ETV Bharat / international

ಮದುವೆಗೆ ನೋ ಎನ್ನುತ್ತಿರುವ ಚೀನಾ ಯುವ ಜನತೆ; ಕಾರಣ ಇದು!

author img

By

Published : Jul 12, 2023, 3:59 PM IST

ಚೀನಾದಲ್ಲಿ ಮದುವೆ ಸಂಖ್ಯೆ ಕುಸಿಯುವುದು ಜನನದ ದರ ಜೊತೆಗೆ ಭವಿಷ್ಯದ ಆರ್ಥಿಕತೆ ಮೇಲೂ ಪರಿಣಾಮ ಬೀರಲಿದೆ.

china young people avoiding marriage for job uncertainty
china young people avoiding marriage for job uncertainty

ಬೀಜಿಂಗ್​​​: ಕಳೆದ ಮೂರು ವರ್ಷಗಳಿಂದ ಚೀನಾದಲ್ಲಿ ಮದುವೆ ಪ್ರಮಾಣ ಇಳಿಕೆ ಕಂಡಿದೆ. ಇದಕ್ಕೆ ಪ್ರಮುಖ ಕಾರಣ ನಿರುದ್ಯೋಗ. ಚೀನಾದಲ್ಲಿ ನಿರುದ್ಯೋಗ ದರ ನಿರಂತರ ಏರಿಕೆ ಕಾಣುತ್ತಿದೆ. ಇದರ ಜೊತೆಗೆ ಉದ್ಯೋಗ ವಜಾ, ಕಠಿಣ ಕೋವಿಡ್​ ನಿಯಮಗಳು ಅಲ್ಲಿನ ಯುವ ಜನತೆ ಭವಿಷ್ಯದ ಕುಟುಂಬದ ಕನಸಿನ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಅವರು ಮದುವೆ ಮುಂದೂಡುತ್ತಿದ್ದಾರೆ ಎಂದು ವರದಿ ಹೇಳಿದೆ.

ಇನ್ನು ಈ ಕುರಿತು ಮಾತನಾಡಿರುವ ಟೆಕ್​ ವರ್ಕ್​ ಗ್ರೇಸ್​ ಜಾಂಕ್​, ತನಗೆ ಸ್ನೇಹಿತನಿದ್ದು, ಮದುವೆಯಾಗಬೇಕು ಎಂಬ ಯೋಚನೆ ಹೊಂದಿದ್ದೆ. ಕಳೆದೆರಡು ವರ್ಷಗಳ ಹಿಂದೆ ಕಠಿಣ ಕೋವಿಡ್​ ನೀತಿಯನ್ನು ಶಾಂಘೈ ನಗರದಲ್ಲಿ ಹೇರಲಾಯಿತು. ಕಳೆದ ಡಿಸೆಂಬರ್​ನಲ್ಲಿ ಈ ನಿಯಮವನ್ನು ಸಡಿಲಿಸಿದ ಬಳಿಕ ಕೊಂಚ ಸಕಾರಾತ್ಮಕತೆ ಕಂಡು ಬಂದಿತು. ಆದರೆ, ಇದೀಗ ಉದ್ಯೋಗ ವಜಾ ಪ್ರಕ್ರಿಯೆ ನಡೆಯುತ್ತಿದ್ದು, ತಮ್ಮ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದೆ. ಭವಿಷ್ಯದ ಕುಟುಂಬಕ್ಕೆ ತನ್ನ ಕೆಲಸ ಸುರಕ್ಷಿತವೇ ಎಂಬ ಪ್ರಶ್ನೆ ಮೂಡುತ್ತಿದೆ. ಈ ರೀತಿಯ ಜೀವನದ ಅನಿಶ್ಚಿತತೆಗಳಿಂದ ಹೆದರುತ್ತಿದ್ದು, ಹೊಸ ಜೀವನದ ಆರಂಭಕ್ಕೆ ಆಲೋಚಿಸುವಂತೆ ಮಾಡುತ್ತಿದೆ ಎಂದಿದ್ದಾರೆ.

ಚೀನದಾದಲ್ಲಿ ಕಳೆದ 9 ವರ್ಷದಲ್ಲಿ ಮದುವೆ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಕಳೆದ ವರ್ಷ ಕೇವಲ 6.8 ಮಿಲಿಯನ್​ ಜೋಡಿಗಳು ಮದುವೆಗೆ ದಾಖಲಾತಿ ನಡೆಸಿದ್ದು, 1986ಕ್ಕೆ ಹೋಲಿಸಿದಾಗ ಇದು ಅತ್ಯಂತ ಕಡಿಮೆ ದರವಾಗಿದೆ. 2023ರ ಹೊತ್ತಿಗೆ ಮದುವೆ ದಾಖಲೆ ಪ್ರಮುಖ ಏರಿಕೆ ಕಾಣುತ್ತಿದೆ ಎಂಬ ನಿರೀಕ್ಷೆ ಮೂಡಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 40,000 ಜೋಡಿಗಳು ಮದುವೆಯಾಗಿದ್ದಾರೆ. ಇದೇ ವೇಳೆ, ಮತ್ತೊಂದು ಕಾಳಜಿ ವಿಷಯ ಎಂದರೆ ವಿಚ್ಛೇದನವಾಗಿದ್ದು, 1,27,000 ಜನರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಸಾಧನೆಯ ಗುರಿಯತ್ತ ಯುವತಿಯರು: ಅಷ್ಟೇ ಅಲ್ಲದೇ, ಶಿಕ್ಷಣದ ವ್ಯವಸ್ಥೆ ಕೂಡ ಹುಡುಗಿಯರನ್ನು ಸಬಲೀಕರಣಗೊಳಿಸಿದೆ. ನಗರದಲ್ಲಿ ಮಹಿಳೆಯರು ಹೊಸ ಸಾಧನೆ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸುವ ಗುರಿ ಹೊಂದಿದ್ದಾರೆ. ಶಿಕ್ಷಣ, ಆರ್ಥಿಕ ಅಗತ್ಯತೆಗಳಿಗೆ ಹೋಲಿಕೆ ಮಾಡಿದಾಗ ಅವರಿಗೆ ಮದುವೆ ಪ್ರಾಮುಖ್ಯತೆ ಎನಿಸುತ್ತಿಲ್ಲ.

ಇನ್ನು ಈ ಕುರಿತು ಮಾತನಾಡಿರುವ ಯುವಕರು, ತಾವು ಮದುವೆ ಸೌಲಭ್ಯ ಹೊಂದಲು ಸಾಧ್ಯವಾಗದಿರುವುದಕ್ಕೆ ಕಾರಣ ನಗರದ ಸಾಂಸ್ಕೃತಿ ಒತ್ತಡ ಎಂದಿದ್ದಾರೆ. ಡೇಟಿಂಗ್​​ ಆರಂಭಕ್ಕೂ ಮುನ್ನವೇ ಯುವಕರು ಮನೆ ಮತ್ತು ಕಾರು ಹೊಂದಿರಬೇಕು ಎಂಬ ನಿರೀಕ್ಷೆ ಮಾಡಲಾಗುತ್ತಿದೆ ಎಂದಿದ್ದಾರೆ.

ಕಳೆದ ಮೂರು ವರ್ಷದಲ್ಲಿ ಎದುರಾಗಿರುವ ಈ ಒತ್ತಡಗಳಿಂದ ಅನೇಕ ಯುವಜನತೆ ಕುಟುಂಬ ನಿರ್ಮಾಣ ಮಾಡುವ ಆಲೋಚನೆಗೆ ಹೊಸ ಸ್ವರೂಪ ನೀಡಿದ್ದಾರೆ. ಜೊತೆಗೆ ಚೀನಾ ಅನುಸರಿಸುತ್ತಿರುವ ಅನೇಕ ಬಿಗಿ ಕ್ರಮಗಳು ಕೂಡ ಮದುವೆ ದರದ ಮೇಲೆ ಪರಿಣಾಮ ಬೀರಿದೆ.

ಈ ಕುರಿತು ಮಾತನಾಡಿರುವ ಆಸ್ಟ್ರೇಲಿಯಾದ ವಿಕ್ಟೋರಿಯಾ ಯುನಿವರ್ಸಿಟಿಯ ಹಿರಿಯ ಸಂಶೋಧಕ ಕ್ಸಿಜಿನ್​ ಪೆಂಗ್​​, ಯುವ ಜನತೆ ಭವಿಷ್ಯದ ಬಗ್ಗೆ ಆತ್ಮವಿಶ್ವಾಸದಿಂದ ಇಲ್ಲ ಎಂದರೆ ಅವರು, ಮದುವೆಯಂತಹ ವಿಚಾರದ ಕುರಿತು ಚಿಂತಿಸುವುದು ತುಂಬಾ ಕಷ್ಟವಾಗಲಿದೆ ಎಂದಿದ್ದಾರೆ.

ಚೀನಾದಲ್ಲಿ ಅವಿವಾಹಿತ ಮತ್ತು ಏಕ ಪೋಷಕರು ಮಗುವನ್ನು ಹೊಂದುವುದು ಕಷ್ಟ. ಮದುವೆ ದರ ಕಡಿಮೆಯಾಗುವ ಹಿನ್ನಲೆ ಜನನ ದರ ಕೂಡ ಇಳಿಕೆ ಕಾಣಲಿದೆ. ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದ ದೇಶ ಎಂಬ ಖ್ಯಾತಿಯನ್ನು 1960ರ ಬಳಿಕ ಮೊದಲ ಬಾರಿಗೆ ಇದೀಗ ಚೀನಾ ಕಳೆದುಕೊಂಡಿದೆ. ಆಡಳಿತರೂಢ ಕಮ್ಯೂನಿಸ್ಟ್​​ ಪಕ್ಷ ಕೂಡ ಮದುವೆ ಮತ್ತು ಮಕ್ಕಳು ಹೊಂದುವ ಸಂಬಂಧ ಜನರಲ್ಲಿ ಪ್ರಚಾರ ನಡೆಸಬೇಕಿದೆ ಎಂದಿದ್ದಾರೆ.

ಇದನ್ನೂ ಓದಿ: Schengen Visa: 1 ಲಕ್ಷಕ್ಕೂ ಹೆಚ್ಚು ಭಾರತೀಯರ ಷೆಂಗೆನ್​ ವೀಸಾ ಅರ್ಜಿ ತಿರಸ್ಕೃತ; 4 ಪ್ರಮುಖ ಕಾರಣಗಳು ಹೀಗಿವೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.