ETV Bharat / international

ನೆಟ್‌ಫ್ಲಿಕ್ಸ್​​​​​ನ ತೃತೀಯ ತ್ರೈಮಾಸಿಕದ ಗಳಿಕೆಯಲ್ಲಿ ಹೆಚ್ಚಳ..

author img

By

Published : Oct 21, 2021, 7:02 PM IST

ಇತ್ತೀಚಿನ ತ್ರೈಮಾಸಿಕದಲ್ಲಿ ನೆಟ್‌ಫ್ಲಿಕ್ಸ್‌ ಪ್ರತಿ ಷೇರಿಗೆ $ 1.45 ಬಿಲಿಯನ್ ಅಥವಾ ಪ್ರತಿ ಷೇರಿಗೆ $ 3.19 ಗಳಿಸಿದೆ. ಅದು ಒಂದು ವರ್ಷಕ್ಕೆ ಹೋಲಿಸಿದರೆ $ 789.9 ಮಿಲಿಯನ್ ಅಥವಾ ಪ್ರತಿ ಷೇರಿಗೆ $ 1.79 ಹೆಚ್ಚಾಗಿದೆ. ಆದಾಯವು $ 6.44 ಬಿಲಿಯನ್‌ನಿಂದ ಶೇ16ರಷ್ಟು ವೃದ್ಧಿಯಾಗಿ $ 7.48 ಶತಕೋಟಿಗೆ ಏರಿದೆ.

ನೆಟ್‌ಫ್ಲಿಕ್ಸ್ ನ ತೃತೀಯ ತ್ರೈಮಾಸಿಕದ ಗಳಿಕೆಯಲ್ಲಿ ಹೆಚ್ಚಳ
ನೆಟ್‌ಫ್ಲಿಕ್ಸ್ ನ ತೃತೀಯ ತ್ರೈಮಾಸಿಕದ ಗಳಿಕೆಯಲ್ಲಿ ಹೆಚ್ಚಳ

ನ್ಯೂಯಾರ್ಕ್: ನೆಟ್‌ಫ್ಲಿಕ್ಸ್ ಮಂಗಳವಾರ ತೃತೀಯ ತ್ರೈಮಾಸಿಕದ ಗಳಿಕೆಯನ್ನು ತೀವ್ರವಾಗಿ ಹೆಚ್ಚಿಸಿಕೊಂಡಿದೆ. ದಕ್ಷಿಣ ಕೊರಿಯಾದ "ಸ್ಕ್ವಿಡ್ ಗೇಮ್" ಸೇರಿದಂತೆ ಇತರ ಶೋ ಗಳಿಗೆ ಸಂಸ್ಥೆ ಈ ಮೂಲಕ ಧನ್ಯವಾದ ಅರ್ಪಿಸಿದೆ.

ಕಂಪನಿಯು ಉತ್ಪಾದನೆಯನ್ನು ಹೆಚ್ಚಿಸಿದೆ. ಹಾಗೆ ವರ್ಷದ ಮೊದಲಾರ್ಧದಲ್ಲಿ ಸಾಂಕ್ರಾಮಿಕ - ಪ್ರೇರಿತ ವಿಳಂಬದಿಂದ ಚೇತರಿಸಿಕೊಂಡಿದೆ. ಈ ಮೂಲಕ ಚಲನಚಿತ್ರಗಳು ಮತ್ತು ಟಿವಿಯನ್ನು ಮೀರಿ ಜನರು ಇದಕ್ಕೆ ವಾಲುತ್ತಿದ್ದಾರೆ. ಹಾಗೆ ಕೆಲವು ಹೊಸ ಮಾರುಕಟ್ಟೆಗಳಲ್ಲಿ ಪರೀಕ್ಷಿಸಲ್ಪಡುತ್ತಿರುವ ವಿಡಿಯೋ ಗೇಮ್‌ಗಳಂತಹ ಹೊಸ ಯೋಜನೆಗಳಿಗೆ ಧನಸಹಾಯ ನೀಡಲು ಯೋಜನೆ ರೂಪಿಸಿದೆ. ಈ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲು ಮುಂದಾಗಿದೆ.

ನೆಟ್‌ಫ್ಲಿಕ್ಸ್ ತನ್ನ ಅಂತಾರಾಷ್ಟ್ರೀಯ ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸುವತ್ತ ಗಮನ ಹರಿಸುತ್ತಿದೆ. ಉದಾಹರಣೆಗೆ, ಕೀನ್ಯಾದಲ್ಲಿ ಉಚಿತ ಮೊಬೈಲ್ ಯೋಜನೆ ಪ್ರಾರಂಭಿಸಿದೆ. ಇದು ದೇಶದಲ್ಲಿ ಹೆಚ್ಚಿನ ಜನರು ಪಾವತಿಸಿದ ಸದಸ್ಯತ್ವಕ್ಕಾಗಿ ಸೈನ್ ಅಪ್ ಮಾಡಲು ಕಾರಣವಾಗುತ್ತಿದೆ.

ನೆಟ್‌ಫ್ಲಿಕ್ಸ್ ಒಂದು ವರ್ಷದ ಹಿಂದಿನದಕ್ಕಿಂತ ಈಗ ಶೇ 9 ರಷ್ಟು ಹೆಚ್ಚಾಗಿದೆ, ಅಂದರೆ 213.6 ಮಿಲಿಯನ್‌ ಚಂದಾದಾರರನ್ನು ಪಡೆದುಕೊಂಡಿದೆ. ನೆಟ್‌ಫ್ಲಿಕ್ಸ್‌ನ ಚಂದಾದಾರರ ಬೆಳವಣಿಗೆ ಲ್ಯಾಟಿನ್ ಅಮೆರಿಕದಲ್ಲಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಇದಕ್ಕೆ ಕಾರಣ ಕಂಪನಿಯು ಬ್ರೆಜಿಲ್‌ನಲ್ಲಿ ಬೆಲೆಯನ್ನು ಹೆಚ್ಚಿಸಿದ್ದು. ಈ ಬಗ್ಗೆ ನೆಟ್‌ಫ್ಲಿಕ್ಸ್‌ನ ಮುಖ್ಯ ಹಣಕಾಸು ಅಧಿಕಾರಿ ಸ್ಪೆನ್ಸರ್ ನ್ಯೂಮನ್ ಅವರು ವಾಲ್ ಸ್ಟ್ರೀಟ್ ವಿಶ್ಲೇಷಕರೊಂದಿಗಿನ ಸಮ್ಮೇಳನದ ಸಮಯದಲ್ಲಿ ಹೇಳಿದ್ದಾರೆ.

ಇದು ಬೆಳವಣಿಗೆಯಲ್ಲಿ ಅಲ್ಪಾವಧಿಯ ಕುಸಿತವಾಗಿದೆ. ಆದರೆ, ನಮ್ಮ ವ್ಯಾಪಾರಕ್ಕೆ ಏನೂ ತೊಂದರೆ ಇಲ್ಲ. ನಾವು ಬೆಳೆಯುತ್ತಲೇ ಇದ್ದೇವೆ ಎಂದಿದ್ದಾರೆ. ಇತ್ತೀಚಿನ ತ್ರೈಮಾಸಿಕದಲ್ಲಿ ನೆಟ್‌ಫ್ಲಿಕ್ಸ್‌ ಪ್ರತಿ ಷೇರಿಗೆ $ 1.45 ಬಿಲಿಯನ್ ಗಳಿಸಿದೆ. ಈ ಮೂಲಕ ಆದಾಯವು $ 6.44 ಬಿಲಿಯನ್‌ನಿಂದ ಶೇ16ರಷ್ಟು ವೃದ್ಧಿಯಾಗಿದೆ. ಅಂದರೆ, $ 7.48 ಶತಕೋಟಿಗೆ ಏರಿದೆ.

ಪ್ರಸಕ್ತ ತ್ರೈಮಾಸಿಕದಲ್ಲಿ, ನೆಟ್‌ಫ್ಲಿಕ್ಸ್‌ 8.5 ಮಿಲಿಯನ್ ಚಂದಾದಾರರನ್ನು ತನ್ನತ್ತ ಸೆಳೆಯುವ ನಿರೀಕ್ಷೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.