ETV Bharat / international

ಆ್ಯನಿ ಫ್ರಾಂಕ್​ರ ಡೈರಿಗೆ 75 ನೇ ವಾರ್ಷಿಕೋತ್ಸವ: ಗೌರವ ಸೂಚಿಸಿದ ಗೂಗಲ್​ ಡೂಡಲ್​

author img

By

Published : Jun 25, 2022, 11:57 AM IST

ಜೂನ್ 25 ರಂದು ಗೂಗಲ್ ಡೂಡಲ್ ಆ್ಯನಿ ಫ್ರಾಂಕ್ ಅವರ ಡೈರಿಯ 75 ನೇ ವಾರ್ಷಿಕೋತ್ಸವ ಗುರುತಿಸಿ ಗೌರವ ಸಲ್ಲಿಸಿದೆ.

Google Doodle tribute to Anne Frank, Diary of a Young Girl news, 75th anniversary of the publication of Anne Frank diary, Anne Frank diary news, ಆನ್ ಫ್ರಾಂಕ್‌ಗೆ ಗೂಗಲ್ ಡೂಡಲ್ ಗೌರವ, ಯಂಗ್ ಗರ್ಲ್ ಡೈರಿ ಸುದ್ದಿ, ಆನ್ ಫ್ರಾಂಕ್ ಡೈರಿಯ 75 ನೇ ವಾರ್ಷಿಕೋತ್ಸವ, ಆನ್ ಫ್ರಾಂಕ್ ಡೈರಿ ಸುದ್ದಿ,
ಕೃಪೆ: Google

2ನೇ ಮಹಾಯುದ್ಧದ ಸಮಯದಲ್ಲಿ ಹಾಲೆಂಡ್‌ನಲ್ಲಿ ಯಹೂದಿ ಹದಿಹರೆಯದವಳಾಗಿದ್ದ ಆ್ಯನಿ ಫ್ರಾಂಕ್‌ನ ಜೀವನವನ್ನು ಚಿತ್ರಿಸುವ ರೇಖಾಚಿತ್ರಗಳನ್ನು ಒಳಗೊಂಡಿರುವ ಸ್ಲೈಡ್‌ಶೋ ಅನ್ನು ಗೂಗಲ್ ಹೊರ ತರುವ ಮೂಲಕ ಗೌರವ ಸೂಚಿಸಿದೆ. ​

ಆ್ಯನಿ ಫ್ರಾಂಕ್, ಉದ್ಯಮಿ ಒಟ್ಟೊ ಫ್ರಾಂಕ್ ಮತ್ತು ಅವರ ಪತ್ನಿ ಎಡಿತ್ ಫ್ರಾಂಕ್ ಅವರ ಮಗಳು. 10 ನೇ ವಯಸ್ಸಿನಲ್ಲಿ ನೆದರ್ಲ್ಯಾಂಡ್​ ಅನ್ನು ಜರ್ಮನಿ ಆಕ್ರಮಿಸಿತು. ಅಲ್ಲಿ ವಾಸಿಸುವ ಯಹೂದಿಗಳು ತಮ್ಮ ಪ್ರಾಣದ ಭಯ ಎದುರಿಸಲು ಪ್ರಾರಂಭಿಸಿದರು. ಈ ವೇಳೆ, ಅನೇಕರು ಓಡಿ ಹೋದರು ಅಥವಾ ತಲೆಮರೆಸಿಕೊಂಡರು.

ಫ್ರಾಂಕ್ ಕುಟುಂಬವು 1942 ರಲ್ಲಿ ಒಟ್ಟೊ ಫ್ರಾಂಕ್ ಅವರ ಕಚೇರಿ ಕಟ್ಟಡದಲ್ಲಿರುವ ರಹಸ್ಯ ಅನೆಕ್ಸ್‌ನಲ್ಲಿ ತಲೆಮರೆಸಿಕೊಂಡಿತು. ಅವರು ಜೊತೆ ವ್ಯಾನ್ ಪೆಲ್ಸ್ ಮತ್ತು ಫ್ರಿಟ್ಜ್ ಫೀಫರ್ ಎಂಬ ದಂತವೈದ್ಯರೊಂದಿಗೆ ತಮ್ಮ ಸ್ಥಳ ಹಂಚಿಕೊಂಡರು. ಸುಮಾರು 25 ತಿಂಗಳ ಕಾಲ ಕಳೆದರು. ಈ 25 ತಿಂಗಳು ಕಳೆದ ದಿನಗಳನ್ನು ಆ್ಯನಿ ಫ್ರಾಂಕ್‌ ತನ್ನ ಡೈರಿಯಲ್ಲಿ ಉಲ್ಲೇಖಿಸಿದ್ದಾರೆ.

ಓದಿ: ಟೆಫಾನಿಯಾ 140ನೇ ಹುಟ್ಟುಹಬ್ಬಕ್ಕೆ ಗೂಗಲ್‌ ಡೂಡಲ್‌ ಗೌರವ

ಆ್ಯನಿ ಫ್ರಾಂಕ್​ ದಿನಚರಿಯಲ್ಲಿ ಅವಳ ತಂದೆಯಿಂದ ಹುಟ್ಟುಹಬ್ಬದ ಉಡುಗೊರೆ, ಅವರ ಒಡನಾಡಿ, ಅವಳು ತನ್ನ ಜೀವನದ ಪ್ರತಿಯೊಂದು ಸಣ್ಣ ವಿವರಗಳನ್ನು, ಅವಳ ಹದಿಹರೆಯದ ಕನಸುಗಳು ಮತ್ತು ಭಯಗಳನ್ನು ಎಳೆ - ಎಳೆಯಾಗಿ ಬರೆದರು.

1944 ರಲ್ಲಿ, ರಹಸ್ಯ ಅನೆಕ್ಸ್​ನ ನಿವಾಸಿಗಳನ್ನು ನಾಜಿಗಳು ಕಂಡು ಹಿಡಿದು, ಬಂಧನಕ್ಕೆ ಕಳುಹಿಸಿದರು. ಅಲ್ಲಿಂದ, ಅವರನ್ನು ಪೋಲೆಂಡ್‌ನ ಆಶ್ವಿಟ್ಜ್ ಕಾನ್ಸಂಟ್ರೇಷನ್ ಕ್ಯಾಂಪ್‌ಗೆ ಗಡಿಪಾರು ಮಾಡಲಾಯಿತು. ಯಹೂದಿ ಜನರ ಸಾಮೂಹಿಕ ಹತ್ಯೆಗಾಗಿ ನಾಜಿಗಳು ರಚಿಸಿದ ಅತಿದೊಡ್ಡ ಸೌಲಭ್ಯ ಇದಾಗಿತ್ತು.

ಕುಟುಂಬವು ಬೇರ್ಪಟ್ಟಿತು. ಆ್ಯನಿ ಮತ್ತು ಆಕೆಯ ಸಹೋದರಿ ಮಾರ್ಗೊಟ್​ ಫ್ರಾಂಕ್ ಅವರನ್ನು ಜರ್ಮನಿಯ ಬರ್ಗೆನ್-ಬೆಲ್ಸನ್ ಶಿಬಿರಕ್ಕೆ ಸಾಗಿಸಲಾಯಿತು. ಬಳಿಕ ಈ ಸಹೋದರಿಯರು ಟೈಫಸ್ ಜ್ವರದಿಂದ ಸಾವನ್ನಪ್ಪಿದ್ದಾರೆ ಎಂದು ನಂಬಲಾಗಿದೆ. ಅವರ ತಾಯಿ ಎಡಿತ್ ಹಸಿವಿನಿಂದ ಆಶ್ವಿಟ್ಜ್‌ನಲ್ಲಿ ಸಾವನ್ನಪ್ಪಿದರು ಎಂದು ತಿಳಿದು ಬಂದಿದೆ.

ಒಟ್ಟೊ ಫ್ರಾಂಕ್ ಮಾತ್ರ ಯುದ್ಧದಿಂದ ಬದುಕುಳಿದರು. ನಾಜಿಗಳು ಕಚೇರಿ ಕಟ್ಟಡದ ಮೇಲೆ ದಾಳಿ ಮಾಡಿದಾಗ ಅವರ ಉದ್ಯೋಗಿಯಾದ ಮಿಪ್ ಗೀಸ್ ಆ್ಯನಿ ಬರೆದಿರುವ ಡೈರಿಯ ಹಸ್ತಪ್ರತಿಗಳನ್ನು ಹಿಂಪಡೆಯುವಲ್ಲಿ ಯಶಸ್ವಿಯಾದರು.

ಅವರು ಅವುಗಳನ್ನು ಒಟ್ಟೊ ಫ್ರಾಂಕ್‌ಗೆ ಹಸ್ತಾಂತರಿಸಿದರು. ಅವರು ಅದನ್ನು 1947 ರಲ್ಲಿ ಡಚ್‌ನಲ್ಲಿ ಪ್ರಕಟಿಸಿದರು. ಇಂಗ್ಲಿಷ್ ಆವೃತ್ತಿಯನ್ನು 1952 ರಲ್ಲಿ ಪ್ರಕಟಿಸಲಾಯಿತು. ‘ಡೈರಿ ಆಫ್ ಎ ಯಂಗ್ ಗರ್ಲ್’ ಎಂದು ಇದಕ್ಕೆ ಹೆಸರಿಡಲಾಯಿತು. ಇದು ಇದುವರೆಗೆ ಅತ್ಯಂತ ಹೆಚ್ಚು ಓದಲ್ಪಟ್ಟ ನಾನ್ - ಫಿಕ್ಷನ್ ಪುಸ್ತಕಗಳಲ್ಲಿ ಒಂದಾಗಿದೆ.

ಧನ್ಯವಾದಗಳು ಆ್ಯನಿ.. ನಿಮ್ಮ ಅನುಭವ ಮತ್ತು ನಮ್ಮ ಸಾಮೂಹಿಕ ಭೂತಕಾಲಕ್ಕೆ ವಿಮರ್ಶಾತ್ಮಕ ವಿಂಡೋವನ್ನು ಹಂಚಿಕೊಂಡಿದ್ದಕ್ಕಾಗಿ. ಆದರೆ ನಮ್ಮ ಭವಿಷ್ಯದ ಬಗ್ಗೆ ಅಚಲವಾದ ಭರವಸೆಯೂ ಇದೆ ಎಂದು ಗೂಗಲ್ ತನ್ನ ಡೂಡಲ್ ಜೊತೆಗಿನ ಟಿಪ್ಪಣಿಯಲ್ಲಿ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.