಕ್ವಾಡಾ ಸಮೀಪ ನೈಗರ್​ ನದಿ ನೀರಿನಲ್ಲಿ ತೇಲಿಕೊಂಡು ಬಂದ ದೊಡ್ಡ ಮರದ ದಿಂಬಿಗೆ ದೋಣಿ ಡಿಕ್ಕಿಯಾಗಿದೆ.

ಇದರಿಂದ ಅದರಲ್ಲಿದ್ದ 300 ಅಧಿಕ ಜನರು ನದಿಗೆ ಬಿದ್ದಿದ್ದಾರೆ. ದೋಣಿ ಸಂಪೂರ್ಣವಾಗಿ ಮಗುಚಿ ನದಿಯಲ್ಲಿ ತೇಲಿ ಹೋಗಿದೆ. ಇದರಿಂದ ಜನರು ನೀರು ಪಾಲಾಗಿದ್ದಾರೆ. 100 ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ. ಅವರೆಲ್ಲರೂ ಸಾವನ್ನಪ್ಪಿರುವ ಶಂಕೆ ಇದೆ. ಉಳಿದವರು ಹಾಗೋ ಹೀಗೋ ಈಜಿ ದಡ ಸೇರಿದ್ದಾರೆ ಎಂದು ಸ್ಥಳೀಯರು ತಿಳಿಸಿದರು.

"ಕ್ವಾಡಾ ಹಳ್ಳಿಯಲ್ಲಿ ಮದುವೆ ಸಮಾರಂಭವಿತ್ತು. ಮಳೆ ಸುರಿದ ಕಾರಣ ರಸ್ತೆ ಸಂಪರ್ಕ ಇಲ್ಲವಾಗಿತ್ತು. ಆದ್ದರಿಂದ ದ್ವಿಚಕ್ರವಾಹನದೊಂದಿಗೆ ಬಂದವರಿಗೆ ಸವಾರಿ ಮಾಡಲು ಸಾಧ್ಯವಾಗಲಿಲ್ಲ. ಕಾರ್ಯಕ್ರಮ ಮುಗಿದರೂ ಮಳೆ ನಿಲ್ಲದ ಕಾರಣ ಜನರನ್ನು ಸಾಗಿಸಲು ದೋಣಿಯನ್ನು ಬಳಸಲಾಯಿತು. ಆದರೆ, ನೈಗರ್​ ನದಿಯಲ್ಲಿ ದೋಣಿ ಸಾಗುತ್ತಿದ್ದಾಗ ಅವಘಡ ಸಂಭವಿಸಿದೆ. ಪ್ರಾಣ ಪಕ್ಷಿಗಳು ಹಾರಿ ಹೋಗಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ದೋಣಿಯಲ್ಲಿ ಸುಮಾರು 300 ಜನರು ಪ್ರಯಾಣಿಸುತ್ತಿದ್ದರು. ಇದರಲ್ಲಿ ವಿವಿಧ ಸಮುದಾಯಗಳ ಪುರುಷರು ಮತ್ತು ಮಹಿಳೆಯರು ಸೇರಿದ್ದಾರೆ ಎಂದು ಅಬ್ದುಲ್ ಗಣ ಲುಕ್ಪಾಡಾ ತಿಳಿಸಿದ್ದಾರ. ದೋಣಿ ನೀರಿನಲ್ಲಿದ್ದ ಮರದ ದಿಂಬಿಗೆ ಡಿಕ್ಕಿ ಹೊಡೆಯಿತು. ನೀರಿನ ಹರಿವು ಹೆಚ್ಚಿದ್ದ ಕಾರಣ ದೋಣಿ ಮುಳುಗಿತು. ಇದರಲ್ಲಿದ್ದ ಪ್ರಯಾಣಿಕರು ನೀರು ಪಾಲಾದರು. 53 ಮಂದಿ ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳಿದವರು ಪ್ರಾಣ ಕಳೆದುಕೊಂಡಿರಬಹುದು ಎಂದು ಲುಕ್ಪಾಡಾ ಹೇಳಿದ್ದಾರೆ.

ಕ್ವಾರಾದ ಪೊಲೀಸ್ ಕಮಾಂಡ್‌ನ ವಕ್ತಾರ ಅಜಯ್ ಒಕಾಸನ್ಮಿ ಸ್ಥಳಕ್ಕೆ ಆಗಮಿಸಿದ ಪರಿಶೀಲನೆ ನಡೆಸಿದ್ದಾರೆ. ಇದೊಂದು ಘನಘೋರ ದುರಂತವಾಗಿದೆ. ದುರಂತದ ಬಗ್ಗೆ ಮೌಲ್ಯಮಾಪನ ನಡೆಸಲು ತಂಡವನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಕ್ವಾರಾ ರಾಜ್ಯ ಸರ್ಕಾರ ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದೆ. ಬದುಕುಳಿದವರನ್ನು ಹುಡುಕಲು ನಡೆಸಲಾಗುತ್ತಿರುವ ರಕ್ಷಣಾ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಸರ್ಕಾರದ ವಕ್ತಾರ ರಫಿಯು ಅಜಕಾಯೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೇ ತಿಂಗಳಲ್ಲಿ ನೈಜೀರಿಯಾದ ಸೊಕೊಟೊದಲ್ಲಿ ನಡೆದ ದೋಣಿ ದುರಂತದಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದರು.

ಇದನ್ನೂ ಓದಿ: Donald Trump: ಗೌಪ್ಯ ದಾಖಲೆ ಕದ್ದ ಕೇಸಲ್ಲಿ 2ನೇ ಸಲ ಡೊನಾಲ್ಡ್​ ಟ್ರಂಪ್​ ಬಂಧನ, ಬಿಡುಗಡೆ?

Last Updated :Jun 14, 2023, 9:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.