ETV Bharat / international

ಇಸ್ರೇಲ್​​ ಸೇನಾ ದಾಳಿಗೆ ಅಲ್ ​- ಜಜೀರಾ ಜನಪ್ರಿಯ ಪತ್ರಕರ್ತೆ ಶಿರೀನ್​ ಅಬು ಸಾವು

author img

By

Published : May 11, 2022, 7:01 PM IST

ಇಸ್ರೇಲ್​ ಸೇನೆಯ ದಾಳಿ ಬಗ್ಗೆ ವರದಿ ಮಾಡಲು ತೆರಳಿದ್ದ ಅರಬ್ ನಾಡಿನ ಪ್ರಮುಖ ಚಾನೆಲ್​ ಅಲ್​ ಜಜೀರಾದ ಜನಪ್ರಿಯ ಪತ್ರಕರ್ತೆ ಶಿರೀನ್​ ಅಬು ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.

Al-Jazeera reporter killed
Al-Jazeera reporter killed

ಜೆರುಸಲೇಂ: ಪ್ಯಾಲೇಸ್ತೇನಿಯನ್​ ವೆಸ್ಟ್ ಬ್ಯಾಂಕ್​ನಲ್ಲಿ ನಿರಾಶ್ರಿತರ ಬಗ್ಗೆ ವರದಿ ಮಾಡಲು ತೆರಳಿದ್ದ ಸಂದರ್ಭದಲ್ಲಿ ಇಸ್ರೇಲ್​ ಸೇನೆಯ ಗುಂಡಿನ ದಾಳಿಗೆ ಜನಪ್ರೀಯ ಅಲ್​​-ಜಜೀರಾ ವಾಹಿನಿ ಪತ್ರಕರ್ತೆ ಸಾವನ್ನಪ್ಪಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ಯಾಲೇಸ್ಟೀನ್​​ ಆರೋಗ್ಯ ಇಲಾಖೆ ಮಾಹಿತಿ ಹಂಚಿಕೊಂಡಿದೆ.

ದಾಳಿಯ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಶಿರೀನ್​ ಅಬು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಮತ್ತೊಬ್ಬ ಅಲ್​​-ಜಜೀರಾ ಪತ್ರಕರ್ತ ಅಲಿ ಸಮೌದಿ ಬೆನ್ನಿಗೆ ಗುಂಡು ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.

Al-Jazeera reporter killed
ಅಲ್​-ಜಜಿರಾ ಜನಪ್ರಿಯ ಪತ್ರಕರ್ತೆ ಶಿರೀನ್​ ಅಬು ಸಾವು

ಇದನ್ನೂ ಓದಿ: ಹುತಾತ್ಮ ಯೋಧನಿಗೆ ರಾಷ್ಟ್ರಪತಿಗಳಿಂದ ಶೌರ್ಯ ಪ್ರಶಸ್ತಿ ಪ್ರದಾನ

PRESS ಎಂಬ ಪದ ಹೊಂದಿದ್ದ ಜಾಕೆಟ್​ ಧರಿಸಿ ಕೆಲಸ ಮಾಡ್ತಿದ್ದ ಸಂದರ್ಭದಲ್ಲಿ ಇಸ್ರೇಲ್ ಸೇನೆಯ ಮೇಲೆ ಎದುರಾಳಿಗಳು ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಗುಂಡು ಹಾರಿಸಲಾಗಿದೆ. ಈ ಸಂದರ್ಭದಲ್ಲೇ ಅವರು ಸಾವನ್ನಪ್ಪಿದ್ದು, ಘಟನೆಯ ತನಿಖೆ ನಡೆಸಲಾಗುವುದು ಎಂದು ಇಸ್ರೇಲ್ ಮಿಲಿಟರಿ ಹೇಳಿಕೊಂಡಿದೆ.

ಶಿರೀನ್​ ಅಬು ಪ್ಯಾಲೆಸ್ತೇನ್​ ನಲ್ಲಿರುವ ಅರಬ್ ಭಾಷೆಯ ಅಲ್​-ಜಜೀರಾ ಚಾನಲ್​​ನ ಜನಪ್ರಿಯ ವರದಿಗಾರ್ತಿಯಾಗಿದ್ದು, ಇಸ್ರೆಲ್ ದಾಳಿ ಬಗ್ಗೆ ವರದಿ ಮಾಡಲು ತೆರಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.