ETV Bharat / international

ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ರಷ್ಯಾ ಅಧ್ಯಕ್ಷ ಪುಟಿನ್!

author img

By

Published : Feb 24, 2022, 9:06 AM IST

Updated : Feb 24, 2022, 11:27 AM IST

ಉಕ್ರೇನ್‌ ನ್ಯಾಟೋ ಸೇರುವುದನ್ನು ತಡೆಯುವ ಬಗ್ಗೆ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾಸ್ಕೋಗೆ ಭದ್ರತೆಯನ್ನು ಖಾತ್ರಿಪಡಿಸುವಂತೆಯೂ ಬೇಡಿಕೆ ಇಡಲಾಗಿತ್ತು. ಆದರೆ ನಮ್ಮ ಬೇಡಿಕೆಗಳನ್ನು ನಿರ್ಲಕ್ಷಿಸಲಾಗಿದೆ- ವ್ಲಾಡಿಮಿರ್ ಪುಟಿನ್, ರಷ್ಯಾ ಅಧ್ಯಕ್ಷ

ಪುಟಿನ್
ಪುಟಿನ್

ಮಾಸ್ಕೋ (ರಷ್ಯಾ): ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಘೋಷಿಸಿದ್ದಾರೆ. ಈ ಮೂಲಕ ಅಲ್ಲಿನ ನಾಗರಿಕರನ್ನು ರಕ್ಷಿಸುತ್ತಿರುವುದಾಗಿ ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಗುರುವಾರ ದೂರದರ್ಶನದ ಮೂಲಕ ಈ ನಿರ್ಧಾರ ಪ್ರಕಟಿಸಿದ ಅವರು, 'ಉಕ್ರೇನ್‌ನಿಂದ ಬಂದಿರುವ ಬೆದರಿಕೆಯ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದೇವೆ. ರಷ್ಯಾಗೆ ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಗುರಿ ಇಲ್ಲ. ರಕ್ತಪಾತದ ಜವಾಬ್ದಾರಿಯು ಉಕ್ರೇನ್‌ 'ಆಡಳಿತ'ದ ಮೇಲಿರುತ್ತದೆ' ಎಂದು ಹೇಳಿದ್ದಾರೆ.

ಉಕ್ರೇನ್‌ ಗಡಿ ಭಾಗದಲ್ಲಿ ರಷ್ಯಾ ಸೇನೆ ಜಮಾವಣೆ- ಸ್ಯಾಟಲೈಟ್‌ ಫೋಟೋಗಳು

1. ಪುಟಿನ್‌ ಎಚ್ಚರಿಕೆ: ಇದೇ ವೇಳೆ ವಿಶ್ವದ ಇತರೆ ದೇಶಗಳಿಗೆ ಎಚ್ಚರಿಕೆ ನೀಡಿರುವ ಪುಟಿನ್, 'ರಷ್ಯಾದ ಕಾರ್ಯಾಚರಣೆಯ ವೇಳೆ ಮಧ್ಯಪ್ರವೇಶಿಸಿದರೆ ಈ ಹಿಂದೆಂದಿಗಿಂತಲೂ ಕಂಡರಿಯದ ಪರಿಣಾಮ ಎದುರಿಸಬೇಕಾಗುತ್ತದೆ' ಎಂದು ತಿಳಿಸಿದ್ದಾರೆ.

2. 'ನಮ್ಮ ಬೇಡಿಕೆಗಳ ನಿರ್ಲಕ್ಷ್ಯ': 'ಉಕ್ರೇನ್‌ ನ್ಯಾಟೋ ಸೇರುವುದನ್ನು ತಡೆಯುವ ಬಗ್ಗೆ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾಸ್ಕೋಗೆ ಭದ್ರತೆಯನ್ನು ಖಾತ್ರಿಪಡಿಸುವಂತೆಯೂ ಬೇಡಿಕೆ ಇಡಲಾಗಿತ್ತು. ಆದರೆ ನಮ್ಮ ಬೇಡಿಕೆಗಳನ್ನು ನಿರ್ಲಕ್ಷಿಸಲಾಗಿದೆ' ಎಂದು ಅವರು ಆರೋಪಿಸಿದ್ದಾರೆ.

3. 'ಶಸ್ತ್ರಾಸ್ತ ಒಪ್ಪಿಸಿ ಶರಣಾಗಿ': 'ರಷ್ಯಾದ ಈ ಕಾರ್ಯಾಚರಣೆಯು ಉಕ್ರೇನ್‌ ಅನ್ನು ಮಿಲಿಟರಿ ಮುಕ್ತ ಪ್ರದೇಶವನ್ನಾಗಿಸುತ್ತದೆ. ಶಸ್ತ್ರಾಸ್ತ್ರಗಳನ್ನು ಒಪ್ಪಿಸುವ ಉಕ್ರೇನ್‌ ರಕ್ಷಣಾ ಸಿಬ್ಬಂದಿಗೆ ಸೂಕ್ತ ರಕ್ಷಣೆ ಕೊಟ್ಟು ಯುದ್ಧವಲಯದಿಂದ ಕಳುಹಿಸಿಕೊಡಲಾಗುತ್ತದೆ' ಎಂದು ಅವರು ತಿಳಿಸಿದ್ದಾರೆ.

4. ಭಾರಿ ಪ್ರಮಾಣದ ಸ್ಫೋಟದ ಸದ್ದು: ಉಕ್ರೇನ್‌ನ ಮೇಲೆ ಆಕ್ರಮಣ ನಡೆಸಲು ಗಡಿಯ ಬಳಿ ರಷ್ಯಾ ಲಕ್ಷಾಂತರ ಸೈನಿಕರನ್ನು ನಿಯೋಜಿಸಿದೆ. ಮಿಲಿಟರಿ ಕಾರ್ಯಾಚರಣೆ ಆರಂಭಿಸುವಂತೆ ಘೋಷಿಸಿದ ಬೆನ್ನಲ್ಲೇ ಕೀವ್‌ ಪ್ರದೇಶದಲ್ಲಿ ಭಾರಿ ಪ್ರಮಾಣದ ಸ್ಫೋಟದ ಶಬ್ದ ಕೇಳಿಸಿದೆ ಎನ್ನಲಾಗಿದೆ.

5. ಅಮೆರಿಕ ಅಧ್ಯಕ್ಷರ ಆಕ್ರೋಶ: ರಷ್ಯಾದ ನಡೆಗೆ ಯುಎಸ್ ಅಧ್ಯಕ್ಷ ಜೋ ಬೈಡನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು 'ಅಪ್ರಚೋದಿತ ಮತ್ತು ನ್ಯಾಯಸಮ್ಮತವಲ್ಲದ ದಾಳಿ'ಯಾಗಿದೆ. ಉಕ್ರೇನ್ ಜನರ ಕ್ಷೇಮಕ್ಕಾಗಿ ಇಡೀ ಪ್ರಪಂಚವೇ ಪ್ರಾರ್ಥಿಸುತ್ತಿದೆ. ಪುಟಿನ್ ಪೂರ್ವಯೋಜಿತ ಯುದ್ಧವನ್ನು ಘೋಷಿಸಿದ್ದಾರೆ, ಇದರಿಂದ ಜೀವಹಾನಿ ಸಂಭವಿಸುವುದಲ್ಲದೆ ಜನರನ್ನು ಇನ್ನಷ್ಟು ಸಂಕಟಕ್ಕೆ ದೂಡುತ್ತದೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Last Updated :Feb 24, 2022, 11:27 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.