ETV Bharat / international

ಚೀನಾದ ಮಾಜಿ ಪ್ರಧಾನಿ ಲಿ ಕೆಕಿಯಾಂಗ್​ ಹೃದಯಾಘಾತದಿಂದ ನಿಧನ

author img

By ETV Bharat Karnataka Team

Published : Oct 27, 2023, 9:02 AM IST

ಹೆಸರಾಂತ ಅರ್ಥಶಾಸ್ತ್ರಜ್ಞ ಚೀನಾದ ಲಿ ಕೆಕಿಯಾಂಗ್​ ಅವರ ನಾಯಕತ್ವದ ಒಂದು ದಶಕದಲ್ಲಿ ಚೀನಾದ ಆರ್ಥಿಕತೆಯ ಬೆಳವಣಿಗೆ ದ್ವಿಗುಣಗೊಂಡಿತ್ತು.

Former Chinese PM Li Keqiang died of heart attack
ಚೀನಾದ ಮಾಜಿ ಪ್ರಧಾನಿ ಲಿ ಕೆಕಿಯಾಂಗ್​ ಹೃದಯಾಘಾತದಿಂದ ನಿಧನ

ಬೀಜಿಂಗ್( ಚೀನಾ): ಒಂದು ದಶಕದಿಂದ ಚೀನಾದ ಉನ್ನತ ಆರ್ಥಿಕ ಅಧಿಕಾರಿಯಾಗಿದ್ದ ಚೀನಾದ ಮಾಜಿ ಪ್ರಧಾನಿ ಲಿ ಕೆಕಿಯಾಂಗ್​ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಗುರುವಾರ ರಾತ್ರಿ ಹೃದಯಾಘಾತಕ್ಕೊಳಗಾದ ಅವರು ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದರು ಎಂದು ಸ್ಥಳೀಯ ಮಾಧ್ಯಮಗಳ ವರದಿ ಮಾಡಿವೆ.

2013 ರಿಂದ 10 ವರ್ಷಗಳ ಕಾಲ ಚೀನಾದ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಲಿ ಕೆಕಿಯಾಂಗ್​, ಈ ವರ್ಷದ ಮಾರ್ಚ್​ನಲ್ಲಿ ಲಿ ಕೆಕಿಯಾಂಗ್​ ಕಾರ್ಯಭಾರದಿಂದ ಕೆಳಗಿಳಿದಿದ್ದರು. ಲಿ ಕೆಕಿಯಾಂಗ್​ ಅವರ ನಾಯಕತ್ವದ ಒಂದು ದಶಕದಲ್ಲಿ ಚೀನಾದ ಆರ್ಥಿಕತೆಯ ಬೆಳವಣಿಗೆ ದ್ವಿಗುಣಗೊಂಡಿತ್ತು. ಇತ್ತೀಚೆಗೆ ಲಿ ಕೆಕಿಯಾಂಗ್​ ಶಾಂಘೈನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. 2013 ರಿಂದ 23ರವೆರೆಗೆ ಚೀನಾದ ನಂ.2ನೇ ನಾಯಕರಾಗಿದ್ದರು. ಜೊತೆಗೆ ಖಾಸಗಿ ಸಂಸ್ಥೆಗೆ ವಕೀಲನಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಚೀನಾದ ಮಾಜಿ ಪ್ರೀಮಿಯರ್ ಲಿ ಕೆಕಿಯಾಂಗ್ ಅವರು ಇಂಗ್ಲಿಷ್ ಮಾತನಾಡುವ ಅರ್ಥಶಾಸ್ತ್ರಜ್ಞರಾಗಿದ್ದರು.

ಸುಧಾರಣಾವಾದಿ ಎಂದು ಕರೆಯಲ್ಪಡುವ ಲಿ ಕೆಕಿಯಾಂಗ್​ ಅವರು ತಮ್ಮ ದೇಸದ ಹಿಂದುಳಿದವರಿಗಾಗಿ ಮಾಡಿದ ಕೆಲಸಗಳಿಗಾಗಿ ಅವರು ಪ್ರಸಿದ್ಧರಾಗಿದ್ದಾರೆ. ಹೆನಾನ್​ ಪ್ರಾಂತ್ಯದ ಗವರ್ನರ್​ ಆಗಿದ್ದ ಅವಧಿಯಲ್ಲಿ ಸಾರ್ವಜನಿಕ ವಲಯದ ಉದ್ಯಮಗಳಲ್ಲಿನ ಅವರ ಸುಧಾರಣೆಗಳು ಅವರಿಗೆ ಇನ್ನಷ್ಟು ಜನಪ್ರಿಯತೆಯನ್ನು ತಂದು ಕೊಟ್ಟಿತು. ಪಕ್ಷದ ನಾಯಕನ ಮಗನಾಗಿ ಹುಟ್ಟಿದರೂ, ಅ ಪ್ರಭಾವವನ್ನು ಬಳಸಿಕೊಂಡು ಪಕ್ಷದಲ್ಲಿ ಮುಂದುವರಿಯಲು ಕೆಕಿಯಾಂಗ್​ ಸಿದ್ಧರಿರಲಿಲ್ಲ.

ಕಾನೂನು ಪದವಿ ಹಾಗೂ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್​ ಪಡೆದಿರುವ ಲಿ ಕೆಕಿಯಾಂಗ್​ ಅವರು ಮಾವೋ ಝೆಡಾಂಗ್​ ಚಿಂತನೆಯ ಅಧ್ಯಯನದಲ್ಲಿ ಪೀಕಿಂಗ್​ ವಿಶ್ವವಿದ್ಯಾಲಯದಲ್ಲಿ ಉತ್ತಮ ಸಾಧನೆ ಮಾಡಿದ್ದರು. ಅಲ್ಲಿ ಕಮ್ಯುನಿಸ್ಟ್​ ಯೂತ್​ ಲೀಗ್​ ಕಾರ್ಯದರ್ಶಿಯಾಗಿದ್ದರು. ಚೀನಾದ ಮಾಜಿ ಅಧ್ಯಕ್ಷ ಹು ಜಿಂಟಾವೊ ಅವರೊಂದಿಗೆ ಯೂತ್​ ಲೀಗ್​ನಲ್ಲಿ ಕೆಲಸ ಮಾಡುವ ಮೂಲಕ ಹಲವು ಬೆಳವಣಿಗೆಗಳಿಗೆ ನೆರವಾದರು. ಸುಧಾರಣಾವಾದಿ ಹಣಕಾಸುದಾರರೊಂದಿಗೆ ಒಡನಾಟ ಬೆಳೆಸಿಕೊಂಡು ತಮ್ಮ ಅಧ್ಯಯನವನ್ನು ಮಾಡಿದ್ದರು.

ಪೀಕಿಂಗ್​ ವಿಶ್ವವಿದ್ಯಾಲಯದ ವಿದ್ಯಾವಂತ ಅರ್ಥಶಾಸ್ತ್ರಜ್ಞ ಎನಿಸಿಕೊಂಡಿರುವ ಲಿ ಕೆಕಿಯಾಮಗ್​ ಆಗಿನ ಕಮ್ಯುನಿಸ್ಟ್​ ಪಕ್ಷದ ನಾಯಕ ಹು ಜಿಂಟಾವೊ ಅವರ ಉತ್ತರಾಧಿಕಾರಿಯಾಗಲು ಸ್ಪರ್ಧಿ ಎಂದು ಪರಿಗಣಿಸಲ್ಪಟ್ಟಿದ್ದರು. ಅನೌಪಚಾರಿಕ ನಿವೃತ್ತಿ ವಯಸ್ಸು 70ಕ್ಕಿಂತ ಲಿ ಕೆಕಿಯಾಂಗ್​ ಅವರಿಗೆ ಎರಡು ವರ್ಷ ಕಡಿಮೆ ಇದ್ದರೂ, 2022ರ ಅಕ್ಟೋಬರ್​ನಲ್ಲಿ ನಡೆದ ಪಕ್ಷ ಮೀಟಿಂಗ್​ನಲ್ಲಿ ಲಿ ಅವರಲ್ಲಿ ಸ್ಥಾಯಿ ಸಮಿತಿಯಿಂದ ಕೈ ಬಿಡಲಾಗಿತ್ತು.

ಇದನ್ನೂ ಓದಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ, ಸ್ಪಿನ್ ದಂತಕಥೆ ಬಿಷನ್ ಸಿಂಗ್ ಬೇಡಿ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.