ETV Bharat / international

ಹಿಂದೂ ಹುಡುಗಿಯ ಬಲವಂತ ಮತಾಂತರ ಆರೋಪ: ಲಂಡನ್‌ನ ಪಾಕ್ ಹೈಕಮಿಷನ್‌ ಎದುರು ಪ್ರತಿಭಟನೆ

author img

By

Published : Feb 18, 2020, 1:32 PM IST

ಪಾಕಿಸ್ತಾನದ ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಯು.ಕೆ.ನಲ್ಲಿ ವಾಸಿಸುತ್ತಿರುವ ಭಾರತೀಯ ಸಮುದಾಯದ ಸದಸ್ಯರು ಲಂಡನ್ನಿನ ಪಾಕಿಸ್ತಾನ ಹೈಕಮಿಷನ್​ನ ಎದುರು ಪ್ರತಿಭಟನೆ ಮುಂದುವರೆಸಿದ್ದಾರೆ.

Pak High Commission in London
ಲಂಡನ್‌ನ ಪಾಕ್ ಹೈಕಮಿಷನ್‌ನ ಹೊರಗೆ ಪ್ರತಿಭಟನೆ

ಲಂಡನ್ : ಪಾಕಿಸ್ತಾನದ ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಭಾರತೀಯ ಸಮುದಾಯದ ಸದಸ್ಯರು ಸೋಮವಾರ ಲಂಡನ್‌ನ ಪಾಕಿಸ್ತಾನ ಹೈಕಮಿಷನ್‌ ಎದುರು ಎರಡನೇ ದಿನದ ಪ್ರತಿಭಟನೆ ಮುಂದುವರೆಸಿದ್ದಾರೆ.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹುಡುಗಿಯರು ಅಪಹರಣಕ್ಕೆ ಒಳಗಾಗುತ್ತಿದ್ದು, ಅವರು ಕ್ರಿಶ್ಚಿಯನ್ನರು, ಸಿಖ್ಖರು ಮತ್ತು ಹಿಂದೂಗಳೇ ಆಗಿರಲಿ, ಅವರ ಹಕ್ಕುಗಳನ್ನು ರಕ್ಷಿಸಲು ನಾವು ಹೈಕಮಿಷನ್ ಮುಂದೆ ಬಂದಿದ್ದೇವೆ. ಬಲವಂತದ ಇಸ್ಲಾಮಿಕ್ ಮತಾಂತರಕ್ಕೆ ನಿಷೇಧ ಹೇರಬೇಕು ಎಂದು ನಾವು ಬಯಸುತ್ತೇವೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಜನವರಿ 15 ರಂದು ಸಿಂಧ್ ಪ್ರಾಂತ್ಯದ ಜಾಕೋಬಾದ್ ಜಿಲ್ಲೆಯ ಅಲಿ ರಝಾ ಎಂಬ ಮಧ್ಯ ವಯಸ್ಕ ವ್ಯಕ್ತಿ ಮೆಹಕ್ ಕುಮಾರಿಯನ್ನು ಅಪಹರಿಸಿದ್ದ. ತನ್ನನ್ನು ಇಸ್ಲಾಂ ಧರ್ಮಕ್ಕೆ ಒತ್ತಾಯಪೂರ್ವಕವಾಗಿ ಮತಾಂತರಿಸಲಾಗಿದೆ ಎಂದು ಬಾಲಕಿ ಪೊಲೀಸರಿಗೆ ಹೇಳಿಕೆ ನೀಡಿದ್ದಳು.

ಪ್ರಕರಣದ ಬಗ್ಗೆ ತೀರ್ಪು ಪ್ರಕಟಿಸದ ನ್ಯಾಯಾಲಯವು ಮೆಹಕ್ ಕುಮಾರಿಯನ್ನು ಸದ್ಯ ಸಿಂಧ್‌ನ ಲರ್ಕಾನಾ ಜಿಲ್ಲೆಯ ಸ್ಥಳೀಯ ದಾರ್-ಉಲ್-ಅಮಾನ್‌ ಎಂಬ ಮಹಿಳೆಯ ಶಿಬಿರಕ್ಕೆ ಹನ್ನೊಂದು ದಿನಗಳವರೆಗೆ ಕಳುಹಿಸಿದೆ.

ಹಿಂದೂ ಮತ್ತು ಕ್ರಿಶ್ಚಿಯನ್ ಹುಡುಗಿಯರನ್ನು ಅಪಹರಿಸಿ ಬಲವಂತವಾಗಿ ಮತಾಂತರಗೊಳಿಸಿದ ಘಟನೆಗಳು ಪಾಕಿಸ್ತಾನದಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದು ಜಾಗತಿಕವಾಗಿ ತೀವ್ರ ಕಳವಳಕ್ಕೆ ಕಾರಣವಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.