ETV Bharat / international

ಭಾರಿ ಭೂ ಕುಸಿತ ಕನಿಷ್ಠ 20 ಮಂದಿ ಸಾವು

author img

By

Published : Apr 4, 2023, 7:36 AM IST

ಪೂರ್ವ ಕಾಂಗೋದಲ್ಲಿ ಭಾರಿ ಭೂ ಕುಸಿತ- ಕನಿಷ್ಠ 20 ಮಂದಿ ಸಾವು

At least 20 people killed in a landslide in eastern Congo
ಭಾರಿ ಭೂ ಕುಸಿತ ಕನಿಷ್ಠ 20 ಮಂದಿ ಸಾವು

ಗೋಮಾ( ಕಾಂಗೋ): ಪೂರ್ವ ಕಾಂಗೋದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಸರ್ಕಾರ ಸೋಮವಾರ ತಿಳಿಸಿದೆ. ಮಸಿಸಿ ಪ್ರಾಂತ್ಯದ ಬೊಲೊವಾ ಗ್ರಾಮದಲ್ಲಿ ಭಾನುವಾರ ಭೂಕುಸಿತ ಸಂಭವಿಸಿದೆ ಎಂದು ಲೆಫ್ಟಿನೆಂಟ್ ಕರ್ನಲ್ ಗುಯಿಲೌಮ್ ಎನ್ಡ್ಜಿಕೆ ಕೈಕೊ ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಈ ದುರದೃಷ್ಟಕರ ಘಟನೆಯ ಪರಿಣಾಮವಾಗಿ, ನಮ್ಮ ದೇಶವಾಸಿಗಳಲ್ಲಿ ಇಪ್ಪತ್ತು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಇತರರು ಕಾಣೆಯಾಗಿದ್ದಾರೆ ಮತ್ತು ಅವರನ್ನು ಹುಡುಕಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಭೂಕುಸಿತ ಸಂಭವಿಸಿದಾಗ ಸುಮಾರು 25 ತಾಯಂದಿರು ತಮ್ಮ ಮಕ್ಕಳೊಂದಿಗೆ ಪರ್ವತದ ತಪ್ಪಲಿನಲ್ಲಿರುವ ಹೊಳೆಯಲ್ಲಿ ಬಟ್ಟೆ ಒಗೆಯುತ್ತಿದ್ದರು. ಈ ಸಂದರ್ಭದಲ್ಲಿ ಸಂಭವಿಸಿದ ಭಾರಿ ಭೂಕುಸಿತದಲ್ಲಿ ಅವರೆಲ್ಲ ಇದ್ದಕ್ಕಿದ್ದಂತೆ ಸಮಾಧಿಯಾಗಿದ್ದಾರೆ ಎಂದು ಸ್ಥಳೀಯ ಆಡಳಿತಾಧಿಕಾರಿ ಅಲ್ಫೋನ್ಸ್ ಮುಶೆಶಾ ಮಿಹಿಂಗಾನೊ ಅಸೋಸಿಯೇಟೆಡ್ ಪ್ರೆಸ್‌ಗೆ ಮಾಹಿತಿ ಒದಗಿಸಿದ್ದಾರೆ.

ಇದನ್ನು ಓದಿ: ಲಂಡನ್​​ ಸ್ಕೂಲ್ ಆಫ್ ಎಕನಾಮಿಕ್ಸ್​ನಲ್ಲಿ ಭಾರತ ವಿರೋಧಿ ನೀತಿ.. ಭಾರತೀಯ ವಿದ್ಯಾರ್ಥಿಗಳ ಅಸಮಾಧಾನ

ಪೂರ್ವ ಕಾಂಗೋವು 120 ಕ್ಕೂ ಹೆಚ್ಚು ಸಶಸ್ತ್ರ ಗುಂಪುಗಳೊಂದಿಗೆ ನಿರಂತರ ಹೋರಾಟ ನಡೆಸುತ್ತಿದೆ. ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳಿಗಾಗಿ ಈ ಗುಂಪುಗಳು ಪರಸ್ಪರ ಹೋರಾಟ ಮಾಡುತ್ತಿದ್ದು, ಈ ಹಿಂಸಾಚಾರದಿಂದಲೇ ಬಹಳಷ್ಟು ನಾಶವಾಗಿದೆ. ಈ ಸಂಘರ್ಷದಲ್ಲಿ ಕೆಲ ಸಶಸ್ತ್ರ ಗುಂಪುಗಳು ತಮ್ಮ ಸಮುದಾಯಗಳನ್ನು ರಕ್ಷಿಸಲು ಹೋರಾಟ ಮಾಡುತ್ತಿವೆ. ಈ ಪಟ್ಟಣದಲ್ಲಿ ಭೂಕುಸಿತಗಳು ಆಗಾಗ್ಗೆ ಏನೂ ಸಂಭವಿಸುವುದಿಲ್ಲ, ಆದರೆ ಕೆಲವೊಮ್ಮೆ ಭಾರಿ ಪ್ರಮಾಣದಲ್ಲಿ ಇತರ ಪ್ರದೇಶಗಳಲ್ಲಿ ಸಂಭವಿಸುತ್ತಲೇ ಇರುತ್ತವೆ ಎಂದು ತಿಳಿದು ಬಂದಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಮಸಿಸಿ ಪ್ರಾಂತ್ಯದ ಬಿಹಾಂಬ್ವೆ ಗ್ರಾಮದಲ್ಲಿ ಭೂಕುಸಿತದಿಂದ ಸುಮಾರು 100 ಜನರು ಸಾವನ್ನಪ್ಪಿದ್ದರು.

ಇದನ್ನು ಓದಿ:ಕೊಟಕಪುರ ಗುಂಡಿನ ದಾಳಿ ಪ್ರಕರಣ; ಜನರು ಮಾಹಿತಿ ಹಂಚಿಕೊಳ್ಳಲು ಸಮಯ ನಿಗದಿ ಮಾಡಿದ ಎಡಿಜಿಪಿ
ಭಾರತದ ಈಶಾನ್ಯ ಮತ್ತು ಉತ್ತರ ಭಾಗದಲ್ಲಿ ಆಗಾಗ್ಗೇ ಭೂ ಕುಸಿತಗಳು ಸಂಭವಿಸುತ್ತಲೇ ಇರುತ್ತವೆ. ಕಳೆದ ತಿಂಗಳು ಜಮ್ಮು ಕಾಶ್ಮೀರದಲ್ಲಿ ಹೆದ್ದಾರಿ ಕುಸಿತ ಉಂಟಾಗಿತ್ತು. ಹೆದ್ದಾರಿಯಲ್ಲಿ ಕಾರಿನಲ್ಲಿ ಚಲಿಸುತ್ತಿದ್ದ ವೇಳೆ ಭಾರಿ ಭೂ ಕುಸಿತ ಊಂಟಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ಆರು ಜನ ಗಂಭೀರವಾಗಿ ಗಾಯಗೊಂಡಿದ್ದರು. ರಾಂಬನ್ ಜಿಲ್ಲೆಯ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾರ್ಚ್​ 7 ರಂದು ಈ ಘಟನೆ ನಡೆದಿತ್ತು. ಗಾಯಳುಗಳನ್ನ ರಾಂಬನ್​ನ ಜಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಉತ್ತರಾಖಂಡ ರಾಜ್ಯಾದಲ್ಲಿ ಆಗಾಗ್ಗೆ ಇಂತಹ ದುರ್ಘಟನೆಗಳು ಸಂಭವಿಸುತ್ತಲೇ ಇರುತ್ತವೆ. ಕಳೆದ ವರ್ಷ ಮಳೆಯ ಅನಾಹುತಕ್ಕೆ ಭಾರಿ ಅನಾಹುತಗಳೇ ಸಂಭವಿಸಿದ್ದವು. ಅಲ್ಲದೇ, ಉತ್ತರಕಾಶಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ನಿರಂತರವಾಗಿ ಭೂ ಕುಸಿತಗಳು ಸಂಭವಿಸುತ್ತಿವೆ. ಗಂಗೋತ್ರಿ ಹೆದ್ದಾರಿಯಲ್ಲೂ ಭೂಕುಸಿತ ಉಂಟಾಗಿ ಕಲ್ಲು ಬಂಡೆಗಳು ಉರುಳಿ ಬೀಳುವುದು ನಡೆಯುತ್ತಲೇ ಇರುತ್ತದೆ.

ಇದನ್ನು ಓದಿ:ಹೊಸ ಸಂಸತ್ತಿನ ಹೊರಗೆ ಪ್ರಧಾನಿ ಪದವಿ ಪ್ರದರ್ಶಿಸಲು ಸಂಜಯ್ ರಾವತ್ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.