ETV Bharat / international

ಯುರೋಪ್​-ಅಮೆರಿಕದಲ್ಲಿ ವಿಪರೀತ ತಾಪಮಾನ, ಏಷ್ಯಾದಲ್ಲಿ ಮಳೆಯಬ್ಬರ: ಇದು El Nino ಎಫೆಕ್ಟ್‌

author img

By

Published : Jul 17, 2023, 12:17 PM IST

ಭಾರತ ಸೇರಿದಂತೆ ಏಷ್ಯಾದ ಹಲವು ದೇಶಗಳಲ್ಲಿ ಮಳೆ ಅಬ್ಬರ ತೀವ್ರವಾಗಿದೆ. ಆದರೆ ಇನ್ನೊಂದೆಡೆ, ಯುರೋಪ್​, ಅಮೆರಿಕದಂತಹ ಪಾಶ್ಚಿಮಾತ್ಯ ದೇಶದಲ್ಲಿ ಜನರು ಬಿಸಿಲ ಬೇಗೆಯಿಂದ ತತ್ತರಿಸುತ್ತಿದ್ದಾರೆ.

Because of El Nino Heat wave in Europe America, heavy rain in Asia
Because of El Nino Heat wave in Europe America, heavy rain in Asia

ಜಾಗತಿಕವಾಗಿ ಹವಾಮಾನ ವೈಪರೀತ್ಯಗಳು ಕಂಡು ಬರುತ್ತಿವೆ. ಅಮೆರಿಕ ಮತ್ತು ಯುರೋಪ್​ನಲ್ಲಿ ಶಾಖದ ಅಲೆ ಹೆಚ್ಚುತ್ತಿವೆ. ದಕ್ಷಿಣ ಏಷ್ಯಾದಲ್ಲಿ ಜನರು ಪ್ರವಾಹದಿಂದ ತತ್ತರಿಸುತ್ತಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಸ್ಪೇನ್​, ಇಟಲಿ ಮತ್ತು ಗ್ರೀಸ್​ ದೇಶಗಳಲ್ಲಿ ಕೆಲವು ದಿನಗಳಿಂದ ಜನರು ಅತಿಯಾದ ಉಷ್ಣಾಂಶದಿಂದ ಹೈರಾಣಾಗಿದ್ದಾರೆ. ರೋಮ್​, ಬೊಲೊಗ್ನಾ, ಫ್ಲೋರೆನ್ಸ್​​ ಸೇರಿದಂತೆ 16 ನಗರದಲ್ಲಿ ತಾಪಮಾನ ಹೆಚ್ಚುತ್ತಿದ್ದು, ಇಟಲಿ​ ಆರೋಗ್ಯ ಸಚಿವರು ಕಳೆದ ವಾರ ರೆಡ್​ ಅಲರ್ಟ್​ ಘೋಷಣೆ ಮಾಡಿದ್ದಾರೆ. ಬಿರು ಬಿಸಿಲಿನ ಶಾಖ ಮುಂದಿನ ವಾರವೂ ಮುಂದುವರೆಯಲಿದ್ದು, ಸರ್ಡಿನಿಯಾದಲ್ಲಿ 48 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎಂದು ಇಟಲಿ ಮಾಧ್ಯಮ ತಿಳಿಸಿದೆ.

ಈ ತಾಪಮಾನ ಜುಲೈ 19 ಮತ್ತು 23ರಂದು ಮತ್ತಷ್ಟು ಹೆಚ್ಚಲಿದೆ. ಇಟಲಿ ಮಾತ್ರವಲ್ಲ ಗ್ರೀಸ್​, ಟರ್ಕಿ, ಬ್ಲಲ್ಕಾನ್ಸ್​​ ಜನರು ನೆತ್ತಿ ಸುಡುವ ಬಿಲಿಸಿನಿಂದ ಬಳಲುತ್ತಿದ್ದಾರೆ. ಮುಂದಿನ ವಾರಗಳಲ್ಲಿ ಅನೇಕ ಸ್ಥಳೀಯ ಪ್ರದೇಶಗಳಲ್ಲಿ ಶಾಖದ ಪ್ರಮಾಣ ಏರಿಕೆಯಾಗಲಿದೆ ಎಂದು ಇಟಲಿಯನ್​ ಹವಾಮಾನ ಮತ್ತು ಪರಿಸರ ತಜ್ಞರು ಎಚ್ಚರಿಸಿದ್ದಾರೆ.

ಜುಲೈ ತಿಂಗಳ ಆರಂಭದಿಂದ ಭೂಮಿ ಅತಿ ಉಷ್ಣಾಂಶಕ್ಕೆ ಒಳಗಾಗಿದ್ದು, ಜಾಗತಿಕ ತಾಪಮಾನ ಏರಿಕೆ ಕಂಡಿದೆ. ಜೂನ್​ನಲ್ಲಿ ಕೂಡ ಅಧಿಕ ಶಾಖದ ಅಲೆ ದಾಖಲಾಗಿದೆ. ವಿಶ್ವ ಹವಾಮಾನ ಕೇಂದ್ರದನುಸಾರ, ಇದು ಹವಾಮಾನ ಬದಲಾವಣೆ ಮತ್ತು ಎಲ್ ನಿನೊ ಹವಾಮಾನ ಮಾದರಿಯ ಆರಂಭಿಕ ಹಂತಗಳ ಮುನ್ಸೂಚನೆ. ವಿಶ್ವಸಂಸ್ಥೆ ಹೇಳುವಂತೆ ಶೇ 90ರಷ್ಟು ಎಲ್​ ನಿನೊ ಘಟನೆಗಳು 2023ರ ದ್ವಿತೀಯಾರ್ಧದಲ್ಲೂ ಮುಂದುವರೆಯಲಿದೆ.

ಎಲ್​ ನಿನೊ ಪರಿಣಾಮ ಎಂದರೇನು?: ಎಲ್ ನಿನೊ ವಿದ್ಯಮಾನ ಪ್ರತಿ ಎರಡರಿಂದ ಏಳು ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಸಾಮಾನ್ಯವಾಗಿ ಒಂಬತ್ತರಿಂದ 12 ತಿಂಗಳುಗಳವರೆಗೆ ಈ ರೀತಿಯ ವಾತಾವರಣ ಇರುತ್ತದೆ. ಇದು ಮಧ್ಯ ಮತ್ತು ಪೂರ್ವ ಉಷ್ಣವಲಯದ ಪೆಸಿಫಿಕ್ ಮಹಾಸಾಗರದಲ್ಲಿ ಸಮುದ್ರದ ಮೇಲ್ಮೈ ತಾಪಮಾನದ ಉಷ್ಣತೆಗೆ ಸಂಬಂಧಿಸಿದ ನೈಸರ್ಗಿಕವಾಗಿ ಸಂಭವಿಸುವ ಹವಾಮಾನ ಮಾದರಿ ಎನ್ನುತ್ತಾರೆ. ಎಲ್​ ನಿನೊದಿಂದಾಗಿ ಸಮುದ್ರ ಮೇಲ್ಮೈ ತಾಪಮಾನವು ಸರಾಸರಿಗಿಂತ ಬೆಚ್ಚಗಿರುತ್ತದೆ. ಇವು ಭೂ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನದ ಮುನ್ಸೂಚನೆ ನೀಡುತ್ತದೆ. ಇದರಿಂದ ಉತ್ತರ ಮತ್ತು ದಕ್ಷಿಣ ಗೋಳಾರ್ಧದ ಎಲ್ಲ ಭೂಪ್ರದೇಶಗಳಲ್ಲಿ ಧನಾತ್ಮಕ ತಾಪಮಾನ ವೈಪರೀತ್ಯಗಳನ್ನು ನಿರೀಕ್ಷಿಸಲಾಗುತ್ತದೆ.

ಏಷ್ಯಾ ಖಂಡದಲ್ಲಿ ಮಳೆ ಅಬ್ಬರ: ದಕ್ಷಿಣ ಏಷ್ಯಾದಲ್ಲಿ ಮಾನ್ಸೂನ್​ ಮಳೆ ತೀವ್ರತೆ ಹೆಚ್ಚಿದೆ. ಏಷ್ಯಾದೆಲ್ಲೆಡೆ ಭಾರಿ ಮಳೆಯಿಂದಾಗಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಕಳೆದ ಎರಡು ವಾರದಲ್ಲಿ ಜೋರು ಮಳೆಯಿಂದಾಗಿ ಪ್ರವಾಹ ಮತ್ತು ಭೂ ಕುಸಿತಗಳು ಸಂಭವಿಸಿವೆ. ಭಾರತ, ಚೀನಾ ಮತ್ತು ಜಪಾನ್ ದೇಶಗಳ ಜನರು​ ಅಧಿಕ ಮಳೆಯಿಂದಾಗಿ ತತ್ತರಿಸುತ್ತಿದ್ದಾರೆ.

ಉತ್ತರ ಭಾರತದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಮಳೆ-ಪ್ರವಾಹದಿಂದ 90 ಮಂದಿ ಸಾವನ್ನಪ್ಪಿದ್ದಾರೆ. ದಕ್ಷಿಣ ಕೊರಿಯಾದಲ್ಲೂ ಕೂಡ ಬಿರುಗಾಳಿಸಹಿತ ಮಳೆ ಸುರಿಯುತ್ತಿದ್ದು ಪಿಲಿಪ್ಪೀನ್ಸ್‌ ಅಧಿಕಾರಿಗಳು ಟ್ರೋಪಿಕಲ್​ ಸೈಕ್ಲೋನ್​​ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Hottest day: ಜುಲೈ 3 ಜಾಗತಿಕವಾಗಿ ಹೆಚ್ಚು ಸರಾಸರಿ ತಾಪಮಾನ ದಾಖಲಾದ ದಿನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.