ETV Bharat / international

Russia Ukraine War: ಪಶ್ಚಿಮ ಉಕ್ರೇನ್‌ನಲ್ಲಿ ರಷ್ಯಾ ಭೀಕರ ವಾಯುದಾಳಿ.. 35 ಮಂದಿ ಬಲಿ

author img

By

Published : Mar 14, 2022, 7:07 AM IST

ಪಶ್ಚಿಮ ಉಕ್ರೇನ್‌ನಲ್ಲಿ ಮಿಲಿಟರಿ ನೆಲೆಯ ಮೇಲೆ ರಷ್ಯಾ ಭೀಕರ ವಾಯುದಾಳಿ ನಡೆಸಿದೆ. ಘಟನೆಯಲ್ಲಿ 35 ಜನರು ಸಾವನಪ್ಪಿದ್ದು, 134 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ರಕ್ಷಣಾ ಸಚಿವಾಲಯ ತಿಳಿಸಿದೆ.

Russia Ukraine War
ಸಾಂದರ್ಭಿಕ ಚಿತ್ರ

ಕೀವ್​( ಉಕ್ರೇನ್): ಯುದ್ಧದ 17ನೇ ದಿನವಾದ ಭಾನುವಾರ ಉಕ್ರೇನ್‌ ಮೇಲಿನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿರುವ ರಷ್ಯಾ ಸೇನೆ, ಭಾರೀ ಪ್ರಮಾಣದಲ್ಲಿ ವೈಮಾನಿಕ ದಾಳಿ ನಡೆಸಿದೆ. ಭಾನುವಾರ ಪಶ್ಚಿಮ ಉಕ್ರೇನ್‌ನಲ್ಲಿರುವ ಸೇನಾ ನೆಲೆಯ ಮೇಲೆ ದಾಳಿ ಮಾಡಿದೆ. ಉಕ್ರೇನ್ ಮತ್ತು ಅದರ ರಕ್ಷಣೆಯನ್ನು ಬೆಂಬಲಿಸುವ ನ್ಯಾಟೋ ದೇಶಗಳ ನಡುವಿನ ಸಹಕಾರಕ್ಕಾಗಿ ನಿರ್ಣಾಯಕ ಕೇಂದ್ರದ ಮೇಲೆ ದಾಳಿ ಮಾಡಿದ್ದು, 35 ಜನರು ಸಾವನ್ನಪ್ಪಿದ್ದಾರೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇದನ್ನು "ಕಪ್ಪು ದಿನ" ಎಂದು ಕರೆದಿದ್ದಾರೆ. ಸಾವು ನೋವುಗಳ ಜತೆಗೆ, ದಾಳಿಯಲ್ಲಿ 134 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ರಕ್ಷಣಾ ಸಚಿವಾಲಯ ತಿಳಿಸಿದೆ.

30ಕ್ಕೂ ಹೆಚ್ಚು ಕ್ರೂಸ್ ಕ್ಷಿಪಣಿಗಳಿಂದ ದಾಳಿ ನಡೆಸಲಾಗಿದೆ. ಎರಡು ವಾರಗಳ ಹಿಂದೆ ರಷ್ಯಾದ ಆಕ್ರಮಣದ ನಂತರ, ವಿಶ್ವಸಂಸ್ಥೆ ವರದಿ ಪ್ರಕಾರ ಕನಿಷ್ಠ 596 ನಾಗರಿಕರು ಸಾವನಪ್ಪಿದ್ದಾರೆ. 2ನೇ ವಿಶ್ವ ಯುದ್ದದ ನಂತರ ಯುರೋಪ್​​ನಲ್ಲಿ ಅತಿದೊಡ್ಡ ಭೂ ಸಂಘರ್ಷದ ಮಧ್ಯೆ ಲಕ್ಷಾಂತರ ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ವರದಿಯಾಗಿದೆ.

ಅನೇಕ ನಾಗರಿಕರು ಬ್ಯಾರೇಜ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ ಮತ್ತು ಕನಿಷ್ಠ 85 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್‌ನ ಪ್ರಾಸಿಕ್ಯೂಟರ್ ಜನರಲ್ ಕಚೇರಿ ಭಾನುವಾರ ತಿಳಿಸಿದೆ. ಭಾನುವಾರ ರಷ್ಯಾದ ಗುಂಡಿನ ದಾಳಿಗೆ ಅಮೆರಿಕದ ಪತ್ರಕರ್ತರೊಬ್ಬರು ಸಾವನ್ನಪ್ಪಿದ್ದು, ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನು ಸೋಮವಾರ ಚೀನಾದ ಅಧಿಕಾರಿಯನ್ನು ಭೇಟಿ ಮಾಡಲು ರೋಮ್‌ಗೆ ಕಳುಹಿಸುತ್ತಿದ್ದಾರೆ. ರೊಮೇನಿಯಾದಿಂದ ಉತ್ತರಕ್ಕೆ 150 ಕಿ.ಮೀ (94 ಮೈಲುಗಳು) ಮತ್ತು ನ್ಯಾಟೋ ಮಿತ್ರರಾಷ್ಟ್ರಗಳಾದ ಹಂಗೇರಿಯಿಂದ 250 ಕಿ.ಮೀ (155 ಮೈಲುಗಳು) ದೂರದಲ್ಲಿರುವ ಪಶ್ಚಿಮ ನಗರವಾದ ಇವಾನೊ - ಫ್ರಾಂಕಿವ್ಸ್ಕ್‌ನಲ್ಲಿರುವ ವಿಮಾನ ನಿಲ್ದಾಣದ ಮೇಲೆ ರಷ್ಯಾದ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ. ಪೋಲೆಂಡ್‌ಗೆ ನಿಯೋಜಿಸಲಾದ ಅಮೆರಿಕನ್ ಪಡೆಗಳ ಸಂಖ್ಯೆಯನ್ನು ಅಮೆರಿಕ ಹೆಚ್ಚಿಸಿದ್ದರೂ, ಪ್ರಸ್ತುತ ಉಕ್ರೇನ್‌ನಲ್ಲಿ ಯಾವುದೇ ಸಿಬ್ಬಂದಿಯಿಲ್ಲ ಎಂದು ನ್ಯಾಟೋ ಹೇಳಿದೆ.

ಉಕ್ರೇನಿಯನ್ ಮತ್ತು ಯುರೋಪಿಯನ್ ನಾಯಕರು ಯುದ್ಧದಲ್ಲಿ ಸಿಲುಕಿದ ಸುಮಾರು 125,000 ಜನರನ್ನು ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ಇದನ್ನೂ ಓದಿ: ಉಕ್ರೇನ್​ನಲ್ಲಿ ಅಮೆರಿಕದ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಬ್ರೆಂಟ್‌ ರೆನೌಡ್‌ ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.