ETV Bharat / international

2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ: ಸ್ಪರ್ಧೆಗೆ ಮೂರನೇ ಭಾರತೀಯ ಅಮೆರಿಕನ್ ರೆಡಿ!​

author img

By

Published : Jul 29, 2023, 4:33 PM IST

ಭಾರತೀಯ ಮೂಲಕದ ಅಮೆರಿಕನ್​ ಏರೋಸ್ಪೆಸ್​ ಇಂಜಿನಿಯರ್​ ಹರೀಶ್​​ ವರ್ದನ್​ ಸಿಂಗ್​ ಕೂಡಾ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

Hirsh Vardhan Singh The third Indian American in the 2024 US presidential election
Hirsh Vardhan Singh The third Indian American in the 2024 US presidential election

ವಾಷಿಂಗ್ಟನ್​: 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ರೇಸ್​ನಲ್ಲಿ ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಮತ್ತು ಉದ್ಯಮಿ ವಿವೇಕ್​ ರಾಮಸ್ವಾಮಿ ಇರುವುದಾಗಿ ಘೋಷಣೆ ಮಾಡಿದ್ದಾರೆ. ಇದೀಗ ಮತ್ತೊಬ್ಬ ಭಾರತೀಯ ಮೂಲಕದ ಅಮೆರಿಕನ್​ ಆಗಿರುವ ಏರೋಸ್ಪೆಸ್​ ಇಂಜಿನಿಯರ್​ ಹರೀಶ್​​ ವರ್ದನ್​ ಸಿಂಗ್​ ಕೂಡ ಸೇರ್ಪಡೆಗೊಂಡಿದ್ದಾರೆ.

38 ವರ್ಷದ ಸಿಂಗ್​ ತಮ್ಮನ್ನು ರಿಪಬ್ಲಿಕಬ್​ ಎಂದು ಪರಿಚಯಿಸಿಕೊಂಡಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಅವರು, ತಮ್ಮನ್ನು ತಾವು ಅಮೆರಿಕ ಮೊದಲ ಸಾಂವಿಧಾನಿಕ ಕ್ಯಾರಿ ಮತ್ತು 2017 ರಲ್ಲಿ ನ್ಯೂಜೆರ್ಸಿಯ ರಿಪಬ್ಲಿಕನ್ ಪಕ್ಷದ ಸಂಪ್ರದಾಯವಾದಿ ವಿಂಗ್ ಅನ್ನು ಪುನಃಸ್ಥಾಪಿಸಲು ಸಹಾಯ ಮಾಡಿದ ಸಂಪ್ರದಾಯವಾದಿ ಪರವಾದ ಇರುವ ಸ್ಪರ್ಧಿ ಎಂದು ಪರಿಚಯಿಸಿಕೊಂಡಿದ್ದಾರೆ.

2020ರಲ್ಲಿ ಅಮೆರಿಕದ ಸೆನೆಟ್​ ಪ್ರವೇಶಿಸುವಲ್ಲಿ ಇವರು ಯಶಸ್ಸು ಕಾಣಲಿಲ್ಲ. ಸದ್ಯ ಈ ಬಾರಿಯ ರೇಸ್​​ನಲ್ಲಿ ಅವರಿದ್ದಾರೆ. ಸಿಂಗ್​ ಪ್ರಕಾರ, ದೊಡ್ಡ ಟೆಕ್​ ಮತ್ತು ಫಾರ್ಮಾ ಎರಡರಲ್ಲೂ ಭ್ರಷ್ಟಚಾರದ ವಾಸನೆ ಇದೆ . ಜೊತೆಗೆ ಅಮೆರಿಕನ್​ ಕುಟುಂಬದ ಮೌಲ್ಯ, ಪೋಷಕರ ಹಕ್ಕು ಮತ್ತು ಮುಕ್ತ ಚರ್ಚೆ ಮೇಲೆ ಆಕ್ರಮಣಕಾರಿ ಪರಿಣಾಮ ಎದುರಿಸುತ್ತಿದೆ. ಅಮೆರಿಕದ ಮೌಲ್ಯಗಳನ್ನು ಪುನರ್​ಸ್ಥಾಪಿಸುವ ಬಲವಾದ ನಾಯಕತ್ವ ನಮಗೆ ಬೇಕಿದೆ. ಇದೇ ಕಾರಣಕ್ಕೆ ನಾನು 2024 ಚುನಾವಣೆಗೆ ರಿಪಬ್ಲಿಕನ್​ ಪಾರ್ಟಿಯಿಂದ ನಾಮಪತ್ರ ಸಲ್ಲಿಕೆಗೆ ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಇನ್ನು ಇದೆ ವೇಳೆ, ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಅವರನ್ನು ಶ್ಲಾಘಿಸಿರುವ ಅವರು, ರಿಪಬ್ಲಿಕನ್​ ಅಭ್ಯರ್ಥಿ ಡೋನಾಲ್ಡ್​ ಟ್ರಂಪ್​ ನನ್ನ ಜೀವನದಲ್ಲಿನ ಅದ್ಬುತ ಅಧ್ಯಕ್ಷ. ಅಂತಹವರು ಅಮೆರಿಕಕ್ಕೆ ಹೆಚ್ಚಾಗಿ ಬೇಕಾಗಿದ್ದಾರೆ ಎಂದು ಸಿಂಗ್​ ತಿಳಿಸಿದ್ದಾರೆ.

ಹಿಂದಿನ ಯುಗದ ರಾಜಕಾರಣಿಗಳನ್ನು ತೆರೆಯಿಂದ ಸರಿಸಲು ಇದು ಒಳ್ಳೆಯ ಸಮಯ ಎಂದಿರುವ ಅವರು ತಮ್ಮನ್ನು ತಾವು ಕೇವಲ ಶುದ್ದ ರಕ್ತದ ಅಭ್ಯರ್ಥಿ ಎಂದು ಬಿಂಬಿಸಿ ಕೊಂಡಿದ್ದಾರೆ. ಇನ್ನು ಅಮೆರಿಕ ಅಧ್ಯಕ್ಷರ ಚುನಾವಣೆ ರೇಸ್​ನಲ್ಲಿ ಟ್ರಂಪ್, ನ್ಯೂಜೆರ್ಸಿಯ ಮಾಜಿ ಗವರ್ನರ್ ಕ್ರಿಸ್ ಕ್ರಿಸ್ಟಿ, ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್, ಮಾಜಿ ಉಪಾಧ್ಯಕ್ಷ ಮೈಕ್ ಪೆನ್ಸ್, ರಾಮಸ್ವಾಮಿ, ಹ್ಯಾಲಿ, ಸೆನೆಟರ್ ಟಿಮ್ ಸ್ಕಾಟ್ ಮತ್ತು ಉದ್ಯಮಿ ಮತ್ತು ಪಾದ್ರಿ ರಯಾನ್ ಬಿಂಕ್ಲೆ ಇದ್ದಾರೆ. ಇವರೆಲ್ಲ ಪ್ರಾಥಮಿಕ ಹಂತ ಚುನಾವಣೆಗಳಲ್ಲಿ ಗೆಲುವು ಸಾಧಿಸಿ, ರಿಪಬ್ಲಿಕನ್​ ಪಾರ್ಟಿಯ ಅಭ್ಯರ್ಥಿ ಆಗಬೇಕಾಗುತ್ತದೆ. ಆ ಬಳಿಕ ಅಂತಿಮ ಹಣಾಹಣಿ ಡೆಮಾಕ್ರಟಿಕ್​ ಪಕ್ಷದೊಂದಿಗೆ ನಡೆಯಬೇಕಾಗುತ್ತದೆ.

ಇತ್ತೀಚಿನ ಮಾರ್ನಿಂಗ್ ಕಂನ್ಸಲ್ಟ್​ ಸಮೀಕ್ಷೆ ಪ್ರಕಾರ, ಶೇ 59ರಷ್ಟು ಮಂದಿ ಟ್ರಂಪ್​ಗೆ ಬೆಂಬಲಿಸಿದ್ದಾರೆ. ಇನ್ನು ಶೇ 16ರಷ್ಟು ಜನರು ಡೆಸಾಂಟಿಸ್​ಗೆ, ಶೇ 8ರಷ್ಟು ಮಂದಿ ರಾಮಸ್ವಾಮಿಗೆ, ಶೇ 6ರಷ್ಟು ಮಂದಿ ಪೆನ್ಸ್​​ ಮತ್ತು 2ರಷ್ಟು ಮಂದು ಸ್ಕಾಟ್​​ಗೆ ಬೆಂಬಲಿಸಿದ್ದಾರೆ.

ಭಾರತದಿಂದ ಅಮೆರಿಕಕ್ಕೆ ವಲಸೆ ಬಂದ ಸಿಂಗ್​ ಪೋಷಕರು ಇಲ್ಲಿಯೇ ನೆಲೆನಿಂತಿದ್ದಾರೆ. ಸಿಂಗ್​ 2009ರಲ್ಲಿ ನ್ಯೂ ಜೆರ್ಸಿ ಇನ್ಸುಟಿಟ್ಯೂಟ್​ ಆಫ್​ ಟೆಕ್ನಾಲಾಜಿಯಲ್ಲಿ ಇಂಜಿನಿಯರಿಂಗ್​ ಪದವಿ ಪಡೆದಿದ್ದಾರೆ. 2017ರಲ್ಲಿ ನ್ಯೂ ಜೆರ್ಸಿಯಿಂದ ಗವರ್ನರ್​ ಅಭ್ಯರ್ಥಿಯಾಗುವ ಮೂಲಕ ರಾಜಕೀಯ ಪ್ರವೇಶಿಸಿದರು. ಅವರು ಈಗಾಗಲೇ ರೇಸ್​ನ ಮೂರನೇ ಎರಡು ಓಟವನ್ನು ಮುಗಿಸಿದ್ದು, 9.8ರಷ್ಟು ಮತ ಹಂಚಿಕೆ ಪಡೆದಿದ್ದಾರೆ. 2003ರಲ್ಲಿ ಏವಿಯೇಷನ್​ ರಾಯಭಾರಿಯಾಗಿ ಪ್ರಶಸ್ತಿಯನ್ನು ಇವರು ಮುಡಿಗೇರಿಸಿಕೊಂಡಿದ್ದಾರೆ.

ಇದನ್ನೂ ಓದಿ: Cargo Ship: 3 ಸಾವಿರ ಕಾರುಗಳನ್ನು ಹೊತ್ತು ಸಾಗುತ್ತಿದ್ದ ಹಡಗು ಬೆಂಕಿಗಾಹುತಿ! ಓರ್ವ ಭಾರತೀಯ ಪ್ರಜೆ ಸಾವು- ಫೋಟೋಗಳು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.