ETV Bharat / international

ನೇಪಾಳ ವಿಮಾನ ಪತನವಾದ ಸ್ಥಳ ಪತ್ತೆ: ಮುಸ್ತಾಂಗ್‌ನಲ್ಲಿ ಸೇನೆಯಿಂದ ಶೋಧ ಕಾರ್ಯ

author img

By

Published : May 30, 2022, 9:31 AM IST

ನಾಲ್ವರು ಭಾರತೀಯರು ಸೇರಿದಂತೆ 22 ಮಂದಿ ಪ್ರಯಾಣಿಸುತ್ತಿದ್ದ ತಾರಾ ಏರ್‌ ವಿಮಾನ ಪತನಗೊಂಡ ಸ್ಥಳವನ್ನು ನೇಪಾಳ ಸೇನೆ ಪತ್ತೆ ಮಾಡಿದೆ. ವಿಮಾನ ಅಪಘಾತದ ಸ್ಥಳದ ದೃಶ್ಯವನ್ನು ಹಂಚಿಕೊಂಡಿದೆ.

Crashed Tara Air aircraft located at  Mustang
ನಾಪತ್ತೆಯಾಗಿದ್ದ ನೇಪಾಳದ ತಾರಾ ಏರ್‌ ವಿಮಾನ ಮುಸ್ತಾಂಗ್‌ನಲ್ಲಿ ಪತ್ತೆ

ಕಠ್ಮಂಡು: ನೇಪಾಳದ ಖಾಸಗಿ ಏರ್‌ಲೈನ್ಸ್ ವಿಮಾನ ಪತನಗೊಂಡ ಸ್ಥಳವನ್ನು ನೇಪಾಳ ಸೇನೆ ಸೋಮವಾರ ಪತ್ತೆ ಮಾಡಿದೆ ಎಂದು ನೇಪಾಳ ಸೇನಾ ವಕ್ತಾರರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ನಾಲ್ವರು ಭಾರತೀಯರು ಸೇರಿದಂತೆ 22 ಜನರಿದ್ದ ತಾರಾ ಏರ್‌ನ 9 NAET ಅವಳಿ ಎಂಜಿನ್ ವಿಮಾನ ಭಾನುವಾರ ನಾಪತ್ತೆಯಾಗಿತ್ತು. ನಾಪತ್ತೆಯಾದ ಕೆಲವೇ ಗಂಟೆಗಳ ನಂತರ ಮುಸ್ತಾಂಗ್ ಜಿಲ್ಲೆಯ ಕೊವಾಂಗ್ ಗ್ರಾಮದಲ್ಲಿ ಪತನಗೊಂಡಿದೆ. ಮುಸ್ತಾಂಗ್ ಜಿಲ್ಲೆಯಲ್ಲಿ ಹಿಮಪಾತದಿಂದಾಗಿ ಅಪಘಾತಕ್ಕೀಡಾದ ವಿಮಾನದ ಹುಡುಕಾಟಕ್ಕಾಗಿ ನಿಯೋಜಿಸಲಾದ ಎಲ್ಲಾ ಹೆಲಿಕಾಪ್ಟರ್‌ಗಳನ್ನು ವಾಪಸ್​​ ಕರೆಸಲಾಗಿತ್ತು. ಇಂದು ಮುಂಜಾನೆ, ನೇಪಾಳ ಸೇನೆ ತಾರಾ ಏರ್‌ನ ವಿಮಾನವನ್ನು ಹುಡುಕುವ ರಕ್ಷಣಾ ಪ್ರಯತ್ನ ಪುನರಾರಂಭಿಸಿದ್ದು, ಮುಸ್ತಾಂಗ್‌ನಲ್ಲಿ ಪತ್ತೆಯಾಗಿದೆ ಎಂದು ನೇಪಾಳ ಸೇನಾ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: ನಾಪತ್ತೆಯಾಗಿದ್ದ ನೇಪಾಳ ವಿಮಾನ 6 ಗಂಟೆಗಳ ಬಳಿಕ ಪತ್ತೆ

ಭಾನುವಾರ ಬೆಳಿಗ್ಗೆ 9:55ಕ್ಕೆ ಪೋಖರಾದಿಂದ ಜೋಮ್ಸಮ್‌ಗೆ ತೆರಳುತ್ತಿದ್ದ ಈ ವಿಮಾನವು ಮುಸ್ತಾಂಗ್‌ನ ಲೆಟೆ ಪ್ರದೇಶವನ್ನು ತಲುಪಿದ ನಂತರ ಸಂಪರ್ಕ ಕಳೆದುಕೊಂಡಿತ್ತು.

ಇದನ್ನೂ ಓದಿ: ನಾಲ್ವರು ಭಾರತೀಯರು ಸೇರಿದಂತೆ 22 ಜನರಿದ್ದ ನೇಪಾಳದ ವಿಮಾನ ನಾಪತ್ತೆ

ವರದಿಗಳ ಪ್ರಕಾರ, ದುರಂತಕ್ಕೀಡಾದ ವಿಮಾನದಲ್ಲಿದ್ದ ಭಾರತೀಯರು ಒಂದೇ ಕುಟುಂಬದವರಾಗಿದ್ದು, ಮಹಾರಾಷ್ಟ್ರದ ಥಾಣೆ ನಿವಾಸಿಗಳು. ಅವರನ್ನು ಅಶೋಕ್ ಕುಮಾರ್ ತ್ರಿಪಾಠಿ, ಅವರ ಪತ್ನಿ ವೈಭವಿ ತ್ರಿಪಾಠಿ ಮತ್ತು ಅವರ ಇಬ್ಬರು ಮಕ್ಕಳಾದ ಧನುಷ್ ತ್ರಿಪಾಠಿ, ರಿತಿಕಾ ತ್ರಿಪಾಠಿ ಎಂದು ಗುರುತಿಸಲಾಗಿದೆ. ಇತರ ಪ್ರಯಾಣಿಕರಲ್ಲಿ ಇಬ್ಬರು ಜರ್ಮನ್ನರು ಮತ್ತು 13 ನೇಪಾಳಿಗಳು ಸೇರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.