ETV Bharat / international

ಮನೆಯೊಂದರ ಗೋಡೆ ಗೋಡೆಯಲ್ಲೂ ಜೇನುನೊಣಗಳ ಝೇಂಕಾರ...ಕಾರಣ?

author img

By

Published : Jun 20, 2022, 7:13 AM IST

ಜೇನುನೊಣಗಳ ಝೇಂಕಾರ ಹಾಗೂ ಕಡಿತದ ಭಯದಿಂದ ಅವುಗಳನ್ನು ಕೃಷಿ ವಿಜ್ಞಾನಿಗಳ ಸಹಾಯದಿಂದ ಬೇರೆ ಕಡೆ ಸ್ಥಳಾಂತರಿಸಿದ್ದಾರೆ. ಹೀಗೆ ನಡೆದ ಕಾರ್ಯಾಚರಣೆ ವೇಳೆ ಈ ಪುರಾತನ ಮನೆಯ ಗೋಡೆಯಿಂದ ಸುಮಾರು 6 ಸಾವಿರ ಜೇನುನೋಣಗಳನ್ನು ಹೊರ ತೆಗೆಯಲಾಗಿದೆಯಂತೆ.

6,000 bees removed from inside wall of Omaha couple's home
ಯೊಂದರೆ ಗೋಡೆ ಗೋಡೆಯಲ್ಲೂ ಜೇನುನೊಣಗಳ ಝೇಂಕಾರ

ಒಮಾಹಾ (ಅಮೆರಿಕ); ಇಲ್ಲಿನ 100 ವರ್ಷ ಹಳೆಯದಾದ ಮನೆಯೊಂದರೆ ಎಲ್ಲೆಂದರಲ್ಲಿ ಜೇನುನೊಣಗಳದ್ದೇ ದರ್ಬಾರ್​. ಇದು ದಂಪತಿಯೊಬ್ಬರ ಮನೆಯಾಗಿದ್ದು, ಜೇನುನೊಣ ಝೇಂಕಾರದ ಮಧ್ಯೆಯೇ ಬದುಕು ಸಾಗಿಸುತ್ತಿದ್ದರು.

ಆದರೆ ಜೇನುನೊಣಗಳ ಝೇಂಕಾರ ಹಾಗೂ ಕಡಿತದ ಭಯದಿಂದ ಅವುಗಳನ್ನು ಕೃಷಿ ವಿಜ್ಞಾನಿಗಳ ಸಹಾಯದಿಂದ ಬೇರೆ ಕಡೆ ಸ್ಥಳಾಂತರಿಸಿದ್ದಾರೆ. ಹೀಗೆ ನಡೆದ ಕಾರ್ಯಾಚರಣೆ ವೇಳೆ ಈ ಪುರಾತನ ಮನೆಯ ಗೋಡೆಯಿಂದ ಸುಮಾರು 6 ಸಾವಿರ ಜೇನುನೋಣಗಳನ್ನು ಹೊರ ತೆಗೆಯಲಾಗಿದೆಯಂತೆ.

ಥಾಮಸ್ ಮತ್ತು ಮೇರಿಲು ಗೌಟಿಯರ್ ಅವರು ಒಮಾಹಾ ವರ್ಲ್ಡ್ - ಹೆರಾಲ್ಡ್‌ ಮಿಡ್‌ಟೌನ್ ಮನೆಯ ಹೊರಗೆ ಜೇನುನೊಣ ಸ್ನೇಹಿ ಹೂವುಗಳನ್ನು ನೆಟ್ಟಿದ್ದಾರಂತೆ. ಹೀಗಾಗಿ ಇವರ ಮನೆಯ ಗೋಡೆ ಗೋಡೆಗಳಲ್ಲೂ ಜೇನುನೊಣಗಳ ಸದ್ದು ಕೇಳಿ ಬರುತ್ತಿದೆ. ಜೇನುನೊಣಗಳು ಮನೆಯ ಗೊಡೆಗಳ ಒಳಗೆ ವಾಸಿಸಲು ಆರಂಭಿಸುತ್ತವೆ ಎಂಬ ಕಲ್ಪನೆ ಈ ದಂಪತಿಗೆ ಇರಲಿಲ್ಲವಂತೆ.

ಈ ಜೇನುನೊಣಗಳು ಬರಬರುತ್ತಾ ಈ ದಂಪತಿ ಮಲಗುವ ಎರಡನೇ ಮಹಡಿಯ ಕೋಣೆಗೆ ನುಗ್ಗಿವೆ. ಇದು ಅವರ ಏಕಾಂತಕ್ಕೂ ಭಂಗ ತಂದಿದೆ. ಅಷ್ಟೇ ಏಕೆ ಗೋಡೆಗೆ ಕಿವಿಗೊಟ್ಟರೆ ಜೇನುನೊಣಗಳ ಝೇಂಕಾರವೇ ಮಾರ್ದನಿಸುತ್ತಂತೆ.

ಹೀಗಾಗಿ ಅವರು ಜೇನುನೊಣಗಳನ್ನು ಸಂರಕ್ಷಿಸುವ ಬೀ ಕ್ಲಬ್​ ಸಂಪರ್ಕಿಸಿದ್ದಾರೆ. ಜೇನುನೊಣಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಸಂಸ್ಥೆ 600 ಡಾಲರ್​ ಶುಲ್ಕ ವಿಧಿಸಿ, ಅವುಗಳನ್ನ ಸುರಕ್ಷಿತವಾಗಿ ಹೊರ ತೆಗೆದು ಬೇರೆ ಕಡೆ ಸ್ಥಳಾಂತರಿಸಿದೆ.

ಇದನ್ನು ಓದಿ: ಸೈಕಲ್ ಸವಾರಿ ವೇಳೆ ಆಯತಪ್ಪಿ ಬಿದ್ದ ಜೋ ಬೈಡನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.