ETV Bharat / international

ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್ ಪರೀಕ್ಷಾರ್ಥ ಹಾರಾಟಕ್ಕೆ ಎಫ್​ಎಎ ಅಸ್ತು: ಸೋಮವಾರ ಉಡಾವಣೆ?

author img

By

Published : Apr 15, 2023, 6:56 AM IST

ವಿಶ್ವದ ದೈತ್ಯ ನೌಕೆಯಾದ ಸ್ಪೇಸ್​ಎಕ್ಸ್​ನ ಸ್ಟಾರ್​ಶಿಪ್​ ಮುಂದಿನ ವಾರ ಉಡಾವಣೆಯಾಗಲಿದೆ. ಇದರ ಕಾರ್ಯಾಚರಣೆಗೆ ಅಮೆರಿಕ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಅನುಮತಿ ನೀಡಿದೆ.

ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್ ಪರೀಕ್ಷಾರ್ಥ ಹಾರಾಟ
ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್ ಪರೀಕ್ಷಾರ್ಥ ಹಾರಾಟ

ಫ್ಲೋರಿಡಾ(ಅಮೆರಿಕ): ಚಂದ್ರ ಮತ್ತು ಮಂಗಳ ಗ್ರಹಕ್ಕೆ ಗಗನಯಾನಿಗಳನ್ನು ಕರೆದೊಯ್ಯುವ ಸ್ಪೇಸ್​ಎಕ್ಸ್​ನ ಸ್ಟಾರ್​ಶಿಪ್​ ಗಗನಯಾನ ನೌಕೆ ಉಡಾವಣೆಗೆ ಅಮೆರಿಕ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಅನುಮತಿ ನೀಡಿದೆ. ಇದರಿಂದ ನೌಕೆ ಮುಂದಿನ ವಾರ ಮೊದಲ ಪರೀಕ್ಷಾರ್ಥ ಹಾರಾಟ ನಡೆಸಲಿದೆ.

ಸ್ಟಾರ್​ಶಿಪ್​ ನೌಕೆ ಹಾರಾಟಕ್ಕೆ ಇದ್ದ ತಾಂತ್ರಿಕ ಅಡಚಣೆಗಳು ನಿವಾರಣೆಯಾಗಿದ್ದು, ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್​ನಿಂದ ಶುಕ್ರವಾರ ಬಹುನಿರೀಕ್ಷಿತ ಪರವಾನಗಿ ನೀಡಿದೆ. ವಿಶ್ವದ ಅತಿ ದೊಡ್ಡ ಮತ್ತು ಶಕ್ತಿಶಾಲಿ ರಾಕೆಟ್ ಸ್ಟಾರ್‌ಶಿಪ್ ಸೋಮವಾರ ಹಾರಾಟ ನಡೆಸಲಿದೆ ಎಂದು ಸ್ಪೇಸ್‌ಎಕ್ಸ್ ಸಂಸ್ಥೆ ಹೇಳಿದೆ.

394 ಅಡಿ ಎತ್ತರದ ರಾಕೆಟ್‌ ಅನ್ನು ಮೊದಲ ಹಂತದಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಗುವುದು. ಇದರಲ್ಲಿ ಯಾವುದೇ ಜನರು ಅಥವಾ ಉಪಗ್ರಹಗಳು ಇರುವುದಿಲ್ಲ. ಸ್ಪೇಸ್‌ಎಕ್ಸ್ ಬಾಹ್ಯಾಕಾಶ ನೌಕೆಯನ್ನು ಟೆಕ್ಸಾಸ್‌ನ ದಕ್ಷಿಣ ತುದಿಯಿಂದ ಹವಾಯಿಯವರೆಗೆ ಹಾರಾಟ ನಡೆಸಿಸ, ಗಲ್ಫ್ ಆಫ್ ಮೆಕ್ಸಿಕೊ ಮಾರ್ಗವಾಗಿ ಪೆಸಿಫಿಕ್‌ ಸಾಗರದಲ್ಲಿ ಅದನ್ನು ಬೀಳಿಸಲಾಗುವುದು. ಈ ಚೊಚ್ಚಲ ಪ್ರಯತ್ನದಲ್ಲಿ ಅದನ್ನು ಮರಳಿ ಭೂಮಿಯ ಇಳಿಸುವ ಯಾವುದೇ ಪ್ರಯತ್ನ ಮಾಡಲಾಗುವುದಿಲ್ಲ ಎಂದು ಸ್ಪೇಸ್​​ಎಕ್ಸ್​ ಸಂಸ್ಥೆ ತಿಳಿಸಿದೆ.

ಇದು ಪೂರ್ಣ ಗಾತ್ರದ ಸ್ಟಾರ್‌ಶಿಪ್‌ನ ಮೊದಲ ಉಡಾವಣಾ ಪ್ರಯತ್ನವಾಗಿದೆ. ಇದನ್ನು ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಲ್ಪಟ್ಟಿದೆ. ಮೀಥೇನ್ ಇಂಧನದ ಸಹಾಯದಿಂದ ಇದರ ಎಂಜಿನ್‌ಗಳು ಚಾಲನೆಯಾಗಲಿವೆ. ಸುರಕ್ಷತೆ ಮತ್ತು ಪರಿಸರದ ದೃಷ್ಟಿಯಿಂದ ಎಲ್ಲ ಅವಶ್ಯಕ ಕ್ರಮಗಳನ್ನು ಸ್ಪೇಸ್​ಎಕ್ಸ್​ ಕೈಗೊಂಡಿದೆ ಎಂದು ಎಫ್​ಎಎ ತಿಳಿಸಿದೆ. ಪರವಾನಗಿ ಐದು ವರ್ಷಗಳಿಗೆ ಮಾತ್ರ ಮಾನ್ಯವಾಗಿರುತ್ತದೆ. ಯೋಜನೆಯನ್ನು ಪ್ರತಿಯೊಂದು ಹಂತದಲ್ಲೂ ಸಾರ್ವಜನಿಕ ಹಿತದೃಷ್ಟಿಯಿಂದ ನಿಗಾ ವಹಿಸಲಾಗಿದೆ. ಅಪಾಯಗಳನ್ನು ತಗ್ಗಿಸಲು ಸ್ಪೇಸ್‌ಎಕ್ಸ್‌ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಫ್​​ಎಎ ಸಲಹೆ ನೀಡಿದೆ.

ಸ್ಟಾರ್​ಶಿಪ್​ನ ವಿಶೇಷತೆಗಳು: ಸೂಪರ್ ಹೆವಿ ಎಂದು ಕರೆಯಲಾಗುವ ದೈತ್ಯ ನೌಕೆ ಇದಾಗಿದ್ದು, ಮೊದಲ ಹಂತದಲ್ಲಿ 50 ಮೀಟರ್ ಮೇಲಿನ ಹಂತದ ಬಾಹ್ಯಾಕಾಶ ನೌಕೆಯನ್ನು ಒಳಗೊಂಡಿದೆ. ಸ್ಟೇನ್‌ಲೆಸ್ ಸ್ಟೀಲ್ ಬಳಸಿ ನೌಕೆಯನ್ನು ಸಿದ್ಧಪಡಿಸಲಾಗಿದೆ. ಅಷ್ಟೇ ಕ್ಷಿಪ್ರವಾಗಿ ಮರುಬಳಕೆ ಮಾಡುವಂತೆಯೂ ವಿನ್ಯಾಸಗೊಳಿಸಲಾಗಿದೆ. ಎರಡನ್ನೂ ಸ್ಪೇಸ್‌ಎಕ್ಸ್‌ನ ಮುಂದಿನ ಹಂತದ ರಾಪ್ಟರ್ ಎಂಜಿನ್‌ನಿಂದ ನಿಯಂತ್ರಿಸಲಾಗುತ್ತದೆ. ಸೂಪರ್ ಹೆವಿ 33 ಮತ್ತು ಸ್ಟಾರ್‌ಶಿಪ್‌ 6 ಎಂಜಿನ್​ಗಳನ್ನು ಹೊಂದಿರುತ್ತದೆ.

ಸ್ಟಾರ್‌ಶಿಪ್ ಪರೀಕ್ಷಾ ಹಾರಾಟದ ವೀಕ್ಷಣೆಗಾಗಿ WB-57 ವಾಹಕವನ್ನು ಬಳಕೆ ಮಾಡಲಿದೆ ಎಂದು ವರದಿಯೊಂದು ತಿಳಿಸಿತ್ತು. ಬೃಹತ್ ರಾಕೆಟ್‌ನೊಂದಿಗೆ ಸ್ಪೇಸ್‌ಎಕ್ಸ್‌ನ ಕೆಲಸಗಳನ್ನು ನಿಕಟವಾಗಿ ಟ್ರ್ಯಾಕ್ ಮಾಡಲಾಗುತ್ತಿದೆ. ಆರ್ಟೆಮಿಸ್ ಚಂದ್ರನ ಕಾರ್ಯಾಚರಣೆಗಳ ಭಾಗವಾಗಿ ತನ್ನ ಗಗನಯಾತ್ರಿಗಳಿಗೆ ಸ್ಟಾರ್‌ಶಿಪ್ ವಾಹನವನ್ನು ಚಂದ್ರನ ಲ್ಯಾಂಡರ್‌ನಂತೆ ಬಳಸಲು ಉದ್ದೇಶಿಸಿಸಲಾಗಿದೆ.

ಸ್ಟಾರ್​ಶಿಪ್​ ಯಶಸ್ವಿ ಹಾರಾಟ ಕಂಡಲ್ಲಿ ಅದು ವಿಶ್ವದ ಮೊದಲ ಶಕ್ತಿಶಾಲಿ ಮತ್ತು ದೃತ್ಯ ಗಗವನೌಜೆ ಲಾಂಚಿಂಗ್​ ಎಂಬ ಖ್ಯಾತಿ ಪಡೆಯಲಿದೆ. ಇದು 100 ಟನ್‌ನಷ್ಟು ಕಾರ್ಗೊವನ್ನು ಕೆಳ ಭೂಸ್ಥಾಯಿ ಕಕ್ಷೆಗೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಸಿಬ್ಬಂದಿ ಮತ್ತು ಕಾರ್ಗೊ ಹೆಸರನ್ನು ಜೋಡಿಸಿ ಈ ಸೂಪರ್‌ ಹೆವಿ ರಾಕೆಟ್‌ಗೆ ಸ್ಟಾರ್‌ಶಿಪ್‌ ಎಂದು ನಾಮಕರಣ ಮಾಡಲಾಗಿದೆ.

ಈ ರಾಕೆಟ್‌ ಭೂಮಿಯಿಂದ ಸುಮಾರು 65 ಕಿ.ಮೀ. ಮೇಲಕ್ಕೆ ಹೋಗಿ ಬಳಿಕ ಸ್ಟಾರ್‌ಶಿಪ್‌ನಿಂದ ಪ್ರತ್ಯೇಕಗೊಂಡು ಭೂಮಿಗೆ ಹಿಂತಿರುಗಲಿದೆ. ಭವಿಷ್ಯದಲ್ಲಿ ಈ ಸ್ಟಾರ್‌ಶಿಪ್‌ ಈ ರಾಕೆಟ್‌ ವ್ಯವಸ್ಥೆಯಿಂದ ಪ್ರತ್ಯೇಕಗೊಂಡು ಅಂತರಿಕ್ಷದಲ್ಲಿ ದೂರ ಪ್ರಯಾಣ ಕೈಗೊಳ್ಳಲಿದೆ.

ಓದಿ: ಮದುವೆಯಾಗಿ 3 ವರ್ಷವಾದ್ರೂ ಹಿಂದಿರುಗದ ಪತ್ನಿ: ವಿಚ್ಛೇದನ ಎತ್ತಿಹಿಡಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.